Dhirendra Krishna Shastri: ಹಿಂದೂ ಒಂದಾದರೆ ಪಾಕಿಸ್ತಾನವನ್ನು ಕೂಡಾ ಹಿಂದೂ ರಾಷ್ಟ್ರ ಮಾಡಬಹುದು – Bageshwar Baba ಹೇಳಿಕೆ!

Will make Pakistan a Hindu nation if Bageshwar Dhams Dhirendra Shastri

Dhirendra Krishna Shastri: ಮಧ್ಯಪ್ರದೇಶ (madhya pradesh) ಮೂಲದ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Krishna Shastri) ಅವರು ಒಬ್ಬ ಸ್ವಯಂಘೋಷಿತ ದೇವಮಾನವರಾಗಿದ್ದು ಜನಪ್ರಿಯವಾಗಿ ಬಾಗೇಶ್ವರ್ ಧಾಮ್ ಸರ್ಕಾರ್ (Bageshwar Baba) ಎಂದೇ ಗುರುತಿಸಲ್ಪಟ್ಟಿದ್ದಾರೆ. ಇವರು ಮಧ್ಯಪ್ರದೇಶದ ಛತ್ತರ್ಪುರದ ಬಾಗೇಶ್ವರ್ ಧಾಮ ದೇವಾಲಯದ ಮುಖ್ಯಸ್ಥರಾಗಿದ್ದಾರೆ. ಇವರು ಸಾಮಾಜಿಕ ಜಾಲತಾಣಗಳಲ್ಲಿ ಪ್ರವಚನ, ಕಾರ್ಯಕ್ರಮಗಳಲ್ಲಿ ಮಾತನಾಡಿದ ಮಾತುಗಳು ವೈರಲ್ ಆಗುತ್ತಿರುತ್ತದೆ.

 

ಇದೀಗ ಇವರು ಹಿಂದೂ ರಾಷ್ಟ್ರದ ಬಗ್ಗೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು, “ಹಿಂದೂಗಳು ಒಂದಾದರೆ ಪಾಕಿಸ್ತಾನವನ್ನು ಕೂಡಾ ಹಿಂದೂ ರಾಷ್ಟ್ರ ಮಾಡಬಹುದು” ಎಂಬ ಹೇಳಿಕೆ ನೀಡಿದ್ದಾರೆ. ಸದ್ಯ ಈ ವಿಚಾರ ಸಖತ್ ವೈರಲ್ ಆಗಿದೆ.

ಇತ್ತೀಚೆಗೆ ಗುಜರಾತ್’ನ (gujarat) ಸೂರತ್‌ ನಲ್ಲಿ ನಡೆದ ಸಾರ್ವಜನಿಕೆ ಸಭೆಯಲ್ಲಿ ಮಾತನಾಡಿದ ಧೀರೇಂದ್ರ ಅವರು “ಗುಜರಾತಿನ ಜನರು ಈ ರೀತಿ ಒಂದಾದರೆ ಭಾರತ ಮಾತ್ರವಲ್ಲ ಪಾಕಿಸ್ತಾನವನ್ನೂ ಹಿಂದೂ ರಾಷ್ಟ್ರವನ್ನಾಗಿ ಮಾಡಬಹುದು. ಗುಜರಾತಿನ ಜನರಿಂದ ನಾನು ಧನ, ಸಂಪತ್ತನ್ನು ಪಡೆಯಲು ಬಂದಿಲ್ಲ. ಹಿಂದುತ್ವದ ವಿಚಾರದಲ್ಲಿ ಹಿಂದೂಗಳು ಒಂದಾಗಿರಬೇಕು” ಎಂದು ಅವರು ಹೇಳಿದ್ದಾರೆ.

 

ಧೀರೇಂದ್ರ ಕೃಷ್ಣ ಶಾಸ್ತ್ರಿ ಅವರು ಸಾಕಷ್ಟು ಪವಾಡಶಕ್ತಿಯುಳ್ಳ ದೇವಮಾನವ ಎಂದು ನಂಬಲಾಗಿದ್ದು, ತಮ್ಮ ಪವಾಡ ಹಾಗೂ
ಬೋಧನೆಯಿಂದ ಅಪಾರ ಭಕ್ತ ಸಮೂಹವನ್ನು ಹೊಂದಿದ್ದಾರೆ.
ಇವರು ದೈವಿಶಕ್ತಿಯನ್ನು ಹೊಂದಿದ್ದು, ಮತ್ತೊಬ್ಬರ ಮನಸ್ಸನ್ನು ನಿರಾಯಾಸವಾಗಿ ಓದಬಲ್ಲರು ಎಂದು ಅವರ ಅನುಯಾಯಿಗಳು ನಂಬುತ್ತಾರೆ.

ಇದನ್ನೂ ಓದಿ:Chennai: ಈತ ದುಪ್ಪಟ್ಟ ಶರವಣನ್: ಹುಡುಗೀರು ದುಪ್ಪಟ್ಟ ಹಾಕದೆ ರಸ್ತೆ ಇಳಿದ್ರು ಅಂದ್ರೆ ಸೈಕೊ ಆಗ್ತಿದ್ದ ಶರವಣನ್!

Leave A Reply

Your email address will not be published.