White Crow: ನೀವು ಬಿಳಿ ಕಾಗೆ ನೋಡಿದ್ದೀರಾ? ಅಪರೂಪಕ್ಕೆ ಕಾಣಿಸಿಕೊಳ್ಳುವ ಬಿಳಿ ಕಾಗೆಯಿಂದ ದೇಶಕ್ಕೆ ಕಾದಿದೆಯಾ ಗಂಡಾಂತರ?

danger waiting for the country from the white crow

Share the Article

White Crow: ಕಪ್ಪು ಕಾಗೆ (black Crow) ಎಲ್ಲರೂ ನೋಡಿರುತ್ತೀರಾ. ಆದರೆ, ಈ ಕಪ್ಪು ಕಾಗೆ ಕೂಡ ಇತ್ತೀಚೆಗೆ ಕಾಣಸಿಗೋದು ವಿರಳ. ಬಹುಶಃ ಮುಂದಿನ ಪೀಳಿಗೆಗೆ ಕಾಗೆಗಳ ಚಿತ್ರ ತೋರಿಸಿ ಹೇಳಬೇಕೇನೋ ಎಂಬಷ್ಟು ಇವುಗಳು ಕಣ್ಮರೆಯಾಗಿವೆ. ಆದರೆ, ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿರುತ್ತದೆ. ನಿಮಗೆ ಕಪ್ಪು ಕಾಗೆ ಗೊತ್ತು ಬಿಳಿ ಕಾಗೆ (White Crow) ಗೊತ್ತಿದ್ಯಾ? ಕೆಲವರಿಗೆ ಗೊತ್ತಿರಲಿಕ್ಕಿಲ್ಲ ಬಿಳಿ ಬಣ್ಣದ ಕಾಗೆಯೂ ಇದೆ. ಆದರೆ, ಇದು ನೋಡಲು ಸಿಗುವುದು ಅಪರೂಪದಲ್ಲಿ ಅಪರೂಪ.

ಈ ಹಿಂದೆ ತಮಿಳುನಾಡಿನಲ್ಲಿ ಈ ಅಪರೂಪದ ಬಿಳಿ ಕಾಗೆ ಪತ್ತೆಯಾಗಿತ್ತು. ಕೆಲವು ಕಪ್ಪು ಕಾಗೆಗಳ ಮಧ್ಯೆ ಈ ಬಿಳಿ ಕಾಗೆಯೂ ಇತ್ತು. ಇದನ್ನು ಕಂಡು ಜನರು ಆಶ್ಚರ್ಯಚಕಿತರಾಗಿದ್ದರು. ಅಲ್ಲಿ ಮಾತ್ರವಲ್ಲ ಪುಣೆಯ ಲುಲ್ಲಾ ನಗರ ಪ್ರದೇಶದಲ್ಲಿಯೂ ಬಿಳಿ ಕಾಗೆ ಕಾಣಿಸಿಕೊಂಡಿತ್ತು. ರಸ್ತೆಯಲ್ಲಿ ಕಪ್ಪುಕಾಗೆಗಳೊಡನೆ ಆಹಾರ ತಿನ್ನುತ್ತಿತ್ತು. ಜನರು ಅಚ್ಚರಿಯಿಂದ ಇದರ ಫೋಟೋ ಕ್ಲಿಕ್ಕಿಸಿದ್ದರು. ಬಳಿಕ ಈ ವಿಚಾರ ಸಖತ್ ವೈರಲ್ ಆಗಿತ್ತು. ಆದರೆ, ಬಿಳಿ ಕಾಗೆ ಕಂಡರೆ ಸಮಸ್ಯೆ ಉಂಟಾಗುತ್ತದೆಯಂತೆ. ಬಿಳಿ ಕಾಗೆಯ ಹಿಂದೆ ರಹಸ್ಯ ಅಡಗಿದೆ!.

ಜ್ಯೋತಿಷ್ಯದ ಪ್ರಕಾರ, ಕಾಗೆಗಳು ನಮ್ಮ ಹಿರಿಯರ ಸಂಕೇತವಾಗಿದೆ. ಇದು ನಮ್ಮ ಪೂರ್ವಜರು ನೀಡುವ ಒಂದು ಸಂಕೇತ. ಆ ಸಂಕೇತ ಒಳ್ಳೆಯದು ಆಗಿರಬಹುದು ಅಥವಾ ಕೆಟ್ಟದೂ ಆಗಿರಬಹುದು. ಬಿಳಿ ಕಾಗೆಗಳ ಕಣ್ಣು ದೇಶಕ್ಕೆ ಮಾರಕ ಎನ್ನಲಾಗಿದೆ. ಅವುಗಳಿಂದ ಸಮಸ್ಯೆ ಆಗುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಹಾಗಾಗಿ ಹೆಚ್ಚಾಗಿ ಬಿಳಿ ಕಾಗೆ ಕಂಡರೆ ಒಳ್ಳೆಯದಕ್ಕಿಂತ ಕೆಟ್ಟದ್ದೆ ಜಾಸ್ತಿ ಆಗುತ್ತದೆ ಎಂಬುದು ಜನರ ನಂಬಿಕೆ.

ತಜ್ಞರ ಪ್ರಕಾರ, ಬಿಳಿ ಕಾಗೆ ಬಹಳ ಅಪರೂಪವಾಗಿದ್ದು, ಹತ್ತು ಸಾವಿರ ಕಾಗೆಗಳಲ್ಲಿ ಒಂದು ಬಿಳಿಯಾಗಿರುತ್ತದೆ. ಇದು ಆನುವಂಶಿಕ ಅಸ್ವಸ್ಥತೆಯಿಂದ ಉಂಟಾಗುತ್ತದೆ. ಮತ್ತು ಅಲ್ಬಿನಿಸಂ ಅಥವಾ ಲ್ಯೂಸಿಸಮ್ಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಗರಿಗಳಲ್ಲಿ ವರ್ಣದ್ರವ್ಯದ ಕೊರತೆ ಉಂಟಾಗುತ್ತದೆ. ಕಪ್ಪು ಕಾಗೆಗಳ ಸಂತಾನೋತ್ಪತ್ತಿಯಲ್ಲಿ ಪ್ರತಿ 30,000 ಕಾಗೆಗಳಲ್ಲಿ ಒಮ್ಮೆ ಈ ಅಲ್ಬಿನೋಸ್ ಉಂಟಾಗುತ್ತದೆ. ಕೆಲ ಕಾಗೆಗಳು ತಮ್ಮ ಚರ್ಮ ಅಥವಾ ಕೂದಲಿನಲ್ಲಿ ಮೆಲನಿನ್ ಕೊರತೆಯಿಂದಾಗಿ ಬಿಳಿಯಾಗಿ ಕಾಣಿಸುತ್ತವೆ. ಈ ರೀತಿ ಬಿಳಿ ಇರುವ ಅಲ್ಬಿನೋ ಕಾಗೆಗಳು ಪಿಂಕ್ ಬಣ್ಣದ ಕಾಲುಗಳನ್ನು ಹೊಂದಿರುತ್ತವೆ. ಇವು ನೋಡಲು ವಿಭಿನ್ನವಾಗಿದ್ದು, ಹೆಚ್ಚು ಕಾಲ ಬದುಕುವುದಿಲ್ಲ.

Leave A Reply