Chennai: ಈತ ದುಪ್ಪಟ್ಟ ಶರವಣನ್: ಹುಡುಗೀರು ದುಪ್ಪಟ್ಟ ಹಾಕದೆ ರಸ್ತೆ ಇಳಿದ್ರು ಅಂದ್ರೆ ಸೈಕೊ ಆಗ್ತಿದ್ದ ಶರವಣನ್!

Chennai dupatta Saravaran matter

Chennai: ಹುಡುಗಿಯರು (girls) ಸ್ಟೈಲ್ ಅಂತಲೋ, ಅಥವಾ ಗಡಿಬಿಡಿಯಲ್ಲಿ ಮರೆತೋ ದುಪ್ಪಟ್ಟ ಹಾಕದೆ ರಸ್ತೆಗೆ ಇಳಿದ್ರೂ ಅಂದ್ರೆ ಶರವಣನ್ (sharavan) ಕೂಡ ಬೀದಿಗೆ ಬೀಳುತಿದ್ದ. ದುಪ್ಪಟಾ ಹಾಕದ ಹುಡ್ಗೀರ ಕಂಡ್ರೆ ಆತಂಗೆ ಏನೋ ಗಿಲಿ ಗಿಲಿ ಆಗ್ತಿತ್ತು. ಸೀದಾ ಆ ಹುಡುಗಿಯರ ಪಕ್ಕಾ ಹೋಗಿ ಅಡ್ರೆಸ್ ಕೇಳೋ ನೆಪದಲ್ಲಿ ಎದೆ ನೊಡ್ತಿದ್ದ. ತಕ್ಷಣ ಕಣ್ಣಲ್ಲೇ ಒಂದು ಸುತ್ತು ಸುತ್ತ ಮುತ್ತ ಗಮನಿಸಿ ಲಬಕ್ಕನೆ ಆಕೇನ ಅಮರಿಕೊಂಡು ಒಂದು ಮುತ್ತು ಕೊಡ್ತಿದ್ದ.

 

ನಂತರ ಹುಡ್ಗೀರ ಖಾಸಗಿ ಭಾಗಗಳನ್ನು ಕೆಲವೇ ಕ್ಷಣಗಳಲ್ಲಿ ಕೈಗಳಲ್ಲಿ ಸುತ್ತು ಹಾಕಿ ಹುಡುಗಿ, ಇದೇನಾಗುತ್ತಿದೆ ಎನ್ನುವಷ್ಟರಲ್ಲಿ ಮಾಯ ಆಗ್ತಿದ್ದ ಈ ಸೈಕೊ. ಆತ ಮಾಡೋ ಕೃತ್ಯ ನೋಡಿ ಆತನನ್ನು ಸೈಕೊ ಶರವಣನ್ (saiko sharavan) ಅಂತಲೂ ಕರೀತಿದ್ರು. ಅವನೇ ಇವ್ನು ದುಪ್ಪಟ್ಟ ಶರವಣನ್!

ಈತ ಮುಕ್ಕಪೇರು (chennai) ಪ್ರದೇಶದಲ್ಲಿ ವಾಸವಾಗಿದ್ದಾನೆ. ಕೆಲಸವಿಲ್ಲದ ಕಾರಣ ರಸ್ತೆಯಲ್ಲಿ ಬೈಕ್ ನಲ್ಲಿ ಅಡ್ಡಾಡುತ್ತಾ ಹೀನ ಕೃತ್ಯವೆಸಗುತ್ತಿದ್ದ. ಈತನ ಕಿರುಕುಳಕ್ಕೆ ಅದೆಷ್ಟೋ ಯುವತಿಯರು ಒಳಗಾಗಿದ್ದಾರೆ. ದುಪ್ಪಟ್ಟವಿಲ್ಲದ, ಸುಂದರ ಹೆಂಗಸರು ಹಾಗೂ ಮಾಡ್ರನ್​ ಡ್ರೆಸ್ ತೊಟ್ಟ ಯುವತಿಯರನ್ನು ಹಿಂಬಾಲಿಸಿ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದ ಈ ಸೈಕೋ. ಈತ ಇಲ್ಲಿಯವರೆಗೆ 100ಕ್ಕೂ ಅಧಿಕ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.

ಈ ಹೆಣ್ಣುಬಾಕ ವರ್ಷದ ಹಿಂದೆ ತಿರುಮಂಗಲಂ ಏರಿಯಾದಲ್ಲಿ ನಡೆದು ಹೋಗುತ್ತಿದ್ದ ಯುವತಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಪರಾರರಿಯಾಗಿದ್ದ. ಆಕೆಯ ದೂರಿನ ಮೇರೆಗೆ ಆತನನ್ನು ಬಂಧಿಸಲಾಗಿತ್ತು. ಆರೋಪಿಗಳು ಜೈಲು ಸೇರಿದರೆ ಕೆಲವೇ ದಿನಗಳಲ್ಲಿ ಹೊರಬರುತ್ತಾರೆ ಎನ್ನುವ ಹಾಗೆ ಈತನೂ ಕಳೆದ ಮಾರ್ಚ್​ನಲ್ಲಿ ಬಿಡುಗಡೆಯಾಗಿದ್ದ. ಜೈಲು ಶಿಕ್ಷೆಯನ್ನು ಅನುಭವಿಸಿದರೂ ಮತ್ತೆ ಅದೇ ಛಾಳಿ ಮುಂದುವರೆಸಿದ್ದಾನೆ. ಜೈಲಿಗೆ ಹೋಗಿ ಬಂದದ್ದು ಏನೂ ಅಲ್ಲ, ಜೈಲು ಶಿಕ್ಷೆ ಹೆಸರಿಗೆ ಮಾತ್ರ ಎಂಬಂತೆ ಮತ್ತೆ ತನ್ನ ಕೃತ್ಯ ಮುಂದುವರೆಸಿದ್ದಾರೆ.

ಇದೀಗ ಯುವತಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದು, ಆಕೆ ತಿರುಮಂಗಲಂ ಮಹಿಳಾ ಠಾಣೆಯಲ್ಲಿ ದೂರು ನೀಡಿದ್ದಾರೆ. 22 ವರ್ಷದ ಸಂತ್ರಸ್ತ ಯುವತಿಯು ಚೆನ್ನೈನ (Chennai) ಕುಕಪ್ಪೇರ್​ ಏರಿಯಾದವಳಾಗಿದ್ದು, ಆಕೆಯ ದೂರಿನ ಆಧಾರದ ಮೇಲೆ ಇದೀಗ ಸೈಕೋ ಶರವಣನ್​ ಬಂಧನವಾಗಿದೆ.

ಸೈಕೋ ಶರವಣನ್ ಮೇಲೆ ಹಲವು ಏರಿಯಾಗಳಲ್ಲಿ ದೂರು ದಾಖಲಾಗಿದ್ದು, ಪೊಲೀಸರು ತನ್ನನ್ನು ಹುಡುಕುತ್ತಿದ್ದಾರೆಂದು ಅರಿತು ಆತ ತಪ್ಪಿಸಿಕೊಂಡಿದ್ದಾನೆ. ಆದರೆ, ಪೊಲೀಸರು ವಿಶೇಷ ಪಡೆ ರಚಿಸಿ ಶರವಣನಿಗಾಗಿ ಶೋಧ ನಡೆಸಿದರು. ನಂತರ ಸೈಕೋ ಪತ್ತೆಯಾಗಿದ್ದು, ಆತನನ್ನು ಪೊಲೀಸರು ಬೆನ್ನಟ್ಟಿ ಹಿಡಿಯುವ ವೇಳೆ ರಸ್ತೆಬದಿಯಲ್ಲಿದ್ದ ಮಳೆ ನೀರು ಚರಂಡಿಯ ತೋಡಿಗೆ ಬಿದ್ದು ಶರವಣನ್ ಕೈ ಮುರಿದುಕೊಂಡಿದ್ದ. ಅನೇಕ ಕೃತ್ಯವೆಸಗಿದ ಕೈ ತುಂಡಾಗಿದೆ. ಸದ್ಯ ಶರವಣನನ್ನು ಪ್ರಾಥಮಿಕ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೈಕೋ ಶರವಣನ್ ಬಂಧನ ಮಹಿಳೆ-ಯುವತಿಯರಿಗೆ ಸಂತಸದ ಸುದ್ದಿಯೇ ಸರಿ!. ಆದರೆ, ಆತ ಮೊದಲಿನಂತೆ ಮತ್ತೆ ಜೈಲಿನಿಂದ ಬಿಡುಗಡೆಯಾದರೆ ಮತ್ತೆ ಅದೇ ಛಾಳಿ ಮುಂದುವರೆಸುತ್ತಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.

Leave A Reply

Your email address will not be published.