NIA Raid: ದಕ್ಷಿಣ ಕನ್ನಡದಲ್ಲಿ ದುಷ್ಕೃತ್ಯಕ್ಕೆ ಯತ್ನ? ಹಲವೆಡೆ 16 ಕಡೆಗಳಲ್ಲಿ ದಾಳಿ ನಡೆಸಿದ NIA, ಆಸ್ಪತ್ರೆಗಳನ್ನೂ ಬಿಡದೆ ಜಾಲಾಡಿದ ಅಧಿಕಾರಿಗಳು !

NIA Raid on Dakshina Kannada

NIA Raid: ದಕ್ಷಿಣ ಕನ್ನಡದ ಹಲವೆಡೆ NIA ದಾಳಿ ( NIA Raid) ಬೆಳ್ತಂಗಡಿ, ಪುತ್ತೂರು ಮತ್ತು ಬಂಟ್ವಾಳದ ಹಲವು ಕಡೆ ಎನ್ಐಎ ದಾಳಿ ನಡೆಸಿದೆ. ಒಟ್ಟು 16 ಕಡೆಗಳಲ್ಲಿ ದಾಳಿ ನಡೆಸಿದೆ.

 

ಇತ್ತೀಚೆಗೆ ಬಿಹಾರದಲ್ಲಿ ನಡೆದಿದ್ದ (Bihar) ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಕಾರ್ಯಕ್ರಮದ ವೇಳೆ ದುಷ್ಕೃತ್ಯಕ್ಕೆ ನಡೆಸಲು ಸಂಚು ರೂಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಟ್ವಾಳ, ಬೆಳ್ತಂಗಡಿ, ಉಪ್ಪಿನಂಗಡಿ, ವೇಣೂರು ಸೇರಿದಂತೆ 16 ಕಡೆ ಹಲವರ ಮನೆಗಳ ಮೇಲೆ ದಾಳಿ ನಡೆದಿದೆ. ಅಲ್ಲದೆ ಹಲವು ಕಚೇರಿಗಳು ಮತ್ತು ಒಂದು ಆಸ್ಪತ್ರೆ ಮೇಲೆ ಕೂಡಾ ದಾಳಿಮಾಡಿ ಪರಿಶೀಲನೆ ನಡೆಸಿದ್ದಾರೆ ಎನ್ನುವ ಮಾಹಿತಿ ಲಭ್ಯ ಆಗಿದೆ.

ಪುತ್ತೂರಿನ ಕೂರ್ನಡ್ಕ, ತಾರಿಪಡ್ಪು ಕುಂಬ್ರ ಹೀಗೇ 3 ಕಡೆಯಿಂದ ಒಟ್ಟು ನಾಲ್ಕು ಜನರನ್ನು NIA ತಂಡ ವಶಕ್ಕೆ ಪಡೆದ ಮಾಹಿತಿ ಲಭ್ಯವಾಗಿದೆ.

ನಿಷೇಧಿತ ಪಿ ಎಫ್ ಐ ಸಂಘಟನೆಯ ಮೂಲಕ ಹವಾಲಾಹಣ ಕೈ ಬದಲಾಗುತ್ತಿರುವ ಮಾಹಿತಿ ರಾಷ್ಟ್ರೀಯ ತನಿಖಾ ದಳಕ್ಕೆ ಸಿಕ್ಕಿದೆ. ಹಣ ರಾಷ್ಟ್ರೀಯ ಭಯೋತ್ಪಾದನಾ ಚಟುವಟಿಕೆಗಳಿಗೆ ಬಳಕೆಯಾಗುತ್ತಿರಬಹುದು ಎನ್ನುವ ಸಂಶಯದ ಮೇಲೆ ಹಲವು ಕಚೇರಿಗಳು ಮತ್ತು ದಾಳಿ ನಡೆದಿದೆ.

ಪುತ್ತೂರಿನಲ್ಲಿ ಈ ಹಿಂದೆ 2 ಬಾರಿ NIA ದಾಳಿ ನಡೆಸಿತ್ತು. ಪುತ್ತೂರಿನ ಪಕ್ಕದ ಬೆಳ್ಳಾರೆಯಲ್ಲಿ ಪ್ರವೀಣ್ ನೆಟ್ಟಾರ್ ಹತ್ಯೆ ಆಗಿತ್ತು. ಅದು ರಾಜ್ಯಾದ್ಯಂತ ಗದ್ದಲ ಆದ ನಂತರ ಪ್ರಕರಣವನ್ನು NIA ಗೆ ವಹಿಸಿತ್ತು ಆಗಿನ ಬಿಜೆಪಿ ಸರ್ಕಾರ.

ಇದೀಗ ಮತ್ತೆ ದಕ್ಷಿಣಕನ್ನಡದ ಹಲವೆಡೆ ದಾಳಿ ನಡೆದಿರುವುದು ಆತಂಕ ಮೂಡಿಸಿದ್ದು,ಕೋಮು ಸೂಕ್ಷ್ಮ ಪ್ರದೇಶದಲ್ಲಿ ಇನ್ನೇನು ಅನಾಹುತಗಳಿಗೆ ಸ್ಕೆಚ್ ಭಯಲಾಗುತ್ತಿದೆಯೋ ಎನ್ನುವ ಅನುಮಾನ ಕಾಡಿದೆ. ಹೆಚ್ಚಿನ ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ.

ಮೊಹಮ್ಮದ್ ಹ್ಯಾರಿಸ್, ಸಜ್ಜದ್, ಫೈಜಲ್ ಅಹ್ಮದ್ ಮತ್ತು ಸಂಶುದ್ದೀನ್ ಬಂಧಿತ ಆರೋಪಿಗಳು.

Leave A Reply

Your email address will not be published.