Love Failure: ಬೇರೆ ಹುಡುಗಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡದ್ದಕ್ಕೆ ಪ್ರಿಯಕರನ ಖಾಸಗಿ ಅಂಗಕ್ಕೆ ಕತ್ತರಿ ಪ್ರಯೋಗಿಸಿದ ಪ್ರಿಯಕರೆ !
Love Failure: ಪ್ರೀತಿಯಲ್ಲಿ ಮೋಸ ಮಾಡೋರು ಇದ್ದಾರೆ, ಪ್ರೀತಿನ ತ್ಯಾಗ ಮಾಡೋರು ಇದ್ದಾರೆ, ಇನ್ನು ಕೆಲವರು ಸೇಡು ತೀರಿಸಿಕೊಳ್ಳುವವರು ಇದ್ದಾರೆ. ಇದಕ್ಕೆ ನಿದರ್ಶನ ಎಂಬಂತೆ ಇಲ್ಲೊಬ್ಬಳು ಪ್ರಿಯಕರನಿಗೆ ಬೇರೆ ಮದುವೆ ನಿಶ್ಚಯವಾಗಿದ್ದಕ್ಕೆ, ತನ್ನ ಪ್ರೀತಿಗೆ ಮೋಸ ಮಾಡಿದ (Love Failure) ಹಿನ್ನೆಲೆ ಕೋಪಗೊಂಡ ಪ್ರಿಯತಮೆ ಆತನ ಖಾಸಗಿ ಅಂಗವನ್ನೇ ಹರಿತವಾದ ಆಯುಧದಿಂದ ಕತ್ತರಿಸಿ ಹಾಕಿದ ಘಟನೆ ರಾಜಧಾನಿ ಪಾಟ್ನಾದಲ್ಲಿ ಬೆಳಕಿಗೆ ಬಂದಿದೆ.
ಮಾಹಿತಿ ಪ್ರಕಾರ, ಇಬ್ಬರ ನಡುವೆ ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಜಗಳ ನಡೆದಿದೆ. ಛತ್ತೀಸ್‌ಗಢದಲ್ಲಿ ಪ್ರಿಯಕರ ಸಿಆರ್ಪಿಎಫ್ದಲ್ಲಿ ಕೆಲಸ ಮಾಡುತ್ತಿದ್ದ. ಹುಡುಗಿ ಪಾಟ್ನಾದಲ್ಲಿ ಓದುತ್ತಿದ್ದಳು. ಪ್ರಿಯಕರನಿಗೆ ಕರೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಕರೆಸಿಕೊಂಡಿದ್ದಳು.
ಪ್ರಿಯಕರ ರಜೆ ಪಡೆದು ಛತ್ತೀಸ್ಗಢದಿಂದ ಓಡೋಡಿ ಪಾಟ್ನಾಗೆ ಬಂದಿದ್ದಾನೆ. ಈ ಹಿಂದೆ ಇಬ್ಬರು ರಹಸ್ಯವಾಗಿ ಮದುವೆಯಾಗಿದ್ದ ಎಕ್ಸಿಬಿಷನ್ ರೋಡ್ ಹೋಟೆಲ್‌ನಲ್ಲಿ ಬಂದು ಸೇರಿದ್ದರು. ಇದಕ್ಕೂ ಮುನ್ನ, ಜೂನ್ 23 ರಂದು ಪ್ರಿಯಕರನಿಗೆ ಬೇರೆಡೆ ಮದುವೆ ನಿಶ್ಚಯ ಆಗಿರುವುದು ಯುವತಿಗೆ ಗೊತ್ತಾಗಿದೆ. ಮದುವೆಗೆ ಹುಡುಗಿ ತೀವ್ರ ವಿರೋಧ ವ್ಯಕ್ತಪಡಿಸಿದ್ದಳು. ನನ್ನ ಬಿಟ್ಟು ಬೇರೆ ಯುವತಿ ಜೊತೆ ಮದುವೆ ಆಗುವುದಕ್ಕೆ ಸಾಧ್ಯ ಇಲ್ಲಾ ಎಂದು ಪ್ರಿಯಕರನ ಮೇಲೆ ಒತ್ತಡ ಹಾಕಿದ್ದಳು.
ಪ್ರಿಯಕರ ಎಲ್ಲ ವಿಷಯಗಳನ್ನೂ ಹೊಟೇಲ್‌ನಲ್ಲಿ ವಿವರಿಸುತ್ತಿದ್ದ. ಆದರೆ ಮದುವೆ ವಿಚಾರಕ್ಕೆ ಇಬ್ಬರಲ್ಲಿ ಮಾತಿಗೆ ಮಾತು ಬೆಳೆದು, ಪ್ರಿಯಕರ ಮಾತು ಕೇಳದೇ ಇದ್ದುದಕ್ಕೆ, ಬ್ಯಾಗ್‌ನಿಂದ ಹರಿತವಾದ ಆಯುಧ ತೆಗೆದು ಆತನ ಖಾಸಗಿ ಅಂಗವನ್ನೇ ಕತ್ತರಿಸಿ ಹಾಕಿದ್ದಾಳೆ. ನೋವಿನಿಂದ ಪ್ರಿಯಕರ ಜೋರಾಗಿ ಚೀರಾಡಿದ್ದಾನೆ. ಆತನ ಚೀರಾಟದ ಧ್ವನಿ ಕೇಳಿದ ಅಕ್ಕಪಕ್ಕದ ಜನರು ತಕ್ಷಣ ಯುವಕನನ್ನು ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಾಯಗೊಂಡ ಪ್ರೇಮಿ ಬಿಹಾರದ ಶಿವಾರ್ ನಿವಾಸಿ ಆಗಿದ್ದು, ಹುಡುಗಿ ಆತನೊಂದಿಗೆ 3 ವರ್ಷಗಳಿಂದ ಅಕ್ರಮ ಸಂಬಂಧ ಹೊಂದಿದ್ದಳಂತೆ. ಹುಡುಗನ ಕುಟುಂಬದ ಸಂಬಂಧಿಯೂ ಆಗಿದ್ದಳು. ಪಾಟ್ನಾದಲ್ಲಿ ಓದುತ್ತಿದ್ದಾಗ ಹೋಟೆಲ್‌ನಲ್ಲೇ ಮದುವೆಯಾಗಿದ್ದಳು. ಅಂದು ಹೋಟೆಲ್ ಸಿಬ್ಬಂದಿಗೂ ಸಿಹಿ ಹಂಚಿದ್ದರು. ಆದರೆ ಜೂನ್ 23 ರಂದು ಪ್ರಿಯಕರನ ಬೇರೆ ಹುಡುಗಿ ಜೊತೆಗೆ ಮದುವೆ ನಿಶ್ಚಯವಾಗಿದೆ ಎಂದು ತಿಳಿದು ಯುವಕನ ಖಾಸಗಿ ಅಂಗವನ್ನು ಕತ್ತರಿಸಿದ್ದಾಳೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸದ್ಯ ಯುವಕನ ಖಾಸಗಿ ಅಂಗದ ಶೇ 60 ರಷ್ಟು ಭಾಗ ತುಂಡಾಗಿದ್ದು, ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಸದ್ಯ ಪಾಟ್ನಾದ ಪಿಎಂಸಿಎಚ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಗಾಂಧಿ ಮೈದಾನ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಕೆಯನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ವೇಳೆ ಯುವತಿ, ತನ್ನ ಪ್ರಿಯಕರನಿಗೆ ಬೇರೆ ಯುವತಿಯೊಂದಿಗೆ ಮದುವೆ ಆಗುವುದು ನನಗೆ ಇಷ್ಟವಿರಲಿಲ್ಲ. ಅದಕ್ಕಾಗಿ ಈ ಕೃತ್ಯ ಎಸಗಿದೆ ಎಂದು ಪೊಲೀಸರ ಎದುರು ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ : ಉಚಿತ ಪ್ರಯಾಣದ ಖುಷಿಯಲ್ಲಿರೋ ಮಹಿಳೆಯರಿಗೆ ಇನ್ನೊಂದು ಬಿಗ್ ಗಿಫ್ಟ್