Government employees: ಸರ್ಕಾರಿ ನೌಕರರು, ಅಧಿಕಾರಿಗಳು ಮತ್ತು ನಿಗಮ ಮಂಡಳಿಯ ಸಿಬ್ಬಂದಿ ಐಡಿ ಕಾರ್ಡ್ ಹಾಕಿಕೊಳ್ಳುವುದು ಕಡ್ಡಾಯ, ಸರ್ಕಾರದಿಂದ ಆದೇಶ

government employees to wear id card is compulsory

Government employees: ಕರ್ನಾಟಕ ರಾಜ್ಯ ಸರ್ಕಾರದ ಎಲ್ಲಾ ನೌಕರರು, ಅಧಿಕಾರಿಗಳು (Government Servants ) ಮತ್ತು ಸೇವಾ ಪ್ರತಿನಿಧಿಗಳು, ಸರ್ಕಾರದ ಅಧೀನದ ನಿಗಮ- ಮಂಡಳಿಗಳ ಅಧಿಕಾರಿಗಳು ಮತ್ತಿತರ ಸಿಬ್ಬಂದಿ ವರ್ಗದವರು ತಮ್ಮ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಗುರುತಿನ ಚೀಟಿ (ID Card to Government employees) ಧರಿಸುವಂತೆ ಆದೇಶಿಸಲಾಗಿದೆ.

 

ಹಲವು ಜಿಲ್ಲಾ ಹಾಗೂ ತಾಲೂಕು ಮಟ್ಟದ ಕಚೇರಿಗಳ ಅಧಿಕಾರಿಗಳು, ನೌಕರರು ಗುರುತಿನ ಚೀಟಿ ಧರಿಸದೆ ಬರುತ್ತಿರುವುದು, ರಾಜ್ಯ ಸರ್ಕಾರದ ಗಮನಕ್ಕೆ ಬಂದಿದೆ. ಇದರಿಂದಾಗಿ ಸಾರ್ವಜನಿಕರಿಗೆ ನಿರ್ದಿಷ್ಟ ಅಧಿಕಾರಿ ಸಿಬ್ಬಂದಿಗಳನ್ನು ಗುರುತಿಸಿ ಭೇಟಿಯಾಗಲು ಕಷ್ಟವಾಗುತ್ತಿದೆ. ಸಿಬ್ಬಂದಿಯನ್ನು ಗುರುತಿಸದೇ ಇರೋ ಕಾರಣ ಜನರ ಕೆಲಸ ಕಾರ್ಯಗಳಿಗೆ ಕಷ್ಟ ಆಗುತ್ತಿದೆ.

ಇದನ್ನು ಮನಗಂಡ ಸರ್ಕಾರ ಗುರುತಿನ ಚೀಟಿ ಧರಿಸುವಂತೆ ಆದೇಶ ನೀಡಿದೆ. ಗುರುತಿನ ಚೀಟಿ ಧರಿಸುವಂತೆ ರಾಜ್ಯ ಸರ್ಕಾರದ ಎಲ್ಲಾ ಅಧಿಕಾರಿ, ನೌಕರರು, ನಿಗಮ ಮಂಡಳಿಗಳ ಅಧಿಕಾರಿಗಳು, ಸಿಬ್ಬಂದಿ ಕರ್ತವ್ಯದ ಅವಧಿಯಲ್ಲಿ ಕಡ್ಡಾಯವಾಗಿ ಸೂಚಿಸಲಾಗಿದೆ. ಈ ಪ್ರಯುಕ್ತ ತಪಾಸಣೆ ಕೂಡಾ ನಡೆಸಲು ಉದ್ದೇಶಿಸಲಾಗಿದೆ. ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಇರುವ ತಪಾಸಣೆ ತಂಡದ ಮೂಲಕ ಗುರುತಿನ ಚೀಟಿ ಧರಿಸುವವರನ್ನು ಪತ್ತೆ ಹಚ್ಚಿ ಬಿಗಿ ಕ್ರಮ ಕೈಗೊಳ್ಳಲು ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್ ರವರು ಆದೇಶಿಸಿದ್ದಾರೆ.

ಇದನ್ನೂ ಓದಿ: Odisha Train Accident: ಒಡಿಶಾದಲ್ಲಿ ನಡೆದ ಭೀಕರ ರೈಲು ದುರಂತದಲ್ಲಿ ಸಾವಿನ ಸಂಖ್ಯೆ 233ಕ್ಕೆ ಏರಿಕೆ! 900 ಮಂದಿ ಗಾಯ

Leave A Reply

Your email address will not be published.