Water Price Hike: ಗ್ಯಾರಂಟಿಗೆ ಎಳ್ಳು ನೀರು ಆದ ಬೆನ್ನಲ್ಲೇ ಬೀರಿಗೂ ಹೆಚ್ಚಿನ ಬಿಲ್ಲು, ಇದೀಗ ನೀರಿಗೂ ಟ್ಯಾಕ್ಸು ಹೆಚ್ಚಳ !

Karnataka latest news Decision soon on revising water tariff in Bengaluru D K Shivakumar hints hike in water bill

Water Price Hike: ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿಗಳನ್ನು ಜಾರಿಗೆ ತರುವುದಾಗಿ ಘೋಷಿಸಿತ್ತು. ಅಂತೆಯೇ ಕೆಲವು ಗ್ಯಾರಂಟಿಗಳನ್ನು ಜಾರಿಗೊಳಿಸಿದೆ. ಜೊತೆಗೆ ಜನರಿಗೆ ಶಾಕಿಂಗ್ ನ್ಯೂಸ್ ಕೂಡ ಕೊಟ್ಟಿದೆ. ಈಗಾಗಲೇ ಬಿಯರ್ ಬೆಲೆ ಹೆಚ್ಚಿಸಿದ ಸರ್ಕಾರ ಇದೀಗ ನೀರಿನ ಶುಲ್ಕವನ್ನೂ ಹೆಚ್ಚಿಸಲು (Water Price Hike) ಯೋಜನೆ ರೂಪಿಸಿದೆ.

 

ಈವರೆಗೂ ನೀರಿನ ಶುಲ್ಕ ಹೆಚ್ಚಳವಾಗಿಲ್ಲ. ಇದೀಗ
ರಾಜಧಾನಿಯಲ್ಲಿ 10 ವರ್ಷ ಬಳಿಕ ನೀರಿನ ದರ ಹೆಚ್ಚಳವಾಗಲಿದೆ ಎನ್ನಲಾಗಿದೆ. ಗ್ಯಾರಂಟಿ ಜಾರಿಯಾದರೂ ಜನರ ಅಗತ್ಯ ವಸ್ತುಗಳ ಬೆಲೆ ಹೆಚ್ಚಳವಾಗುತ್ತಿದೆ.

ಇನ್ನು ನೀರಿನ ಶುಲ್ಕ ಹೆಚ್ಚಳದ ಬಗ್ಗೆ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (d k shivkumar) “ 2014 ರಿಂದ ಇಲ್ಲಿವರೆಗೆ ನೀರು ಬಳಕೆ ಶುಲ್ಕ ಹೆಚ್ಚಳ ಮಾಡಿಲ್ಲ. ಜಲಮಂಡಳಿಯ ಆದಾಯ ತುಂಬಾ ಕಡಿಮೆಯಾಗಿದೆ. ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಹಾಗಾಗಿ ನೀರಿನ ಶುಲ್ಕ ಹೆಚ್ಚಳಕ್ಕೆ ತೀರ್ಮಾನ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ: Zameer Ahmed Khan: ಕಾಲಮಿತಿಯೊಳಗೆ ವಸತಿ ಯೋಜನೆ ಜಾರಿಗೆ ಕ್ರಮ ಕೈಗೊಳ್ಳಬೇಕು – ಜಮೀರ್ ಅಹ್ಮದ್ ಸೂಚನೆ!

Leave A Reply

Your email address will not be published.