Textbook revision: ರಾಜ್ಯದಲ್ಲಿ ಪಠ್ಯ ಪುಸ್ತಕ ಖಚಿತ: ಬಿಜೆಪಿ ಸಿದ್ದಾಂತದ ಆ ಮೂರು ಅಧ್ಯಾಯಗಳು ಡಿಲೀಟ್ !
Karnataka news Education news Karnataka Congress government decide for school textbook revision and relook national education policy
Textbook revision: ರಾಜ್ಯದಲ್ಲಿ ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ(Textbook revision) ನಡೆಸಲು ಕರ್ನಾಟಕ ಸರ್ಕಾರ ಮುಂದಾಗಿದ್ದು, ಹಿಂದಿನ ಬಿಜೆಪಿ ಸರ್ಕಾರ ಪರಿಷ್ಕರಿಸಿದ್ದ 3 ಅಧ್ಯಾಯಗಳನ್ನು ಕೈ ಬಿಡಲು ಕಾಂಗ್ರೆಸ್ ಸರ್ಕಾರ ನಿರ್ಧರಿಸಿದೆ ಎಂದು ವರದಿಯಾಗಿದೆ.
ಈ ಬಾರಿಯ ಶಾಲಾ ಪಠ್ಯಪುಸ್ತಕಗಳಲ್ಲಿ ಆರ್ ಎಸ್ಎಸ್ ಸಂಸ್ಥಾಪಕ ಕೇಶವ್ ಬಲಿರಾಮ್ ಹೆಡಗೇವಾರ್, ಚಿಂತಕ ಚಕ್ರವರ್ತಿ ಸೂಲಿಬೆಲೆ ಮತ್ತು ವಿದ್ವಾಂಸ ಬನ್ನಂಜೆ ಗೋವಿಂದಾಚಾರ್ಯ ಅವರ ಪಠ್ಯಗಳೂ ಸೇರಿದಂತೆ ಹಲವು ಅಧ್ಯಾಯಗಳನ್ನು ಕೈಬಿಡಬೇಕೆಂದು ಶಿಕ್ಷಕರಿಗೆ ಸೂಚನೆ ನೀಡಲಾಗಿದೆ.
ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ನಿರ್ಧಾರಿಸಲಾಗಿದೆ ಎಂದು ವರದಿಯಾಗಿದೆ. ವಿಧಾನ ಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲೇ ಈ ವಿಚಾರವಾಗಿ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಣೆಯನ್ನು ಮಾಡಲಾಗಿತ್ತು. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮತ್ತೆ ಪಠ್ಯಪುಸ್ತಕ ಪರಿಷ್ಕರಣೆ ನಡೆಸಲು ಚಿಂತನೆ ನಡೆಸಲಾಗಿದೆ. ರಾಜಕೀಯ ಪಕ್ಷಗಳ ನಡುವೆ ಕೋಲಾಹಲಗಳಿಂದಾಗಿ, ಮಕ್ಕಳ ಶಿಕ್ಷಣದಲ್ಲಿ ಚೆಲ್ಲಾಟ ಆಡುವಂತಾಗಿದೆ ಅನ್ನೋದರಲ್ಲಿ ತಪ್ಪೇನಿಲ್ಲ.
ಇದನ್ನೂ ಓದಿ:ಕಲುಷಿತ ನೀರು ಸೇವಿಸಿ ಕೊಪ್ಪಳದಲ್ಲಿ ಮತ್ತೊಂದು ಬಾಲಕಿ ಬಲಿ
I’m impressed, I must say. Really rarely do I encounter a blog that’s each educative and entertaining, and let me let you know, you have hit the nail on the head. Your idea is outstanding; the issue is one thing that not enough individuals are talking intelligently about. I am very completely happy that I stumbled throughout this in my search for something regarding this.