Sweden: ಲೈಂಗಿಕತೆಯನ್ನೇ ಕ್ರೀಡೆಯಾಗಿಸಿ, ಚಾಂಪಿಯನ್ ಶಿಪ್ ಏರ್ಪಡಿಸಿದ ಸ್ವೀಡನ್! ಸ್ಪರ್ಧೆಯ ರೀತಿ, ನೀತಿ, ನಿಯಮಗಳನ್ನ ಕೇಳಿದ್ರೆ ಹುಬ್ಬೇರೋದು ಪಕ್ಕಾ!!

Sweden made sex a sport and arranged a championship

Sweden: ಬೇರೆ ಬೇರೆ ಕ್ರೀಡೆಗಳಲ್ಲಿ ಚಾಂಪಿಯನ್ ಶಿಪ್(Champion ship)ಸ್ಪರ್ಧೆಗಳನ್ನ ಏರ್ಪಡಿಸೋದನ್ನು ನಾವು ಕಾಣುತ್ತೇವೆ. ಆದರೆ ಲೈಂಗಿಕತೆಯಲ್ಲಿ ಈ ರೀತಿ ಸ್ಪರ್ಧೆ ನಡೆಸಲು ಸಾಧ್ಯವೇ? ಆದರೆ ಇಲ್ಲೊಂದು ದೇಶ ಕ್ರೀಡಿಗಳ ವಿಚಾರವಾಗಿ ಒಂದು ಕೈ ಹೆಜ್ಜೆ ಮುಂದೆ ಹೋಗಿ ಲೈಂಗಿಕತೆಯಲ್ಲೂ ಚಾಂಪಿಯನ್ ಶಿಪ್ ಸ್ಪರ್ಧೆ ಏರ್ಪಡಿಸಲು ಮುಂದಾಗಿದೆ!!

ಹೌದು, ಸ್ವೀಡನ್​ ದೇಶವು ಸೆಕ್ಸ್​ ಅನ್ನೂ ಕ್ರೀಡೆಯಾಗಿ ಪರಿಗಣನೆ ಮಾಡಿದ ಮೊದಲ ದೇಶ ಎನಿಸಿದೆ. ಅಲ್ಲದೆ ಈ ವರ್ಷದ ಮೊದಲ ಟೂರ್ನಿ ಆಯೋಜನೆಗೆ ದಿನಾಂಕವನ್ನೂ ಪ್ರಕಟಿಸಿದೆ! ಜೂನ್​ 8ರಿಂದ ಕೆಲವು ವಾರಗಳ ಕಾಲ ಯೂರೋಪಿಯನ್ ಸೆಕ್ಸ್ ಚಾಂಪಿಯನ್ ಶಿಪ್ ಟೂರ್ನಿ (European Championship in Sweden) ನಡೆಯಲಿದೆ. ಈ ಚಾಂಪಿಯನ್​ಶಿಪ್​ ಗೊಥೆನ್​ಬರ್ಗ್​ನಲ್ಲಿ ಜರುಗಲಿದ್ದು, ಸ್ವೀಡಿಷ್​​ ಸೆಕ್ಸ್​ ಫೆಡರೇಷನ್​ (Swedish Federation) ಈ ಟೂರ್ನಿ ಆಯೋಜಿಸುವ ಜವಾಬ್ದಾರಿ ಹೊತ್ತಕೊಂಡಿದೆ.

16 ವಿಭಾಗಗಳಲ್ಲಿ ಸೆಕ್ಸ್ ಚಾಂಪಿಯನ್​ಶಿಪ್ ನಡೆಸಲಾಗುತ್ತಿದೆ ಎಂದು ವರದಿಯಾಗಿದೆ. ವರದಿಗಳ ಪ್ರಕಾರ, ಸೆಕ್ಸ್ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುವುದಾಗಿ ಈಗಾಗಲೇ ವಿವಿಧ ಯುರೋಪಿಯನ್ ದೇಶಗಳ 20 ಪ್ರತಿನಿಧಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅಂದಹಾಗೆ ಪ್ರತಿಯೊಂದು ಕ್ರೀಡೆಗೂ ಇದ್ದಂತೆ ಈ ಟೂರ್ನಿಗೂ ಪ್ರಮುಖ ನಿಯಮಗಳಿವೆ.

ಮತ್ತೊಂದು ವಿಚಾರ ಎಂದರೆ ಈ ಟೂರ್ನಿ ಎಷ್ಟು ವಾರಗಳ ಕಾಲ ನಡೆಯುತ್ತದೆ ಎಂಬ ಮಾಹಿತಿ ಇನ್ನೂ ಅಪೂರ್ಣ. ಆದರೆ ಈ ಚಾಂಪಿಯನ್​ಶಿಪ್​​ನಲ್ಲಿ ಒಂದು ದಿನಕ್ಕೆ 6 ಗಂಟೆಗಳ ಕಾಲ ಪಾಲ್ಗೊಳ್ಳುವುದು ಕಡ್ಡಾಯ. ಈ ಅವಧಿಯಲ್ಲಿ ಸ್ಪರ್ಧಾಳುಗಳು ಲೈಂಗಿಕ ಕ್ರಿಯೆಗೆ ಅಥವಾ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಲು ಸುಮಾರು 45 ನಿಮಿಷಗಳಿಂದ ಒಂದು ಗಂಟೆಯವರೆಗೆ ಕಾಲಾವಕಾಶ ಇರಲಿದೆ ಎಂದು ವರದಿಯಾಗಿದೆ.

ಇನ್ನು ಸೆಡಕ್ಷನ್, ಓರಲ್‌ ಸೆಕ್ಸ್‌, ಸಂಭೋಗ, ಸ್ಪರ್ಧಿಗಳ ವಸ್ತ್ರ ವಿನ್ಯಾಸ ಸೇರಿ 16 ವಿಭಾಗಗಳಲ್ಲಿ ಸೆಕ್ಸ್ ಚಾಂಪಿಯನ್​ಶಿಪ್ ಟೂರ್ನಿ ನಡೆಯಲಿದೆ ಎಂದು ಜೀ ನ್ಯೂಸ್​ ವರದಿ ಮಾಡಿದೆ. ಸ್ಪರ್ಧೆಯಲ್ಲಿ ವಿಜೇತರು ಯಾರೆಂಬುದನ್ನು ಮೂವರು ತೀರ್ಪುಗಾರು ಮತ್ತು ಪ್ರೇಕ್ಷಕರ ರೇಟಿಂಗ್‌ ಮೂಲಕ ನಿರ್ಧರಿಸಲಾಗುತ್ತದೆ. ಅಂತಿಮವಾಗಿ ಪ್ರೇಕ್ಷಕರಿಂದ 70% ಮತಗಳನ್ನು ಪರಿಗಣಿಸಲಾಗುತ್ತದೆ. ಉಳಿದ 30% ಮತಗಳನ್ನು ತೀರ್ಪುಗಾರು ನೀಡುತ್ತಾರೆ ಎನ್ನಲಾಗಿದೆ. ಇದಷ್ಟೇ ಅಲ್ಲದೆ ಎದುರಾಳಿ ಪಡೆಯುವ ಸಂತಸದ ಪ್ರಮಾಣದಲ್ಲಿ ಅಂಕ ಸಿಗಲಿದೆ. ಎದುರಾಳಿ ನಿರಾಸೆಯಾದರೆ ಅಂಕ ಕಳೆದುಕೊಳ್ಳಲಿದ್ದಾರೆ.

ಸ್ವೀಡಿಷ್ (Sweden )ಫೆಡರೇಶನ್ ಆಫ್ ಸೆಕ್ಸ್‌ನ ಅಧ್ಯಕ್ಷ ಡ್ರ್ಯಾಗನ್ ಬ್ರಾಟಿಚ್(Dragon Bratich) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಲೈಂಗಿಕತೆಯನ್ನು ಕ್ರೀಡೆಯಾಗಿ ಪರಿವರ್ತಿಸುವುದು ಅನಿವಾರ್ಯ. ಇದು ಗಂಡು ಮತ್ತು ಹೆಣ್ಣಿನ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತೇಜಿಸುತ್ತದೆ. ಅಲ್ಲದೆ ವಿಶ್ವದಲ್ಲಿರುವ ಏಕೈಕ ಕ್ರೀಡೆ ಇದಾಗಿದೆ. ಇದೊಂದು ಅತ್ಯಂತ ಕ್ರಾಂತಿಕಾರಿ ಕ್ರೀಡೆ, ನಮ್ಮ ಜಗತ್ತಿಗೆ ಬಹಳ ವಿಶಿಷ್ಟ ಎನಿಸಲಿದೆ ಎಂದು ಅಧ್ಯಕ್ಷ ಬ್ರಾಟಿಚ್‌ ಮಾಹಿತಿ ನೀಡಿದ್ದಾರೆ.

 

ಇದನ್ನು ಓದಿ: Kadaba: ಕಡಬ : ವಿದ್ಯುತ್ ಕಂಬದಲ್ಲಿ ಲೈನ್ ಮ್ಯಾನ್ ಮೃತ್ಯು : ಮೆಸ್ಕಾಂ ಎಂಜಿನಿಯರ್‌ಗಳ ವಿರುದ್ಧ ಪ್ರಕರಣ ದಾಖಲು

Leave A Reply

Your email address will not be published.