ನವೋದಯ ವಿದ್ಯಾಲಯ ಸಮಿತಿಯಲ್ಲಿ 321 ಶಿಕ್ಷಕರ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಿ!!
Navodaya Vidyalaya Samiti invites applications for 321 teacher posts
Navodaya Vidyalaya Samiti: ಶಿಕ್ಷಕ ಹುದ್ದೆಯ ಆಕಾಂಕ್ಷಿಗಳಿಗೆ ಗುಡ್‌ನ್ಯೂಸ್. ಜವಾಹರ ನವೋದಯ ವಿದ್ಯಾಲಯದಲ್ಲಿ (Navodaya Vidyalaya Samiti) 2023-24ನೇ ಸಾಲಿಗೆ ಬೇಕಾಗಿರುವ, ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಲು ಶಿಕ್ಷಕ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇ-ಮೇಲ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಹಾರ್ಡ್ ಕಾಪಿ ನೀಡುವ ಅಗತ್ಯವಿಲ್ಲ. ಟಿಜಿಟಿ, ಪಿಜಿಟಿ, ಎಂಯೆಸ್‌ಸಿ ಕೆಟಗರಿಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಹುದ್ದೆಗಳನ್ನು ಬಿಹಾರ, ಜಾರ್ಖಾಂಡ್, ಪಶ್ಚಿಮ ಬಂಗಾಳದಲ್ಲಿ ನೇಮಕ ಮಾಡಲಾಗುತ್ತದೆ. ಹುದ್ದೆಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಈ ಕೆಳಗೆ ನೀಡಲಾಗಿದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 10-06-2023
ಹುದ್ದೆಗಳು ಹಾಗೂ ಸಂಖ್ಯೆ: ಸ್ನಾತಕೋತ್ತರ ಪದವೀಧರ ಶಿಕ್ಷಕರು (PGTs) : 161, ತರಬೇತುದಾರ ಪದವೀಧರ ಶಿಕ್ಷಕರು (TGTs) : 160
ಮಾಸಿಕ ಸಂಭಾವನೆ ಹುದ್ದೆಗಳಿಗನುಸಾರವಾಗಿ ಈ ಕೆಳಗೆ ನೀಡಲಾಗಿದೆ:
ಪೋಸ್ಟ್ ಗ್ರಾಜುಯೇಟ್ ಟೀಚರ್: Rs.35,750 ಮಾಸಿಕ.
ತರಬೇತುದಾರ ಪದವೀಧರ ಶಿಕ್ಷಕರು: Rs.34,125 ಮಾಸಿಕ.
Misc, ಕೆಟಗರಿ ಶಿಕ್ಷಕರು : Rs.34,125 ಮಾಸಿಕ.
ವಿದ್ಯಾರ್ಹತೆ:
ಸ್ನಾತಕೋತ್ತರ ಪದವೀಧರ ಶಿಕ್ಷಕರು (PGTs) : ಎಂಎ/ ಎಂಎಸ್ಸಿ ಜತೆಗೆ ಬಿ.ಇಡಿ.
ತರಬೇತುದಾರ ಪದವೀಧರ ಶಿಕ್ಷಕರು (TGTs) : ಬಿಎ/ ಬಿಎಸ್ಸಿ ಜತೆಗೆ ಬಿ.ಇಡಿ.
ವಯೋಮಿತಿ: ಜುಲೈ 01 ಕ್ಕೆ ಅಭ್ಯರ್ಥಿಗಳ ವಯಸ್ಸು ಗರಿಷ್ಠ 50 ವರ್ಷ ಮೀರಿರಬಾರದು. ಎನ್‌ವಿಎಸ್ ಮಾಜಿ ಶಿಕ್ಷಕರಿಗೆ ಗರಿಷ್ಠ 62 ವರ್ಷ ವಯಸ್ಸು ಮೀರಿರಬಾರದು.
ಸಂದರ್ಶನ ದಿನಾಂಕ: 2023 ಜೂನ್ 19-21 ರವರೆಗೆ.
ಹೆಚ್ಚಿನ ಮಾಹಿತಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ
ಇದನ್ನೂ ಓದಿ: ಕಡಬ: ಗಾಳಿ ಮಳೆಗೆ ಎರಡು ಕಾರುಗಳ ಮೇಲೆ ಬಿದ್ದ ಮರ ,ಸಂಚಾರ ಅಸ್ತವ್ಯಸ್ತ