ಸಚಿವ ಸಂಪುಟ ಸಭೆ ಶುಕ್ರವಾರಕ್ಕೆ ಮುಂದೂಡಿಕೆ

Cabinet meeting adjourned to Friday

Share the Article

Cabinet meeting: ಕರ್ನಾಟಕ ವಿಧಾನ ಸಭೆ ಚುನಾವಣೆ ಭಾರೀ ಬಹುಮತದೊಂದಿಗೆ ಗೆಲುವು ಸಾಧಿಸಿದ ಕಾಂಗ್ರೆಸ್‌ 5 ಗ್ಯಾರೆಂಟಿ ಯೋಜನೆ ಜಾರಿ ಕುರಿತು ನಾಳೆ ನಿಗದಿಯಾಗಿದ್ದ ಮಹತ್ವದ ಕ್ಯಾಬಿನೆಟ್ ಸಭೆಯನ್ನು (Cabinet meeting) ಶುಕ್ರವಾರಕ್ಕೆ ಮುಂದೂಡಿಕೆ ಮಾಡಲಾಗಿದೆ.

ನಾಳೆ ನಿಗದಿಯಾಗಿದ್ದ ಸಚಿವ ಸಂಪುಟ ಸಭೆಯನ್ನು ಶುಕ್ರವಾರ ಬೆಳಗ್ಗೆ 11 ಗಂಟೆಗೆ ಮುಂದೂಡಲಾಗಿದೆ. ಇಂದು ಎಲ್ಲಾ ಇಲಾಖೆಗಳ ಸಚಿವರುಗಳ ಜೊತೆ ಸಿಎಂ ಸಿದ್ದರಾಮಯ್ಯ ಸಭೆ ನಡೆಸಿ ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ.

ಚುನಾವಣಾ ಪ್ರಚಾರದ ವೇಳೆ ಕಾಂಗ್ರೆಸ್‌ ಐದು ಗ್ಯಾರಂಟಿಗಳ ಜಾರಿಗೆ ತರುವುದಾಗಿ ಮಹತ್ತರ ಭರವಸೆಯನ್ನು ಜನರಿಗೆ ನೀಡಿತ್ತು. ಗ್ಯಾರೆಂಟಿ ಯೋಜನೆಯ ಸಾಧಕ ಬಾಧಕ ಬಗ್ಗೆಇಂದು ಮಧ್ಯಾಹ್ನ 12 ಕ್ಕೆ ನಡೆದ ಇಲಾಖಾವಾರು ಸಚಿವರ ಜೊತೆ ಸಿಎಂ ಸಿದ್ದರಾಮಯ್ಯ ಸುದೀರ್ಘ ಚರ್ಚೆ ನಡೆಸಲಿದ ಬಳಿಕ ಶುಕ್ರವಾರಕ್ಕೆ ಮುಂದೂಡಿಕೆ ಮಾಡಿದ್ದಾರೆ. ನಾಳೆಯೇ ಗ್ಯಾರಂಟಿ ಯೋಜನೆ ಘೋಷಣೆಯ ನಿರೀಕ್ಷೆಯಲ್ಲಿದ್ದ ಜನತೆಗೆ ಮತ್ತೆ ನಿರಾಸೆ ಮೂಡಿದಂತೂ ನಿಜ .

ಇದನ್ನೂ ಓದಿ: K. S. Eshwarappa: ಪ್ರಿಯಾಂಕಾ ಖರ್ಗೆ ಇನ್ನೂ ಬಚ್ಚಾ ಅವನೇನು ಮಾಡಲು ಸಾಧ್ಯ ?- ಈಶ್ವರಪ್ಪ ಹೇಳಿಕೆ

Leave A Reply