Pavitra lokesh: ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ PHD ಮಾಡಲು ಮುಂದಾದ ಪವಿತ್ರ ಲೋಕೇಶ್! ಪ್ರವೇಶ ಪರೀಕ್ಷೆ ಬರೆಯಲು ನರೇಶ್ ಸಾಥ್!!
Actress Pavitra Lokesh appears PhD entrance exam in Hampi kannada University
Pavitra lokesh: ಸಾಕಷ್ಟುವಿವಾದ ಸೃಷ್ಟಿಸಿದ್ದ ಪವಿತ್ರಾ ಲೋಕೇಶ್(Pavitra lokesh) ಹಾಗೂ ನರೇಶ್(Naresh) ಜೋಡಿ ಇದೀಗ ಸಿಹಿ ಸುದ್ದಿಯೊಂದು ನೀಡಿದ್ದಾರೆ. ಕನ್ನಡ ಸಾಹಿತ್ಯದಲ್ಲಿ(Kannada literature) ಪಿಹೆಚ್‌ಡಿ(PHD) ಮಾಡಲು ಪವಿತ್ರಾ ಲೋಕೇಶ್ ಪ್ರವೇಶ ಪರೀಕ್ಷೆ ಬರೆದಿದ್ದಾರೆ.
ಹೌದು, ನಟ ನರೇಶ್ ಜತೆಗಿನ ಪ್ರೀತಿ, ವಿವಾದ, ಮದುವೆ(Marriage) ಕಾರಣಕ್ಕೆ ಸುದ್ದಿಯಲ್ಲಿದ್ದ ಪವಿತ್ರಾ, ಇದೀಗ ಬೇರೆಯದೇ ವಿಚಾರವಾಗಿ ಇಂದು ಮತ್ತೆ ಮುನ್ನೆಲೆಗೆ ಬಂದಿದ್ದಾರೆ. ಅಷ್ಟಕ್ಕೂ ಅವರು ಪಿಎಚ್ಡಿ ಪರೀಕ್ಷೆ ಬರೆಯಲು ಮುಂದಾಗಿರುವುದೇ ಅವರೀಗ ಇನ್ನೊಮ್ಮೆ ಸುದ್ದಿಯಾಗಲು ಕಾರಣ. ಪವಿತ್ರಾ ಅವರು ನಿನ್ನೆ ದಿನ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ(Kannada university hampi)ಪಿಹೆಚ್‌ಡಿ ಪ್ರವೇಶ ಪರೀಕ್ಷೆ ಬರೆದಿದ್ದರೆ. ವಿಶೇಷ ಅಂದರೆ ಕನ್ನಡ ಸಾಹಿತ್ಯದಲ್ಲಿ ಪಿಹೆಚ್‌ಡಿ ಮಾಡಲು ಪವಿತ್ರಾ ಲೋಕೇಶ್ ಅರ್ಜಿ ಸಲ್ಲಿಸಿದ್ದಾರೆ.
ಅಂದಹಾಗೆ ಕನ್ನಡ ವಿಶ್ವವಿದ್ಯಾಲಯ ಹಂಪಿಯ ಬೆಳಗಾವಿ ವಿಸ್ತರಣಾ ಕೇಂದ್ರದ ಮೂಲಕ ಕನ್ನಡ ಸಾಹಿತ್ಯ ವಿಭಾಗದಲ್ಲಿ ಪಿಎಚ್ಡಿ ಮಾಡಲು ಅರ್ಜಿ ಸಲ್ಲಿಸಿದ್ದ ಪವಿತ್ರಾ ಲೋಕೇಶ್, ಇಂದು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ಬರೆದಿದ್ದಾರೆ. ವಿಶೇಷವೆಂಬಂತೆ ಈ ಸಂದರ್ಭದಲ್ಲಿ ಪವಿತ್ರಾ ಜತೆ ನರೇಶ್ ಕೂಡ ಕಾಣಿಸಿಕೊಂಡಿದ್ದಾರೆ.
ಅಂದಹಾಗೆ ಇತ್ತೀಚಿನ ದಿನಗಳಲ್ಲಿ ಪವಿತ್ರಾ ಲೋಕೇಶ್ ಹಾಗೂ ನರೇಶ್ ಬಾಬು ಟೀಕೆಗೆ ಗುರಿಯಾಗಿದ್ದಾರೆ. ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಟ್ರೋಲ್ ಆಗಿದ್ದಾರೆ. ಇದರಿಂದ ಆಕ್ರೋಶಗೊಂಡಿದ್ದ ಪವಿತ್ರಾ ಲೋಕೇಶ್ ಇತ್ತೀಚಿಗೆ ಟಿಕೆ, ಟಿಪ್ಪಣಿ ಕುರಿತು ಖಡಕ್ ಸಂದೇಶ ರವಾನಿಸಿದ್ದರು. ನನ್ನ ತಂದೆ ಕನ್ನಡ ಚಿತ್ರರಂಗದಲ್ಲಿದ್ದವರು. ಅಣ್ಣಾವ್ರು ಅಪ್ಪನಿಗೆ ಕೊಟ್ಟಬೆಳ್ಳಿ ಲೋಟದಲ್ಲಿ ಹಾಲು ಕುಡಿದು ಬೆಳೆದವಳು ನಾನು. ತಂದೆ ತೀರಿಕೊಂಡ ಮೇಲೆ ನಾನು ನಟಿಸಲು ಶುರು ಮಾಡಿದೆ. ತಾಯಿ ಶಿಕ್ಷಕಿ. ಸುಶಿಕ್ಷಿತ ಕುಟುಂಬ ನಮ್ಮದು. ಅನೇಕ ಪಾತ್ರಗಳನ್ನು ಮಾಡುತ್ತಾ ಬಿಡುವಿಲ್ಲದೆ ದುಡಿದು ಹಣ ಸಂಪಾದನೆ ಮಾಡಿದ್ದೇನೆಯೇ ಹೊರತು ಇನ್ನೊಬ್ಬರನ್ನು ದೋಚಿಲ್ಲ. ಆ ಬುದ್ಧಿ ನನಗಿಲ್ಲ ಎಂದು ಪವಿತ್ರಾ ಲೋಕೇಶ್ ಹೇಳಿದ್ದರು.