Karnataka Rain: ಜೂ.11ರಂದು ರಾಜ್ಯದ ದಕ್ಷಿಣ ಒಳನಾಡಿನ ಈ ಐದು ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆ! ಹವಾಮಾನ ಇಲಾಖೆ ಮುನ್ಸೂಚನೆ

Karnataka weather updates Karnataka rain heavy rainfall will occur in South interior Karnataka

Karnataka Rain: ಜೂನ್‌ 11ರಂದು ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ(Karnataka Rain) ಎಂದು ಹವಾಮಾನ ಇಲಾಖೆ ಇದೀಗ ಮುನ್ಸೂಚನೆ ನೀಡಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ವಿಜಯಪುರ, ಯಾದಗಿರಿ, ಬೆಂಗಳೂರು ಗ್ರಾಮಾಂತರ, ನಗರ, ಬೀದರ್‌, ಬೆಳಗಾವಿ, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಮಂಡ್ಯ, ಶಿವಮೊಗ್ಗ, ರಾಮನಗರ. ಚಿತ್ರದುರ್ಗ ಇಲ್ಲೆಲ್ಲ ಭಾರೀ ಮಳೆಯಾಗಲಿದೆ. ಬಳ್ಳಾರಿ, ಚಿಕ್ಕಬಳ್ಳಾಪುರ ಕೊಡಗು ಕೋಲಾರ, ತುಮಕೂರಿನಲ್ಲಿ ಅತ್ಯಧಿಕ ಮಳೆಯಾಗಲಿದೆ.

ಅರಬ್ಬಿ ಸಮುದ್ರದ ಆಗ್ನೇಯ ಭಾಗದಲ್ಲಿ ಇತ್ತೀಚೆಗೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣವಾಗಿ, ವಾಯುಭಾರ ಕುಸಿತವಾಗಿತ್ತು. ಇದೀಗ ಅದು ಇನ್ನಷ್ಟು ತೀವ್ರಗೊಂಡು ‘ಬಿಪರ್‌ಜಾಯ್’ ಚಂಡಮಾರುತವಾಗಿ ಬದಲಾಗಿದೆ.
ಕರಾವಳಿಯಲ್ಲಿ ಮುಂದಿನ 24ಗಂಟೆಗಳಲ್ಲಿ ಗಂಟೆಗೆ 35-45 ಕಿ.ಮೀ. ನಿಂದ 55 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಬೆಂಗಳೂರಿನಲ್ಲಿ ಸಂಜೆ ಸಮಯದಲ್ಲಿ ಮಳೆಯಾಗುವ ಸಾಧ್ಯತೆ ಇದ್ದು, ಅಲ್ಲಿಯವರೆಗೆ ಮೋಡ ಕವಿದ ವಾತಾವರಣವಿರಲಿದೆ.

ಜೂನ್‌ 11ರವರೆಗೆ ಕರಾವಳಿ ಒಳನಾಡಿನ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಜೂನ್‌.10ಮತ್ತು12ರಂದು ಕೊಡಗು, ಕೋಲಾರ, ತುಮಕೂರು, ಬಳ್ಳಾರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವ್ಯಾಪಕ ಮಳೆಯಾಗಲಿದೆ. ಅಂದ ಹಾಗೆ ಈಗಾಗಲೇ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಿಸಲಾಗಿದೆ.

ಇದನ್ನೂ ಓದಿ: Bhumika vasist: ಬಟ್ಟೆಬಿಚ್ಚಿ, ಆ ಒಂದು ಕೆಲಸದಿಂದ ಸಾಲ ತೀರಿಸಲು ಮುಂದಾಗಿದ್ದೆ!! ಆದರೆ ಅಷ್ಟರಲ್ಲಿ ವಿಡಿಯೋ ಲೀಕ್ ಆಗಿ ಡಿಪ್ರೆಷನ್ ಹೋದೆ- ಭೂಮಿಕಾ ವಸಿಷ್ಟ್!

Leave A Reply

Your email address will not be published.