Home News Sanjay Raut: ಸಂದರ್ಶನದ ವೇಳೆ ಮೈಕ್ ಮೇಲೆ ಗಂಟಲಾಳದಿಂದ ಕ್ಯಾಕರಿಸಿ ಉಗಿದ ಸಂಜಯ್ ರಾವತ್: ಏನಿದು...

Sanjay Raut: ಸಂದರ್ಶನದ ವೇಳೆ ಮೈಕ್ ಮೇಲೆ ಗಂಟಲಾಳದಿಂದ ಕ್ಯಾಕರಿಸಿ ಉಗಿದ ಸಂಜಯ್ ರಾವತ್: ಏನಿದು ಎಂಜಲು – ಉಚ್ಚೆ ವಿವಾದ ?

Sanjay Raut
Image source: Kannada duniya

Hindu neighbor gifts plot of land

Hindu neighbour gifts land to Muslim journalist

Sanjay Raut: ಸಂಜಯ್ ರಾವತ್ (Sanjay Raut) ರಾಜಕೀಯ ಪಕ್ಷವಾದ ಶಿವಸೇನೆಯ ಹಿರಿಯ ನಾಯಕ. ಅವರು ಸಂಸತ್ತಿನ ಮೇಲ್ಮನೆಯಾದ ರಾಜ್ಯಸಭೆಯಲ್ಲಿ ಮಹಾರಾಷ್ಟ್ರವನ್ನು ಪ್ರತಿನಿಧಿಸುವ ಸಂಸದರಾಗಿದ್ದಾರೆ. ಶಿವಸೇನಾ ಪಕ್ಷದ ನಾಯಕ ಉದ್ಧವ್ ಠಾಕ್ರೆ ಅವರು ಪ್ರಕಟಿಸುವ ಮರಾಠಿ ಪತ್ರಿಕೆ ಸಾಮ್ನಾದ ಕಾರ್ಯನಿರ್ವಾಹಕ ಸಂಪಾದಕರಾಗಿಯೂ ರಾವತ್ ಕಾರ್ಯನಿರ್ವಹಿಸುತ್ತಿದ್ದಾರೆ.

ಇದೀಗ ಸಂಸದ ಸಂಜಯ್ ರಾವುತ್ ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಕ್ಷದ ಅಜಿತ್ ಪವಾರ್ ನಡುವೆ ಶನಿವಾರ ವಾಗ್ವಾದ ನಡೆದಿದ್ದು, ಉಗುಳುವ ಗಲಾಟೆಯ ನಡುವೆ ಇಬ್ಬರೂ ನಾಯಕರು ಪರೋಕ್ಷವಾಗಿ ಪರಸ್ಪರ ದಾಳಿ ನಡೆಸಿದ್ದಾರೆ.

ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಉದ್ಧವ್ ಠಾಕ್ರೆ ಅವರನ್ನು ಗುರಿಯಾಗಿಸಿ ಶಿವಸೇನಾ ಸಂಸದ ಶ್ರೀಕಾಂತ್ ಶಿಂಧೆ ಅವರ ಗೇಲಿ ಕುರಿತು ವರದಿಗಾರರು ಪ್ರತಿಕ್ರಿಯೆ ಕೇಳಿದಾಗ ರಾವತ್ ಅವರು ಕ್ಯಾಮೆರಾಗಳ ಮುಂದೆ ನೆಲದ ಮೇಲೆ ಉಗುಳುವುದು ಪ್ರಚೋದಕವಾಗಿದೆ.

ಶನಿವಾರ ರಾವುತ್ ಅವರು ಉಗುಳುವ ಕ್ರಿಯೆಯು ಆಕಸ್ಮಿಕ ಮತ್ತು ಉದ್ದೇಶಪೂರ್ವಕವಲ್ಲ, ಏಕೆಂದರೆ ತನಗೆ ಹಲ್ಲುಗಳ ಸಮಸ್ಯೆ ಇದೆ ಎಂದು ಹೇಳಿದ್ದಾರೆ.

ಜನಪ್ರತಿನಿಧಿಯೊಬ್ಬರು ಈ ರೀತಿಯ ವರ್ತನೆಗಳನ್ನು ತೋರುವುದು ಉಚಿತವಲ್ಲ ಎಂದು ವಿರೋಧ ಪಕ್ಷದ ನಾಯಕ ಅಜಿತ್ ಪವಾರ್ ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ರೌತ್, “ಅಣೆಕಟ್ಟೆಯಲ್ಲಿ ಮೂತ್ರವಿಸರ್ಜನೆ ಮಾಡುವುದಕ್ಕಿಂತ ಉಗುಳುವುದು ವಾಸಿ,” ಎಂದು ಭಂಡತನ ಮೆರೆದಿದ್ದರು. ರೌತ್‌ರ ಈ ವರ್ತನೆಗೆ ಪಕ್ಷಾತೀತವಾಗಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

ಇಷ್ಟೆಲ್ಲಾ ಆದರೂ ಸಹ, “ಉಗುಳುವುದರ ಮೇಲೆ ಎಲ್ಲಾದರೂ ನಿಷೇಧ ಹೇರಿದ್ದಾರಾ?” ಎಂದು ಮತ್ತೆ ತಮ್ಮ ನಡೆಯನ್ನು ಸಮರ್ಥನೆ ಮಾಡಿಕೊಂಡಿದ್ದರು ರೌತ್.

ಈ ಮೊದಲು, ಮಹಾರಾಷ್ಟ್ರವು ಸಂಸ್ಕೃತಿ ಪರಂಪರೆಗಳನ್ನು ಹೊಂದಿದೆ. ಹಾಗೂ ಎಲ್ಲಾ ನಾಯಕರು ಇದನ್ನು ಪಾಲಿಸುತ್ತಾರೆ ಎಂದು ಭಾವಿಸಿದ್ದೇನೆ,” ಎಂದು ಅಜಿತ್ ಪವಾರ್ ತಿಳಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ರೌತ್, “ಇದೇ ಅಜಿತ್ ಪವಾರ್ ಅಣೆಕಟ್ಟೆಗಳಲ್ಲಿ ನೀರಿಲ್ಲ ಎಂದು ಕೇಳಿದ್ದಕ್ಕೆ ನಾನೇನು ಅಲ್ಲಿಗೆ ಹೋಗಿ ಮೂತ್ರವಿಸರ್ಜನೆ ಮಾಡಿ ನೀರು ತುಂಬಲೇ ಎಂದ ಹೇಳಿದ್ದಕ್ಕಿಂತ ಇದು ವಾಸಿ,” ಎಂದಿದ್ದರು.

ಒಟ್ಟಿನಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ಏಕ್‌ನಾಥ್ ಶಿಂಧೆರ ಶಿವಸೇನಾ ಬಣದ ಸರ್ಕಾರ ರಚನೆಯಾದ ದಿನದಿಂದ ಸರ್ಕಾರದ ವಿರುದ್ಧ ಟೀಕಿಸುವ ಭರದಲ್ಲಿ ಸಂಜಯ್ ರೌತ್ ತೀರಾ ಕೆಳಮಟ್ಟದ ಭಾಷಾ ಪ್ರಯೋಗ ಮಾಡುತ್ತಿದ್ದಾರೆ ಎಂದು ವ್ಯಾಪಕವಾದ ಟೀಕೆಗಳು ಹರಿದು ಬಂದಿವೆ.

ಇದನ್ನೂ ಓದಿ: Government scheme: ರೈತರಿಗೆ 10,000 ರೂಪಾಯಿ ನೀಡಲಿದೆ ಈ ಹೊಸ ಯೋಜನೆ, ತಕ್ಷಣ ಇದರ ಲಾಭ ಪಡೆದುಕೊಳ್ಳಿ !