Seats Reservation In KSRTC : KSRTC ಬಸ್ ಗಳಲ್ಲಿ ಪುರುಷರಿಗೆ 50% ಸೀಟು ಮೀಸಲು, ಇದು ದೇಶದಲ್ಲೇ ಮೊದಲು !

50% seat reservation for men in KSRTC buses

Seats reservation in KSRTC: ಕಾಂಗ್ರೆಸ್ (congress) ಸರ್ಕಾರ ಅಧಿಕಾರಕ್ಕೆ ಬಂದರೆ ಐದು ಗ್ಯಾರಂಟಿ ಜಾರಿಗೆ ತರುವುದಾಗಿ ಘೋಷಿಸಿತ್ತು. ಅಂತೆಯೇ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಘೋಷಿಸಿದಂತೆ ನಿನ್ನೆ ಕೆಲವು ಗ್ಯಾರಂಟಿಗಳನ್ನು ಜಾರಿಗೆ ತಂದಿದೆ. ಜಾರಿಯಾದ ಗಾರಂಟಿಗಳಲ್ಲಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಕೂಡ ಒಂದಾಗಿದೆ. ಇದೀಗ ದೇಶದಲ್ಲೇ ಮೊದಲ ಬಾರಿಗೆ KSRTC ಬಸ್ ಗಳಲ್ಲಿ ಪುರುಷರಿಗೆ ಶೇ. 50ರಷ್ಟು ಸೀಟು ಮೀಸಲಿಡಲಾಗಿದೆ.

ಸಾಮಾನ್ಯವಾಗಿ ಬಸ್ ಗಳಲ್ಲಿ ಮಹಿಳೆಯರು, ಹಿರಿಯ ನಾಗರಿಕರು, ವಿಕಲಚೇತನರಿಗೆ ಸೀಟು ಮೀಸಲಿರುತ್ತದೆ. ಆದರೆ, ಇದೀಗ ಪುರುಷರಿಗೆ ಸೀಟು ಮೀಸಲಾತಿ ಇಡಲಾಗಿದೆ (Seats reservation in KSRTC). ಇದು ದೇಶದಲ್ಲೇ ಮೊದಲ ಬಾರಿ ಆಗಿದೆ. ಹೌದು, ಸಿಎಂ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಕೆಎಸ್‌ಆರ್ಟಿಸಿ ಬಸ್ ಗಳಲ್ಲಿ (KSRTC bus) ಶೇಕಡ 50ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿಡಲು ತೀರ್ಮಾನಿಸಲಾಗಿದೆ ಎಂದು ತಿಳಿದುಬಂದಿದೆ.

ಇನ್ನು ಜೂನ್ 11 ರಿಂದ ಶಕ್ತಿ ಯೋಜನೆಯ ಅಡಿಯಲ್ಲಿ ಕೆಎಸ್‌ಆರ್ಟಿಸಿ ಹಾಗೂ ನಗರ ಸಾರಿಗೆ ಬಸ್’ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯ ಸಿಗಲಿದೆ. ಜೊತೆಗೆ ಇನ್ನುಮುಂದೆ ಪುರುಷರಿಗೆ ಕೆಎಸ್‌ಆರ್ಟಿಸಿ ಬಸ್ ಗಳಲ್ಲಿ ಶೇಕಡ 50ರಷ್ಟು ಸೀಟು ಮೀಸಲಾಗಿದೆ.

 

ಇದನ್ನು ಓದಿ : Puttur: ಪುತ್ತೂರು :ವಿಷ ಸೇವಿಸಿ ಅಸ್ವಸ್ಥಗೊಂಡಿದ್ದ ವಿದ್ಯಾರ್ಥಿನಿ ಸಾವು 

Leave A Reply

Your email address will not be published.