Smile Training Center: ನಗೋದನ್ನ ಕಲಿಸೋದಕ್ಕೂ ಇದೆ ಸಂಸ್ಥೆ ; ತರಬೇತಿ ಫೀಸ್ ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!!
Training center Smile training center begin in Japan to teach Hollywood smile
Smile training center: ನಗುವುದನ್ನು ಯಾರೂ ಹೇಳಿಕೊಡಬೇಕಿಲ್ಲ. ಯಾರಾದರೂ ತಮಾಷೆ ವಿಚಾರ ಮಾತನಾಡಿದರೆ ನಗು ತಾನಾಗಿಯೇ ಬರುತ್ತದೆ. ನಗು-ಅಳು ಮನುಷ್ಯನಲ್ಲಾಗುವ ಸಹಜ ಪ್ರಕ್ರಿಯೆಗಳು. ಆದರೆ, ಜಪಾನ್’ನಲ್ಲಿ (Japan) ನಗುವುದನ್ನು ಕಲಿಸೋದಕ್ಕೂ ಸಂಸ್ಥೆ (Smile training center) ಇದೆ. ತರಬೇತಿ ಫೀಸ್ ಬೆಲೆ ಕೇಳಿದ್ರಂತೂ ತಲೆ ತಿರುಗುತ್ತೆ!!
ಕೊರೋನಾ ಸಮಯದಲ್ಲಿ ದೇಶ-ವಿದೇಶದಾದ್ಯಂತ ಭೀತಿ ಉಂಟಾಗಿತ್ತು. ಎಲ್ಲರೂ ಮುಖಕ್ಕೆ ಮಾಸ್ಕ್ ಧರಿಸಿಯೇ ಹೊರಗೆ ಕಾಲಿಡುತ್ತಿದ್ದರು. ಜಪಾನ್’ ನಲ್ಲೂ ಕೂಡ ಕೊರೋನಾ ಸಮಯದಲ್ಲಿ ಹಾಗೂ ಕೋವಿಡ್ ನಂತರವೂ ಕೆಲ ಸಮಯ ಮುಖಕ್ಕೆ ಮಾಸ್ಕ್ ಧರಿಸುತ್ತಿದ್ದರು. ಹಾಗಾಗಿ ಅಲ್ಲಿನ ಜನರು ನಗುವುದನ್ನೇ ಮರೆತಿದ್ದರು. ಪ್ರತಿದಿನ ಮುಖಕ್ಕೆ ಮಾಸ್ಕ್ ಅಂಟಿಕೊಂಡಿರುವಾಗ ಇನ್ನೊಬ್ಬರ ಮುಖ ನೋಡಿ ಅಥವಾ ಇನ್ನೇನೋ ತಮಾಷೆಗೆ ನಗುವ ಪ್ರಮೇಯ ಬರುತ್ತಿರಲಿಲ್ಲ.
ಈ ಹಿಂದೆ ಜಪಾನ್ ಜನರು ನಗುವುದನ್ನು ಮರೆತಿದ್ದಾರೆ ಎಂಬ ಸುದ್ದಿ ವೈರಲ್ ಆಗಿತ್ತು. ಈಗ ಇಲ್ಲಿನ ಜನರು ನಗುವುದನ್ನು ಕಲಿಯುತ್ತಿದ್ದಾರೆ. ನಗುವಿನಲ್ಲಿ ‘ಹಾಲಿವುಡ್ ಸ್ಮೈಲ್’ ಎಂಬ ಪ್ರಕಾರವನ್ನು ಕಲಿಯುತ್ತಿದ್ದಾರೆ. ಟೋಕಿಯೊದಲ್ಲಿನ ಕಲಾ ಶಾಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಒಂದು ಕೈಯಲ್ಲಿ ಕನ್ನಡಿ ಹಿಡಿದು ಇನ್ನೊಂದು ಕೈಯಲ್ಲಿ ತಮ್ಮ ಬೆರಳುಗಳಿಂದ ಬಾಯಿಯ ಬದಿಗಳನ್ನು ಅಗಲಿಸಿ ಹೇಗೆ ನಗಬೇಕೆಂದು ಅಭ್ಯಾಸ ಮಾಡುತ್ತಿದ್ದಾರೆ ಎನ್ನಲಾಗಿದೆ.
ಇವರಿಗೆ ಕೀಕೊ ಕವಾನೊ ಎಂಬವರು ನಗುವಿನ ತರಬೇತಿ ನೀಡುತ್ತಾರೆ.
ಕವಾನೊ ಅವರ ಕಂಪನಿ ‘ಎಗೊಯಿಕು’ ಅಂದ್ರೆ ನಗುವಿನ ಸಂಸ್ದೆ ಇದು ಹೆಚ್ಚು ಬೇಡಿಕೆ ಗಳಿಸಿದೆ. ನಗೋದನ್ನು ಕಲಿಯಲು ಸಾಕಷ್ಟು ಜನರು ಬರುತ್ತಾರೆ. ತರಬೇತಿ ಪಡೆಯಲು ಫೀಸ್ ಎಷ್ಟು ಗೊತ್ತಾ? ಒಂದು ಗಂಟೆಯ ಅವಧಿಗೆ 7,700 ಯೆನ್ (4,500 ರೂ.) ವೆಚ್ಚವಾಗುತ್ತದೆ. ಮಾಜಿ ರೇಡಿಯೋ ನಿರೂಪಕ ಜಪಾನ್ 2017 ರಲ್ಲಿ ನಗುವಿನ ತರಬೇತಿ ನೀಡಲು ಆರಂಭಿಸಿದ್ದಾರೆ. 23 ಜನರಿಗೆ ತರಬೇತಿ ನೀಡಿದ್ದಾರೆ.
ಇಲ್ಲಿನ ವಿದ್ಯಾರ್ಥಿನಿ ಹಿಮಾವರಿ ಯೋಶಿಡಾ (20 ವ) ಎಂಬಾಕೆ ತಮಗೆ ನಗುವಿನ ಟ್ರೇನಿಂಗ್ ಅಗತ್ಯವಿದೆ ಎಂದು ಹೇಳುತ್ತಾರೆ. “ಕರೊನಾ ಸಮಯದಲ್ಲಿ ನಾನು ನನ್ನ ಮುಖದ ಸ್ನಾಯುಗಳನ್ನು ಹೆಚ್ಚು ಬಳಸಿರಲಿಲ್ಲ, ಆದ್ದರಿಂದ ಇದು ಉತ್ತಮ ವ್ಯಾಯಾಮ” ಎಂದು ಯೋಶಿಡಾ ಹೇಳಿದರು.
ಇದನ್ನೂ ಓದಿ: Water Price Hike: ಗ್ಯಾರಂಟಿಗೆ ಎಳ್ಳು ನೀರು ಆದ ಬೆನ್ನಲ್ಲೇ ಬೀರಿಗೂ ಹೆಚ್ಚಿನ ಬಿಲ್ಲು, ಇದೀಗ ನೀರಿಗೂ ಟ್ಯಾಕ್ಸು ಹೆಚ್ಚಳ !