APL-BPL Card: ನಿಮಗೆ ಕೂಡಾ BPL ಕಾರ್ಡ್ ಬೇಕಾ, ನೀವು ಕೂಡಾ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರೇ, ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್ !

APL-BPL ration card eligibility details in kannada

APL-BPL Card: ರಾಜ್ಯದಲ್ಲಿ ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಘೋಷಿಸಿದಂತೆ ಕೆಲವು ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿದೆ. ಗ್ಯಾರಂಟಿಗಳಲ್ಲಿ ಒಂದಾದ 10 ಕೆಜಿ ಆಹಾರ ಧಾನ್ಯವನ್ನು ನೀಡುವುದಾಗಿ ಕಾಂಗ್ರೇಸ್ ಸರ್ಕಾರ ತಿಳಿಸಿದೆ. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ (bpl), ಅಂತ್ಯೋದಯ ಪಡಿತರ ಚೀಟಿ(APL-BPL Card) ಹೊಂದಿರುವ ಕುಟುಂಬದ ಪ್ರತಿ ಸದಸ್ಯರಿಗೂ 10 ಕೆಜಿ ಆಹಾರ ಧಾನ್ಯ ವಿತರಿಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದು, ಅಕ್ಕಿ ವಿತರಣೆ ಜು.1 ರಿಂದ ಜಾರಿಯಾಗಲಿದೆ ಎಂದಿದ್ದಾರೆ.

 

ಈ ಹಿನ್ನೆಲೆ ರಾಜ್ಯದ ಜನತೆ ರೇಷನ್ ಕಾರ್ಡ್ ಮಾಡಿಸಲು ಮುನ್ನುಗ್ಗುತ್ತಿದ್ದಾರೆ. ಅದರಲ್ಲೂ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ನಿಮಗೆ ಕೂಡಾ BPL ಕಾರ್ಡ್ (APL-BPL Card) ಬೇಕಾದರೆ ಹಾಗೂ ನೀವು ಕೂಡಾ ಬಿಪಿಎಲ್ ಕಾರ್ಡ್ ಪಡೆಯಲು ಅರ್ಹರೇ ಎಂಬುದನ್ನು ತಿಳಿಯಬಹುದು. ಇದರ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ.

ಬಿಪಿಎಲ್‌ ಕಾರ್ಡ್ ಬಡವರಿಗೆ ವಿತರಿಸಲಾಗುತ್ತದೆ. ಈ ಕಾರ್ಡ್ ವಿತರಣೆಗೆ ಕೆಲವು ಮಾನದಂಡಗಳು ಇವೆ. ಅದರ ಆಧಾರದ ಮೇಲೆ, ಆದಾಯ ಮತ್ತು ಮಾಡುತ್ತಿರುವ ಉದ್ಯೋಗದ ಮೇಲೆ ಕಾರ್ಡ್‌ ವಿತರಿಸಲಾಗುತ್ತದೆ. ನಿಮಗೂ ಬಿಪಿಎಲ್‌ ಕಾರ್ಡ್‌ ಬೇಕಾದರೆ ಅದನ್ನು
ಅರ್ಹತೆ ಏನಿರಬೇಕು, ಏನಿರಬಾರದು ಎಂಬುದರ ವಿವರ ಇಲ್ಲಿದೆ.

ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು?

• ಕರ್ನಾಟಕದ ನಿವಾಸಿ ಆಗಿರಬೇಕು.
• ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರಬೇಕು.
• ನಗರ, ಪಟ್ಟಣ ಪ್ರದೇಶದಲ್ಲಿ ವಾರ್ಷಿಕ 17,000 ರೂಪಾಯಿಗಿಂತೂ ಕಡಿಮೆ ಆದಾಯ ಇರಬೇಕು.
• ಅಭ್ಯರ್ಥಿಯು ಆದಾಯ ತೆರಿಗೆ ಪಾವತಿದಾರರಾಗಿರಬಾರದು.

ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರಿಗೆ ಅರ್ಹತೆ ಇಲ್ಲ?

• ಸಾರ್ವಜನಿಕ ವಲಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಉದ್ಯೋಗಿಗಳು, ಸರ್ಕಾರಿ ನೌಕರರು ಅರ್ಜಿ ಸಲ್ಲಿಸುವಂತಿಲ್ಲ.
• ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳ ಉದ್ಯೋಗಿಗಳು, ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳು ಅರ್ಜಿ ಸಲ್ಲಿಸಲು ಅರ್ಹರಲ್ಲ.
• ಆಸ್ಪತ್ರೆಗಳಲ್ಲಿನ ವೈದ್ಯರು, ವಕೀಲರು ಮತ್ತು ಲೆಕ್ಕಪರಿಶೋಧಕರು ಅರ್ಜಿ ಸಲ್ಲಿಸುವಂತಿಲ್ಲ
• ಮೂರು ಹೆಕ್ಟೇರ್ (7.5 ಎಕರೆ) ಭೂಮಿ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ.
• ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ನೌಕರರಿಗೂ ಕಾರ್ಡ್‌ ಸಿಗುವುದಿಲ್ಲ.
• ಒಂದು ವಾಹನ ಹೊರತುಪಡಿಸಿ 100 ಸಿಸಿ ಅಧಿಕ ಸಿಸಿ ಇರುವ ವಾಹನ ಹೊಂದಿರಬಾರದು.
• ಅಧಿಸೂಚಿತ ಗುತ್ತಿಗೆದಾರರು, ಎಪಿಎಂಸಿ ವ್ಯಾಪಾರಿಗಳು ಅಥವಾ ಕಮಿಷನ್ ಏಜೆಂಟ್‌ಗಳಿಗೂ ಕಾರ್ಡ್‌ ಲಭ್ಯವಾಗುವುದಿಲ್ಲ.
• ತಿಂಗಳಿಗೆ ರೂ 450 ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವವರೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಲ್ಲ.
• ಬಹು-ರಾಷ್ಟ್ರೀಯ ಕಂಪನಿಗಳು ಅಥವಾ ಕೈಗಾರಿಕೆಗಳ ಉದ್ಯೋಗಿಗಳಿಗೂ ಈ ಕಾರ್ಡ್‌ ಲಭ್ಯವಾಗುವುದಿಲ್ಲ.

ನೀವು ಎಪಿಎಲ್ ಕಾರ್ಡ್ ಪಡೆಯಲಿದ್ದರೆ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ. ಈ ಕಾರ್ಡ್ ಪಡೆಯಲು ಯಾರೆಲ್ಲಾ ಅರ್ಹರು ಗೊತ್ತಾ? ವ್ಯಕ್ತಿ ಕರ್ನಾಟಕದವರು ಆಗಿರಬೇಕು. ಬಡತನ ರೇಖೆಗಿಂತ ಮೇಲಿರುವವರು ಎಪಿಎಲ್‌ ಕಾರ್ಡ್ ಪಡೆಯಬಹುದು. ಇನ್ನು ಎಪಿಎಲ್‌ ಕಾರ್ಡ್‌ (Apl card)ಪಡೆಯಲು ಆದಾಯ ಮಿತಿ ಇಲ್ಲ.

ಎಪಿಎಲ್ ಕಾರ್ಡ್ ಪಡೆಯುವುದು ಹೇಗೆ?
• ಎಪಿಎಲ್‌ ಕಾರ್ಡ್‌ ಪಡೆಯಲು ವೆಬ್‌ಸೈಟ್‌ https://ahara.kar.nic.in/ ಗೆ ಭೇಟಿ ನೀಡಿ.
• ಎಲ್ಲಾ ದಾಖಲೆಗಳ ವಿವರ ಅಪ್‌ಲೋಡ್‌ ಮಾಡಿ, ಅರ್ಜಿಯೊಂದಿಗೆ ದಾಖಲೆಗಳನ್ನು ಲಗತ್ತಿಸಿ ನಿಮ್ಮ ಸಮೀಪದ ಆಹಾರ ಕಚೇರಿಗೆ ಸಲ್ಲಿಬೇಕು.
• ಬಳಿಕ ನಿಮ್ಮ ವಾಸ ಪ್ರದೇಶದ ಪಡಿತರ ಅಂಗಡಿ ವ್ಯಾಪ್ತಿಗೆ ಹೆಸರನ್ನು ಸೇರಿಸಲಾಗುತ್ತದೆ. ಅಲ್ಲಿಂದ ಪ್ರತಿ ತಿಂಗಳು ಪಡಿತರ ಪಡೆದುಕೊಳ್ಳಬಹುದು.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:-
ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಹಾಯವಾಣಿ ಸಂಖ್ಯೆ – 1800 425 9339
ಆಯುಕ್ತರ ಕಚೇರಿ- 080 – 22262187
ಜಂಟಿ ನಿರ್ದೇಶಕರ ಕಚೇರಿ- 080 – 22354857

ಇದನ್ನೂ ಓದಿ: ರಾಜ್ಯದ ಪದವಿ ಪೂರ್ವ ಕಾಲೇಜುಗಳಲ್ಲಿ 4055 ಅತಿಥಿ ಉಪನ್ಯಾಸಕರ ನೇಮಕಾತಿಗೆ ಗ್ರೀನ್ ಸಿಗ್ನಲ್!

Leave A Reply

Your email address will not be published.