200 Unit current free Scheme: ಉಚಿತ ವಿದ್ಯುತ್ ಘೋಷಿಸಿದ್ರೂ 200 ಯೂನಿಟ್ ಫ್ರೀ ನಿರೀಕ್ಷೆಯಲ್ಲಿದ್ದವರಿಗೆ ಸರ್ಕಾರದಿಂದ ಶಾಕ್!! ಉಚಿತ ಎಂದು ತೇಪೆ ಹಾಕಿ ವಸೂಲಿ ಮಾಡೋದು ಖಚಿತ!!
Gruha Jyoti scheme 200 unit current free scheme how it works
Gruha Jyoti scheme: ಮೊದಲ ಗ್ಯಾರಂಟಿಯಾಗಿ ಗೃಹಜ್ಯೋತಿ (Gruha Jyoti scheme) ಯೋಜನೆ ಮಾಡಲಾಗುವುದು. 200 ಯೂನಿಟ್ (200 Unit Electricity) ವರೆಗೆ ವಿದ್ಯುತ್ ಉಚಿತವಾಗಿ ನೀಡಲಾಗುವುದು. ಆಗಸ್ಟ್ ತಿಂಗಳಿಂದ ಬರುವ ಬಿಲ್‌ನಿಂದ ಯೋಜನೆ ಜಾರಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದರೂ ಕೂಡ ಸದ್ಧಿಲ್ಲದೆ ರಾಜ್ಯದ ಜನತೆಗೆ ರಾಜ್ಯ ಸರ್ಕಾರ ಶಾಕ್ ಕೊಡಲು ಮುಂದಾಗಿದೆ.
ಹೌದು, ಗೃಹಜ್ಯೋತಿ ಯೋಜನೆಗೆ ವಾರ್ಷಿಕ ಸರಾಸರಿ ಮಾನದಂಡವಿದೆ. ನೂತನ ಕಾಂಗ್ರೆಸ್ ಸರ್ಕಾರ 200 ಯೂನಿಟ್ ಉಚಿತ ವಿದ್ಯುತ್ (Gruha Jyothi) ಘೋಷಣೆ ಮಾಡಿದ್ದರೂ, ಕೆಲವೊಂದು ಷರತ್ತುಗಳನ್ನು ಹಾಕಿದೆ. ವಾರ್ಷಿಕ ಸರಾಸರಿ ಬಳಕೆ ಆಧಾರದಡಿ 200 ಯೂನಿಟ್ ಗ್ಯಾರಂಟಿ ಸ್ಕೀಂ ಜಾರಿಗೆ ತಂದಿದೆ. ವಾರ್ಷಿಕ ಸರಾಸರಿ ಜೊತೆಗೆ 10 ಪರ್ಸೆಂಟ್‍ಗಿಂತ ಹೆಚ್ಚು ಯೂನಿಟ್ ವಿದ್ಯುತ್ ಬಳಸಿದ್ರೆ ಮಾಮೂಲಿಯಂತೆ ಎಲ್ಲ ಚಾರ್ಜ್‍ಗಳನ್ನೊಳಗೊಂಡ ವಿದ್ಯುತ್ ಬಿಲ್ ಕಟ್ಟಬೇಕಿದೆ. ಇದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಅಂದರೆ ಯಾರು ಎಷ್ಟು ವಿದ್ಯುತ್ ಬಳಸುತ್ತಾರೆ ಎಂಬುದನ್ನು 12 ತಿಂಗಳ ಸರಾಸರಿ ವಿದ್ಯುತ್ ಬಳಕೆ ಆಧರಿಸಿ, ಅದರ ಮೇಲೆ 10% ರಷ್ಟು ವಿದ್ಯುತ್ ಉಚಿತವಾಗಿ ಕೊಡಲಾಗುವುದು. ಉದಾಹರಣೆಗೆ, 70 ಯೂನಿಟ್ ಬಳಸುವವರು ಅದಕ್ಕೆ 10% (ಅಂದರೆ ಒಟ್ಟು 80%) ಬಳಕೆ ಮಾಡಬಹುದು. ಕಳೆದ ವರ್ಷ ಸರಾಸರಿ ತಿಂಗಳಿಗೆ 100 ಯೂನಿಟ್ ಬಳಸಿದ್ದವರು ಈಗ 110 ಯೂನಿಟ್ ಬಳಸಿದ್ರೆ ವಿದ್ಯುತ್ ಉಚಿತವಾಗಿ ಸಿಗುತ್ತದೆ. ಒಂದು ವೇಳೆ 110ಕ್ಕಿಂತ ಹೆಚ್ಚು ಯೂನಿಟ್ ಬಳಸಿದ್ರೆ ಹೆಚ್ಚುವರಿ ಯೂನಿಟ್‌ಗೆ ಬಿಲ್ ಕಟ್ಟಬೇಕು. ಹೀಗೆ 200 ಯೂನಿಟ್ ವರೆಗೆ ವಿದ್ಯುತ್ ಬಳಸುವವರು ಬಿಲ್ ಕಟ್ಟುವಂತಿಲ್ಲ. 200 ಯೂನಿಟ್ ಉಚಿತ ಅಂತ ಎಲ್ಲರೂ ಬೇಕಾಬಿಟ್ಟಿ ವಿದ್ಯುತ್ ಬಳಸುವಂತಿಲ್ಲ. ಇದು ನಾನಾ ಚರ್ಚೆಗೆ ಎಡೆ ಮಾಡಿಕೊಟ್ಟಿದೆ.
ಇನ್ನು ಜು.1 ರಿಂದ ಆಗಸ್ಟ್ ವರೆಗಿನ ಖರ್ಚಿಗೆ ಇದು ಲೆಕ್ಕ. ಜುಲೈನಿಂದ ಮಾಡಿರುವ ಖರ್ಚಿನ ಬಿಲ್ ಆಗಸ್ಟ್‌ನಲ್ಲಿ ಬರಲಿದೆ. ಜುಲೈವರೆಗೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡವರಿಗೆ ಸಮಯ ಕೊಡುತ್ತೇವೆ. ಹಳೇ ವಿದ್ಯುತ್ ಬಾಕಿಯನ್ನು ಗ್ರಾಹಕರೇ ಪಾವತಿಸಬೇಕು. ಆಗಸ್ಟ್‌ನಿಂದ ಬರುವ ಬಿಲ್‌ನ್ನು ಜನರು ಕಟ್ಟುವ ಅಗತ್ಯವಿಲ್ಲ.
ಇಷ್ಟೇ ಅಲ್ಲದೆ ಎಲ್ಲಾ ಆರ್‌ಆರ್ ನಂಬರ್‌ಗಳಿಗೆ ಉಚಿತ ಎಂದು ಡಿಸಿಎಂ ಶಿವಕುಮಾರ್ (DK Shivakumar) ಹೇಳಿದ್ದಾರೆ. ಆದ್ರೆ ಒಂದಕ್ಕಿಂತ ಹೆಚ್ಚು ಮನೆಗಳನ್ನ ಬಾಡಿಗೆ ಕೊಟ್ಟ ಮಾಲೀಕರ ವಿಚಾರದಲ್ಲಿ ಸರ್ಕಾರ ಏನು ಮಾಡಲಿದೆ ಎನ್ನುವುದಕ್ಕೆ ಸ್ಪಷ್ಟವಾದ ಉತ್ತರ ಸಿಕ್ಕಿಲ್ಲ. ಇದನ್ನು ವಾಣಿಜ್ಯ ಎಂದು ಪರಿಗಣಿಸುತ್ತಾ? ಅಥವಾ ಒಬ್ಬ ಮಾಲೀಕ ಎಷ್ಟೇ ಮನೆಗಳನ್ನ ಬಾಡಿಗೆಗೆ ಕೊಟ್ಟಿದ್ದರೂ ಆ ಎಲ್ಲ ಬಾಡಿಗೆದಾರರಿಗೆ ಉಚಿತ ವಿದ್ಯುತ್ ಸಿಗುತ್ತಾ ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ.