2018 Movie: ಗಲ್ಲಾಪೆಟ್ಟಿಗೆ ನೂರಾರು ಕೋಟಿ ಬಾಚಿದ ಮಲಯಾಳಂ ಸಿನಿಮಾ ʼ2018′ ಒಟಿಟಿಯಲ್ಲಿ ಬಿಡುಗಡೆ! ಹೆಚ್ಚಿನ ವಿವರ ಇಲ್ಲಿದೆ

Malyalam movie 2018 released in OTT

2018 movie: ಮಲಯಾಳಂ ಸೂಪರ್‌ ಹಿಟ್‌ ಮೂವಿ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಬಾಚಿ ದಾಖಲೆ ಮಾಡಿದ ಮೂವಿ ʼ2018′ ಒಟಿಟಿಗೆ ಲಗ್ಗೆ ಇಟ್ಟಿದೆ. ಜೂನ್‌ 7ರಂದು ʼ2018′ ಸಿನಿಮಾ( 2018 movie) ಒಟಿಟಿಯಲ್ಲಿ ಜನರ ವೀಕ್ಷಣೆಗೆ ಲಭ್ಯವಿದೆ. ಈ ಸಿನಿಮಾ ಚಿತ್ರಮಂದಿರದಲ್ಲೇ ಉತ್ತಮ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಯಲ್ಲಿ ಪ್ರದರ್ಶನಕ್ಕೆ ರೆಡಿಯಾಗಿದೆ.

 

ಮಲಯಾಳಂನಲ್ಲಿ ಸೂಪರ್‌ ಹಿಟ್‌ ಆದ ಈ ಸಿನಿಮಾ ನಂತರ ತೆಲುಗಿಗೂ ಡಬ್‌ ಆಗಿ ಬಾಕ್ಸ್‌ಆಫೀಸ್‌ ಚಿಂದಿ ಮಾಡಿದೆ. ಅಂದ ಹಾಗೆ ಈ ಸಿನಿಮಾದ ಒಟಿಟಿ ಚಿತ್ರದ ಪ್ರಸಾರ ಹಕ್ಕನ್ನು ʼಸೋನಿ ಲಿವ್‌ʼ ʻ(Sony Liv) ಸಂಸ್ಥೆ ಖರೀದಿಸಿದೆ. ಹಾಗಾಗಿ ಯಾರೆಲ್ಲ ಥಿಯೇಟರ್‌ನಲ್ಲಿ ಈ ಸಿನಿಮಾ ನೋಡಲು ಮಿಸ್‌ ಮಾಡಿದ್ದೀರೋ ಅವರೆಲ್ಲ ಒಟಿಟಿಯಲ್ಲಿ ಈ ಸಿನಿಮಾವನ್ನು ನೋಡಬಹುದು.

ಈ ಸಿನಿಮಾದ ಜೀವಾಳ, ನಾಯಕ, ಟೊವಿನೋ ಥಾಮಸ್‌ (Tovino Thomas) ಬಹಳ ಮುಖ್ಯ ಪಾತ್ರ ನಿಭಾಯಿಸಿದ್ದಾರೆ. ಚಿತ್ರಮಂದಿರಲ್ಲಿ ಹೌಸ್‌ಫುಲ್‌ ಪ್ರದರ್ಶನ ಕಾಣುತ್ತಿರುವ ಈ ಸಿನಿಮಾವ ಒಟಿಟಿಯಲ್ಲಿ ರಿಲೀಸ್‌ ಆಗುವುದರಿಂದ ಕೆಲವರು ತಮ್ಮ ಬೇಸರ ವ್ಯಕ್ತಪಡಿಸಿದ್ದಾರೆ. ಬಾಕ್ಸ್‌ಆಫೀಸ್‌ನಲ್ಲಿ ಚೆನ್ನಾಗಿ ಕಲೆಕ್ಷನ್‌ ಆಗುತ್ತಿದ್ದ ಈ ಸಿನಿಮಾವನ್ನು ಈಗಲೇ ಒಟಿಟಿಯಲ್ಲಿ ಬಿಡಲು ಕಾರಣವೇನೆಂದು ಕೇಳುತ್ತಿದ್ದಾರೆ. ಇದರ ಒಟಿಟಿ ಪ್ರಸಾರ ಸಮಯವನ್ನು ಮುಂದೂಡಬಹುದಲ್ಲವೇ ಎಂಬ ಪ್ರಶ್ನೆಯನ್ನು ನೆಟ್ಟಿಗರು ಮಾಡುತ್ತಿದ್ದಾರೆ.

ಈ ಸಿನಿಮಾದಲ್ಲಿ 2018 ರಲ್ಲಿ ಕೇರಳದಲ್ಲಿ ಉಂಟಾದ ಪ್ರವಾಹದ ಕುರಿತು ಸಿನಿಮಾ ಎನ್ನಲಾಗಿದೆ. ಈ ಸಂದರ್ಭದಲ್ಲಿ ಅಲ್ಲಿನ ಜನರು ಯಾವ ರೀತಿ ನಡೆದುಕೊಂಡರು ಎಂಬುವುದನ್ನು ಎಳೆಎಳೆಯಾಗಿ ತೋರಿಸಿದ್ದಾರೆ. 1924ರ ನಂತರ ಕೇರಳದಲ್ಲಿ ಅತಿ ಭೀಕರ ಪ್ರವಾಹ ಇದಾಗಿದೆ ಎಂದು ಹೇಳಲಾಗಿದೆ. ಈ ಪ್ರವಾಹದಲ್ಲಿ ಕೇರಳದ 400ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದು, ಹಲವರು ನಾಪತ್ತೆಯಾಗಿದ್ದರು.

ಈ ಸಿನಿಮಾದಲ್ಲಿ ಮಲಯಾಳಂನ ಘಟಾನುಘಟಿ ನಟರು ನಟಿಸಿದ್ದಾರೆ. ಟೊವಿನೋ ಥಾಮಸ್​ ಜೊತೆ ಆಸಿಫ್​ ಅಲಿ, ಅಪರ್ಣಾ ಬಾಲಮುರಳಿ, ವಿನೀತ್​ ಶ್ರೀನಿವಾಸನ್​, ಕಲೈಯರಸನ್​, ಸುದೇಶ್​, ಅಜು ವರ್ಗೀಸ್​, ತನ್ವಿ ರಾಮ್​, ಗೌತಮಿ ನಾಯರ್​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಜೂಡ್​ ಆಂಥೊನಿ ಜೋಸೆಫ್​ ಅವರು ನಿರ್ದೇಶನದಲ್ಲಿ ಅತ್ಯದ್ಭುತವಾಗಿ ಈ ಸಿನಿಮಾ ಮೂಡಿ ಬಂದಿದೆ. 2018 ಸಿನಿಮಾ ಇಲ್ಲಿಯವರೆಗೂ 160 ಕೋಟಿ ಬಾಚಿದ್ದು ಅತಿ ದೊಡ್ಡ ಬ್ಲಾಕ್‌ ಬಸ್ಟರ್‌ ಚಿತ್ರ ಎಂಬ ಖ್ಯಾತಿ ಪಡೆದಿದೆ.

https://twitter.com/SonyLIV/status/1663162339791892482/photo/1?ref_src=twsrc%5Etfw%7Ctwcamp%5Etweetembed%7Ctwterm%5E1663162339791892482%7Ctwgr%5E3dc843a7d254177c6572347d7ced14c68455dbf1%7Ctwcon%5Es1_&ref_url=https%3A%2F%2Ftv9kannada.com%2Fentertainment%2Fott%2F2018-malayalam-movie-ott-release-date-announced-sonyliv-to-start-streaming-on-7th-june-mdn-590075.html

 

ಇದನ್ನೂ ಓದಿ: RBI Recruitment 2023: ಆರ್‌ಬಿಐನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ! ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ!

Leave A Reply

Your email address will not be published.