Bellary: ಬಳ್ಳಾರಿ ಶಾಲಾ ಆಡಳಿತ ಮಂಡಳಿ ಯಡವಟ್ಟು : ಆರಂಭವಾದ 2ನೇ ದಿನವೇ ಮಕ್ಕಳಿಗೆ ಮರದ ಕೆಳಗೆ ಪಾಠ..!

second day of the start of school children sat under the tree and studied

Bellary: ಬಳ್ಳಾರಿ : ಶಾಲೆ ಪುನಾರಾಂಭಗೊಂಡ ಎರಡನೆ ದಿನವೇ ಮಕ್ಕಳು ಶಾಲೆಯ ಹೊರಾಂಗಣದಲ್ಲಿರೋ ಮರದ ಕೆಳಗೆ ಕುಳಿತು ಪಾಠ ಕೇಳುವ ಪರಿಸ್ಥಿತಿ ಎದುರಾದ ಘಟನೆ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆಯಲ್ಲಿ ನಡೆದಿದೆ.

ಬಳ್ಳಾರಿ (Bellary ) ಜಿಲ್ಲೆಯ ಸಿರುಗುಪ್ಪ ಪಟ್ಟಣದಲ್ಲಿರುವ ರಾಜೀವ್ ಗಾಂಧಿ ಸ್ಮಾರಕ ವಿದ್ಯಾ ಸಂಸ್ಥೆ ಆಡಳಿತ ಮಂಡಳಿಯ ಎಂ. ಸವಿತಾ, ಎಂ ಕೃಷ್ಣಕಿಶೋರ್ ರೆಡ್ಡಿ, ಎಂ.ಸತ್ಯನಾರಾಣ ಸೇರಿ ಆಂಧ್ರ ಮೂಲದ ಇನ್‍ಕ್ರೆಡ್ ಫೈನಾನ್ಸಿಯಲ್ ಸರ್ವೀಸ್ ಲಿಮಿಟೆಡ್‍ನಿಂದ ಒಂದು ಕೋಟಿಗೂ ಅಧಿಕ ಮೊತ್ತದ ಸಾಲವನ್ನು ಪಡೆದುಕೊಂಡಿದ್ದರು, ಬಳಿಕ ಸಾಲವನ್ನು ಮರುಪಾವತಿಯನ್ನು ಮಾಡದ ಕಾರಣದಿಂದಾಗಿ ಶಾಲೆ ಓಪನ್‌ ಆದ ದಿನವೇ ಬ್ಯಾಂಕ್ ಸಿಬ್ಬಂದಿ ನ್ಯಾಯಲಯ ದಿಂದ ಆದೇಶ ತಂದು ಸೀಜ್ ಮಾಡಿದ್ದಾರೆ . ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಹೊರಾಂಗಣದ ಮರದ ಕೆಳಗೆ ಪಾಠವನ್ನು ಮಾಡುವ ಪರಿಸ್ಥಿತಿ ಎದುರಾಗಿದ್ದು, ಈ ವಿಚಾರ ತಿಳಿದು ವಿದ್ಯಾರ್ಥಿಗಳ ಪೋಷಕರಿಗೆ ಶಾಕ್‌ ಆಗಿದ್ದು, ಶಾಲೆಯ ಬಳಿಗೆ ಬಂದು ವಿಚಾರಿಸಿದ್ದಾರೆ. ಇದಕ್ಕೆ ಪೋಷಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಈ ಘಟನೆಯನ್ನು ಶಿಕ್ಷಣ ಇಲಾಖೆ ಗಂಭೀರವಾಗ ಪರಿಗಣಿಸಿ, ಮಕ್ಕಳನ್ನು ಹೊರಗಡೆ ಕೂರಿಸದೇ ಬೇರೆಡೆ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

 

ಇದನ್ನು ಓದಿ:  Mandya: ಗೃಹ ಸಚಿವರ ವಿರುದ್ಧ ಅವಹೇಳನಕಾರಿ ಪೋಸ್ಟ್..! ಪೊಲೀಸರ ಬಲೆಗೆ ಬಿದ್ದ ಯುವಕ ಅರೆಸ್ಟ್

Leave A Reply

Your email address will not be published.