RSS Activist Arrest: ಮುಸ್ಲಿಂ ಮಹಿಳೆಯರ ಬಗ್ಗೆ ವಾಟ್ಸಪ್‌ನಲ್ಲಿ ಮಾನಹಾನಿಕರ ಪೋಸ್ಟ್‌! RSS ಕಾರ್ಯಕರ್ತ ಅರೆಸ್ಟ್‌!!!

RSS activist arrested for derogatory WhatsApp post on Muslim women

RSS Activist Arrest: ಆರ್‌ಎಸ್‌ಎಸ್‌ (RSS) ಕಾರ್ಯಕರ್ತನೋರ್ವ ಮುಸ್ಲಿಂ ಮಹಿಳೆಯರ ಬಗ್ಗೆ ಅವಹೇಳನಕಾರಿ ವಾಟ್ಸಪ್‌ ಸ್ಟೇಟಸ್‌ ಹಾಕಿರುವ ಕಾರಣ, ಈ ಆರೋಪದಡಿ ಆರ್‌ಎಸ್‌ಎಸ್‌ ಕಾರ್ಯಕರ್ತನನ್ನು ಪೊಲೀಸರು ಬಂಧಿಸಿರುವ ಘಟನೆಯೊಂದು ನಡೆದಿದೆ. ಈ ಘಟನೆ  ರಾಯಚೂರು(Raichur)ಜಿಲ್ಲೆ ಲಿಂಗಸುಗೂರು ಪಟ್ಟಣದಲ್ಲಿ ಬೆಳಕಿಗೆ ಬಂದಿದೆ. ಆರ್‌ಎಸ್‌ಎಸ್‌ ಕಾರ್ಯಕರ್ತ ಮುಸ್ಲಿಂ ಮಹಿಳೆಯರು ಬರೀ ಮಕ್ಕಳನ್ನು ಹೆರುವ ಮೆಷಿನ್‌ ಎಂದು ವಾಟ್ಸಪ್‌ ಸ್ಟೇಟಸ್‌ ಹಾಕಿದ್ದ. ರಾಜು ಎಂಬಾತನೇ ಈ ಅವಹೇಳನಕಾರಿ ಸ್ಟೇಟಸ್‌ ಹಾಕಿದ ವ್ಯಕ್ತಿ. ಆದರೆ ಈ ಸ್ಟೇಟಸ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಯಿತು. ಮುಸ್ಲಿಂ ಸಮುದಾಯ ಜನ ಇದರಿಂದ ಆಕ್ರೋಶಗೊಂಡು ಲಿಂಗಸುಗೂರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಮಾಡಿ, ಆರೋಪಿ ರಾಜು ವಿರುದ್ಧ ಕ್ರಮ ತೆಗೆದುಕೊಳ್ಳಲು ಹೇಳಿದ್ದಾರೆ. ನಂತರ ಲಿಂಗಸುಗೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿ ರಾಜುನನ್ನು (RSS Activist Arrest) ಬಂಧನ ಮಾಡಿದ್ದಾರೆ.

 

ಮುಸ್ಲಿಂ ಸಮುದಾಯದ ಜನರು ನಿನ್ನೆ (ಜೂನ್‌.01)ರಂದು ತಡ ರಾತ್ರಿ ಲಿಂಗಸುಗೂರು ಪೊಲೀಸ್‌ ಠಾಣೆ ಮುಂದೆ ಪ್ರತಿಭಟನೆ ಮಾಡಿ, ಮುಸ್ಲಿಂ ಭಾವನೆಗೆ ಧಕ್ಕೆ ತಂದ ಆರೋಪದ ಮೇಲೆ ರಾಜುನನ್ನು ಬಂಧನ ಮಾಡಬೇಕೆಂದು ಹೇಳಿದ್ದು, ನಂತರ ಈ ಕ್ರಮ ಕೈಗೊಳ್ಳಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

 

ಇದನ್ನು ಓದಿ: H C Mahadevappa: ಶಾಲಾ–ಕಾಲೇಜುಗಳಲ್ಲಿನ್ನು ಸಂವಿಧಾನ ಪ್ರಸ್ತಾವನೆ ಓದು ಕಡ್ಡಾಯ: ಸಚಿವ ಎಚ್‌.ಸಿ.ಮಹದೇವಪ್ಪ 

Leave A Reply

Your email address will not be published.