

Snake Bite Viral Video: ಮನುಷ್ಯ ಆಧುನಿಕತೆಗೆ ಒಗ್ಗಿಕೊಂಡರು ಪ್ರಾಣಿ, ಪಕ್ಷಿ, ಜಂತುಗಳು ಬದಲಾಗಲು ಸಾಧ್ಯವೇ! ಇನ್ನು ವಿಷ ಜಂತುಗಳು ಎಷ್ಟೇ ಆದರು ತನಗೆ ತೊಂದರೆ ಆದರೆ ತನ್ನನ್ನು ರಕ್ಷಿಕೊಳ್ಳಲು ಕಚ್ಚುವುದು ಪ್ರಕೃತಿ ನಿಯಮ. ಅದರಲ್ಲೂ ಕೆಲವೊಂದು ಹಾವುಗಳು ಕಚ್ಚಿದರೆ ಮನುಷ್ಯ ಜೀವಂತ ಉಳಿಯಲು ಕಷ್ಟಕರ. ಎಷ್ಟೋ ಘಟಾನು ಘಟಿ ಹಾವು ಹಿಡಿಯುವವರು ಕೂಡ ಹಾವು ಕಚ್ಚಿ ಸತ್ತ ಘಟನೆಗಳು ಸೋಷಿಯಲ್ ಮೀಡಿಯಾದಲ್ಲಿ (Snake Bite Viral Video) ವೈರಲ್ ಆಗುತ್ತಿರುತ್ತದೆ.
ಹಾಗಿರುವಾಗ ಇದೀಗ ಇಲ್ಲೊಬ್ಬಳು ಏನು ಮಾಡಿದ್ದಾಳೆ ನೋಡಿ! ಹೋಗಿ ಹೋಗಿ ಹಾವಿಗೆ ಮುತ್ತಿಟ್ಟಿದ್ದಾಳೆ. ಹೌದು, ಪಾರ್ಕ್ ಗೆ ತೆರಳುವ ಹುಡುಗಿಯರು ಅಲ್ಲಿನ ಸಿಬ್ಬಂದಿ ಸಾಕಿರುವ ಹಾವನ್ನು ನೋಡಿ ಖುಷಿ ಪಡುತ್ತಾರೆ. ಅವರ ಕೈಯಲ್ಲಿದ್ದ ಅಪಾಯಕಾರಿ ಹಾವನ್ನು ಕಂಡು ಅದು ಕಚ್ಚುವುದಿಲ್ಲ ಎಂಬ ಮನಸ್ಥಿತಿಗೆ ಹೋಗುತ್ತಾರೆ.
ಹಾವನ್ನು ಕಂಡು ಆಕರ್ಷಿತಳಾದ ಯುವತಿ ಒಬ್ಬಳು ಅದನ್ನು ಚುಂಬಿಸಲು ಹೋಗುತ್ತಾಳೆ. ಇಬ್ಬರು ಸಿಬ್ಬಂದಿ ಹಾವನ್ನು ಕೈಯಲ್ಲಿ ಹಿಡಿದುಕೊಂಡಿದ್ದರು. ಆದರೆ ಹಾವು ತಡ ಮಾಡದೆ ಯುವತಿಯ ಮೂಗು ಮತ್ತು ಬಾಯಿಗೆ ಕಚ್ಚಿದೆ. ಈ ಯುವತಿ ಇದನ್ನು ಸ್ವಲ್ಪವೂ ನಿರೀಕ್ಷಿಸಿರಲಿಲ್ಲ ಎಂದೆನಿಸುತ್ತದೆ.
ಹಾವು ಕಚ್ಚಲು ಆರಂಭಿಸುತ್ತಿದ್ದಂತೆ ಯುವತಿ ಕಿರುಚಲು ಆರಂಭಿಸಿದ್ದಾಳೆ. ಆ ವೇಳೆ ಪಕ್ಕದಲ್ಲಿದ್ದ ಮಹಿಳೆಯೂ ಸ್ನೇಹಿತೆಯನ್ನು ರಕ್ಷಿಸುವಂತೆ ಕೂಗಿದ್ದಾಳೆ. ಇದನ್ನು ಕಂಡ ಹಾವನ್ನು ಹಿಡಿದ ಸಿಬ್ಬಂದಿ ಕೂಡಲೇ ಕಾರ್ಯಪ್ರವೃತ್ತರಾಗಿ ಹಾವಿನ ದಾಳಿಗೆ ಒಳಗಾದ ಮಹಿಳೆಯನ್ನು ರಕ್ಷಿಸಲು ಯತ್ನಿಸಿದ್ದಾರೆ.
ಒಟ್ಟಿನಲ್ಲಿ ಹುಡುಗಾಟದಲ್ಲಿ ಮುತ್ತು ಕೊಡಲು ಹೋದ ಯುವತಿಗೆ ಹಾವು ಸರಿಯಾದ ಶಾಸ್ತಿ ಮಾಡಿದೆ.
ಇದನ್ನು ಓದಿ: Chandan-Nivedita: ಸಮುದ್ರದಾಳದಲ್ಲಿ ನಿವೇದಿತಾ-ಚಂದನ್ ಶೆಟ್ಟಿ ಕಿಸ್ಸಿಂಗ್ ; ವಿಡಿಯೋ ವೈರಲ್!













