Nisha Upadhyay: ವೇದಿಕೆ ಮೇಲೆ ಹಾಡುತ್ತಿದ್ದ ಜಾನಪದ ಗಾಯಕಿಗೆ ತಾಗಿದ ಗುಂಡು!

Nisha Upadhyay shot a folk singer who was singing on stage

Share the Article

Nisha Upadhyay: ಪಾಟ್ನಾದಲ್ಲಿ ಸಾಮೂಹಿಕ ಉಪನಯನ ಕಾರ್ಯಕ್ರಮದಲ್ಲಿ ಗಾಯಕಿ ನಿಶಾ ಉಪಾಧ್ಯಾಯ (Nisha Upadhyay) ಸಂಗೀತ ಕಾರ್ಯಕ್ರಮ ನೀಡುತ್ತಿರುವ ವೇಳೆ ಅಗಂತುಕನೊಬ್ಬ ಗುಂಡು ಹಾರಿಸಿದ್ದು, ನಟಿಯ ಎಡಗಾಲಿಗೆ ಗುಂಡು ತಗುಲಿದ ಘಟನೆ ಬೆಳಕಿಗೆ ಬಂದಿದೆ.

ಹೌದು, ಬಿಹಾರದ ಜಾನಪದ ಗಾಯಕಿ ನಿಶಾ ಉಪಾಧ್ಯಾಯ ಅವರು ಸರನ್‌ನಲ್ಲಿ ಉಪನಯನ ಕಾರ್ಯಕ್ರಮವೊಂದರಲ್ಲಿ ವೇದಿಕೆ ಮೇಲೆ ಹಾಡುವಾಗಲೆ ಗುಂಡು ಹಾರಿಸಲಾಗಿದ್ದು ಗಾಯಗೊಂಡಿರುವ ಗಾಯಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಗಾಯಕಿ ನಿಶಾ ಉಪಾಧ್ಯಾಯ, ಬಿಹಾರದ ಸರಾನಾ ಜಿಲ್ಲೆಯ ಗೌರ್ ಬಸಂತ್ ಗ್ರಾಮದವರಾಗಿದ್ದಾರೆ. ಬಿಹಾರದ ಜನಪ್ರಿಯ ಭೋಜ್​ಪುರಿ ಗಾಯಕರಲ್ಲಿ ನಿಶಾ ಸಹ ಒಬ್ಬರಾಗಿದ್ದು ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು, ಮದುವೆ, ಹೋಳಿ ಇನ್ನಿತರೆಗಳಲ್ಲಿ ಸಂಗೀತ ಕಾರ್ಯಕ್ರಮ ನೀಡುತ್ತಾ ಬರುತ್ತಿದ್ದಾರೆ.

ಸದ್ಯ ಗಾಯಕಿಗೆ ಯಾವುದೇ ಗಂಭೀರ ಗಾಯಗಳಾಗಿಲ್ಲ. ಬದಲಿಗೆ ಗಾಯಕಿಯ ಎಡಗಾಲಿನ ತೊಡೆಯ ಭಾಗಕ್ಕೆ ಸಣ್ಣ ಗಾಯವಷ್ಟೆ ಆಗಿದೆ. ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

 

 

ಇದನ್ನು ಓದಿ: Lagamavva: ಜಾರಕಿಹೊಳಿ ಹಿರಿಯ ಸಹೋದರಿ ಲಗಮವ್ವ ವಿಧಿವಶ: ಸಚಿವ ಸಂಪುಟ ಸಭೆ ಹಿನ್ನೆಲೆ ಅಂತ್ಯಕ್ರಿಯೆಗೆ ಗೈರು 

Leave A Reply