Dharmastala Sowjanya murder case: ಧರ್ಮಸ್ಥಳ ಸೌಜನ್ಯ ಕೊಲೆ ಪ್ರಕರಣ: ಜೂನ್ 16ರಂದು CBI ಕೋರ್ಟಿನಿಂದ ತೀರ್ಪು!!
Belthangady crime news Dharmastala Sowjanya murder case verdict by CBI special court on June 16
Dharmastala Sowjanya murder case: ಸುಮಾರು 10ವರುಷಗಳ ರಾಷ್ಟ್ರ ಮಟ್ಟದಲ್ಲಿ ಬಹಳ ಸುದ್ದಿಮಾಡಿ ಇಡೀ ದೇಶವೇ ದಕ್ಷಿಣ ಕನ್ನಡ ಜಿಲ್ಲೆಯ(Dakshina kannada) ಕುಗ್ರಾಮದತ್ತ ತಿರುಗಿನೋಡುವಂತೆ ಮಾಡಿದ್ದ ಉಜಿರೆ ಎಸ್ ಡಿ ಎಂ ಕಾಲೇಜು(Ujire SDM collage) ವಿದ್ಯಾರ್ಥಿನಿ ಸೌಜನ್ಯಳ ಅತ್ಯಾಚಾರ(Sowjanya rape case) ಹಾಗೂ ಕೊಲೆ ಪ್ರಕರಣದ ತೀರ್ಪು ಇದೀಗ ಬರೋಬ್ಬರಿ 11 ವರ್ಷಗಳ ಬಳಿಕ ಇದೇ ಜೂನ್ 16ರಂದು ಪ್ರಕಟಗೊಳ್ಳಲಿದೆ.
ಹೌದು, ಧರ್ಮಸ್ಥಳ(Dharmastala) ಗ್ರಾಮದ ಪಾಂಗಾಳ(Pangala) ನಿವಾಸಿ ಚಂದಪ್ಪ ಗೌಡ(Chandapp gowda) ಮತ್ತು ಕುಸುಮಾವತಿ(Kusumavatil ದಂಪತಿ ಪುತ್ರಿ ಸೌಜನ್ಯ ಕೊಲೆ ಪ್ರಕರಣದ (Dharmastala Sowjanya murder case) ತೀರ್ಪು ಅನ್ನು ಸಿಬಿಐ ವಿಶೇಷ ನ್ಯಾಯಾಲಯ ಜೂನ್ 16ರಂದು ಪ್ರಕಟಿಸಲಿದೆ.
ಅಂದಹಾಗೆ ಉಜಿರೆಯ ಎಸ್‌ಡಿಎಂ ಕಾಲೇಜು ವಿದ್ಯಾರ್ಥಿನಿಯಾಗಿದ್ದ ಸೌಜನ್ಯ ಅವರು 2012ರ ಅಕ್ಟೋಬರ್ 9ರಂದು ಸಂಜೆ ಕಾಲೇಜಿನಿಂದ ಮನೆಗೆ ಹೋಗುವಾಗ ನಾಪತ್ತೆಯಾಗಿದ್ದರು. ಮರು ದಿನ ರಾತ್ರಿ ಧರ್ಮಸ್ಥಳದ ಮಣ್ಣಸಂಕ ಬಳಿ ವಿದ್ಯಾರ್ಥಿನಿಯ ಶವ ಪತ್ತೆಯಾಗಿ, ಬಳಿಕ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಾಗಿತ್ತು.
ಅಲ್ಲದೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಕಳ(Karkala) ತಾಲ್ಲೂಕಿನ ಕುಕ್ಕುಂದೂರು(Kukkundur) ಗ್ರಾಮದ ನಿವಾಸಿ ಸಂತೋಷ್ ರಾವ್(Santosh raou) ಅವರನ್ನು ಅರೋಪಿಯೆಂದು ಶಂಕಿಸಿ ಬಂದಿಸಲಾಗಿತ್ತು. ಧರ್ಮಸ್ಥಳದ ಬಾಹುಬಲಿ ಬೆಟ್ಟದ ಬಳಿ ಸಾರ್ವಜನಿಕರ ಕೈಗೆ ಸಿಕ್ಕಿಬಿದ್ದಿದ್ದ ಈತನನ್ನು ಬಳಿಕ ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿತ್ತು.
ನಂತರ ಪ್ರಕರಣವನ್ನು ಸಿಐಡಿಗೆ(CID) ವಹಿಸಲಾಗಿತ್ತು. ಆದರೆ ಸಂತೋಷ್ ರಾವ್ ಸುಮಾರು ಆರು ಬಾರಿ ಸಿಬಿಐ ನ್ಯಾಯಾಲಯಕ್ಕೆ ಹಾಜರಾಗದೆ, ತಲೆ ಮರೆಸಿಕೊಂಡಿದ್ದ. ನಂತರದಲ್ಲಿ ಸುಮಾರು ಒಂದು ವರುಷಗಳ ಬಳಿಕ ಸ್ಥಳೀಯರಿಂದ ತೀವ್ರ ಸ್ವರೂಪ ಪಡೆದುಕೊಂಡ ಈ ಪ್ರಕರಣ CBI ಮೆಟ್ಟಿಲೇರಿತ್ತು.
ಈ ನಡುವೆ ಧರ್ಮಸ್ಥಳ ವೀರೇಂದ್ರ ಹೆಗ್ಗಡೆ ಅವರ ಕಿರಿಯ ಸಹೋದರ ಹರ್ಷೇಂದ್ರ ಕುಮಾರ್(Harshendra kumar) ಅವರ ಪುತ್ರ ನಿಶ್ಚಲ್ ಜೈನ್(Nishal jain) ಸೇರಿದಂತೆ ಧರ್ಮಸ್ಥಳದ ನಾಲ್ವರು ಯುವಕರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂದು ಸ್ಥಳೀಯ ಜನರು ಮತ್ತು ಸಂತ್ರಸ್ತೆಯ ಕುಟುಂಬದವರು ಆರೋಪಿಸಿದ್ದರು. ಧೀರಜ್ ಕೆಲ್ಲ, ಉದಯ್ ಜೈನ್ ಮತ್ತು ಮಲ್ಲಿಕ್ ಜೈನ್ ವಿರುದ್ಧ ಆರೋಪಿಗಳಾಗಿದ್ದರು.
ಸಿಬಿಐ ಕೆಲ್ಲ-ಜೈನ್ ಮೂವರನ್ನು ವಿಚಾರಣೆ ನಡೆಸಿತ್ತು. ಹರ್ಷೇಂದ್ರ ಕುಮಾರ್ ಅವರು ಸಿಬಿಐ ಮುಂದೆ ಹಾಜರಾಗಿ, ಅತ್ಯಾಚಾರ ಮತ್ತು ಕೊಲೆ ನಡೆದಾಗ ಅವರು ದೇಶದಲ್ಲಿ ಇರಲಿಲ್ಲ ಎಂದು ತೋರಿಸಲು ಅಮೆರಿಕದಲ್ಲಿ ತನ್ನ ಮಗನ (ನಿಶ್ಚಲ್ ಜೈನ್) ಪಾಸ್‌ಪೋರ್ಟ್, ವೀಸಾ ಮತ್ತು ಬ್ಯಾಂಕ್ ವಹಿವಾಟು ಸೇರಿದಂತೆ ದಾಖಲೆಗಳನ್ನು ಹಾಜರುಪಡಿಸಿದ್ದರು. ಹೀಗಾಗಿ ಸಿಐಡಿ ಅಧಿಕಾರಿಗಳು ಸಾಕ್ಷ್ಯಾಧಾರಗಳಲ್ಲಿ ಅರ್ಹತೆ ಕಂಡು ನಿಶ್ಚಲ್‌ಗೆ ಕ್ಲೀನ್ ಚಿಟ್ ನೀಡಿದ್ದರು.
2016ರಲ್ಲಿ ತನಿಖೆ ಪೂರ್ಣಗೊಳಿಸಿದ ಸಿಬಿಐ ಆರೋಪ ಪಟ್ಟಿ ಸಲ್ಲಿಸಿತ್ತು. ಆ ಆರೋಪ ಪಟ್ಟಿ ಸೂಕ್ತವಾಗಿಲ್ಲ ಎಂದು ಆರೋಪಿಸಿದ್ದ ಸೌಜನ್ಯಾ ತಂದೆ, ಹೆಚ್ಚಿನ ತನಿಖೆಗೆ ಕೋರಿದ್ದರು. ಆದರೀಗ ಸುಮಾರು 11 ವರುಷಗಳ ಬಳಿಕ ಇದೇ ಜೂನ್ 16ರಂದು ಈ ಪ್ರಕರಣದ ಕುರಿತ ತೀರ್ಪನ್ನು ಸಿಬಿಐ ವಿಶೇಷ ನ್ಯಾಯಾಲಯವು ಪ್ರಕಟಿಸಲಿದೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ: Hyderabad : 16ರ ಮಗಳಿಗೆ ಹಾರ್ಮೋನ್ ಮಾತ್ರೆ ನೀಡಿ ಹಿಂಸಿಸುತ್ತಿರೋ ತಾಯಿ ! ಕಾರಣ ಕೇಳಿದ್ರೆ ಶಾಕ್ ಆಗ್ತೀರಾ!!