LPG Cylinder: ಭರ್ಜರಿ ಇಳಿಕೆ ಕಂಡ LPG ಗ್ಯಾಸ್ ; ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ 83.5 ರೂ. ಇಳಿಕೆ !

Huge reduction in LPG gas cylinder

LPG Cylinder : ಕೇಂದ್ರ ಸರ್ಕಾರವು (Central government) ಜನತೆಗೆ ಸಿಹಿಸುದ್ದಿ ನೀಡಿದೆ. ಬೆಲೆ ಏರಿಕೆಯ ಬಿಸಿಯಿಂದ ತತ್ತರಿಸಿರುವ ಜನರಿಗೆ ಕೊಂಚ ಮಟ್ಟಿಗೆ ರಿಲೀಫ್ ಆಗುವ ಸುದ್ಧಿ ಹೊರ ಬಿದ್ದಿದೆ. ಹೌದು, ‘LPG’ ವಾಣಿಜ್ಯ ಸಿಲಿಂಡರ್ (LPG Cylinder) ಬೆಲೆಯಲ್ಲಿ ಇಳಿಕೆಯಾಗಿದೆ. 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಕೆ ಮಾಡಲಾಗಿದೆ. ಹಾಗಾಗಿ 19 ಕೆಜಿ ಎಲ್ ಪಿಜಿ ಸಿಲಿಂಡರ್ ಬೆಲೆ 1,773 ರೂ.ಗೆ ಆಗಿದೆ.

ಜೂನ್ ತಿಂಗಳಿಗೆ ಕಾಲಿಡುವ ಹೊತ್ತಿಗೆ ಜನ ಸಾಮಾನ್ಯರು ಬಳಸುವ ಅಗತ್ಯ ವಸ್ತುಗಳಲ್ಲಿ ಒಂದಾದ LPG’ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ (LPG Cylinder Price) ಇಳಿಕೆ ಮಾಡಲಾಗಿದೆ. ಜೂನ್ 1 ರ ಇಂದು 19 ಕೆಜಿ ವಾಣಿಜ್ಯ ಎಲ್ಪಿಜಿ ಸಿಲಿಂಡರ್ ಬೆಲೆಯನ್ನು 83.50 ರೂ.ಗೆ ಇಳಿಸಲಾಗಿದೆ. ಆದರೆ, ಈ ಸಿಲಿಂಡರ್ ಬೆಲೆ ಕಡಿತ ಕೇವಲ ವಾಣಿಜ್ಯ ಅನಿಲ ಸಿಲಿಂಡರ್ ಬಳಕೆದಾರರಿಗೆ ಮಾತ್ರ ಅನ್ವಯವಾಗುತ್ತದೆ. ದೇಶೀಯ ಎಲ್ಪಿಜಿ ಅನಿಲ ಗ್ರಾಹಕರಿಗೆ ಬೆಲೆಯಲ್ಲಿ ಬದಲಾವಣೆ ಆಗಿಲ್ಲ. 14.2 ಕೆಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.

ಇಂದು ನವದೆಹಲಿಯಲ್ಲಿ ಸಬ್ಸಿಡಿ ರಹಿತ ಎಲ್ಪಿಜಿ ಸಿಲಿಂಡರ್ಗಳ ಬೆಲೆ 1,103 ರೂ ಇದ್ದು ಇವುಗಳನ್ನು ಭಾರತ ಸರ್ಕಾರವು ಪ್ರತಿ ತಿಂಗಳು ಪರಿಷ್ಕರಿಸುತ್ತಾ ಇರುತ್ತದೆ. ಅದರಂತೆ ಈಗ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಬೆಲೆಯಲ್ಲಿ ಪರಿಷ್ಕರಣೆ ಆಗಿದೆ. ಈ ಬೆಲೆ ಪರಿಷ್ಕರಣೆ ಒಟ್ಟು ನಾಲ್ಕು ಕಡೆ ನಡೆದಿದೆ. ದೇಶದ ನಾಲ್ಕು ಮಹಾನಗರಗಳಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯಲ್ಲಿ ಇಳಿಕೆಯಾಗಿದೆ. ದೇಶದ ರಾಜಧಾನಿ ದೆಹಲಿ, ಕೋಲ್ಕತಾ ಮತ್ತು ಮುಂಬೈನಲ್ಲಿ ವಾಣಿಜ್ಯ ಅನಿಲ ಸಿಲಿಂಡರ್ಗಳ ಬೆಲೆಯನ್ನು ಇಳಿಸಲಾಗಿದ್ದು, ಬೆಲೆ 83.50 ರೂ.ಗೆ ಇಳಿದಿದೆ.

ದೇಶದ ಹಲವು ನಗರಗಳ ವಾಣಿಜ್ಯ ಸಿಲಿಂಡರ್ ಬೆಲೆ ಹೀಗಿದೆ. ದೇಶದ ರಾಜಧಾನಿ ದೆಹಲಿಯಲ್ಲಿ (Delhi) ವಾಣಿಜ್ಯ ಅನಿಲ ಸಿಲಿಂಡರ್ ಬೆಲೆ 1,773 ರೂ, ಚೆನ್ನೈ ನಲ್ಲಿ 1937 ರೂ, ಮುಂಬೈನಲ್ಲಿ (Mumbai) 1725 ರೂ ರೂಪಾಯಿ ಇದ್ದರೆ, ಕೋಲ್ಕತ್ತಾದಲ್ಲಿ 1960.50 ರೂ., ರೂಪಾಯಿ ಇದೆ.

 

ಇದನ್ನು ಓದಿ: Shri Subrahmanya temple: ಸರ್ವೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆವರಣ ಗೋಡೆ ಕುಸಿತ 

Leave A Reply

Your email address will not be published.