Rashmika mandanna: ರಶ್ಮಿಕಾಳ ಮೊದಲ ಸಿನಿಮಾ ‘ಕಿರಿಕ್ ಪಾರ್ಟಿ’ ಅಲ್ಲ!! ಮೊದಲೇ ಬೇರೆ ಸಿನಿಮಾದಲ್ಲಿ ನಟಿಸಿದ್ದ ರಶ್ಮಿಕಾ ಮಂದಣ್ಣ!! ಅದ್ಯಾವುದು ಗೊತ್ತಾ?

Before Kirik party Rashmika Mandanna supposed to act in another film

Rashmika mandanna : ರಶ್ಮಿಕಾ(Rashmika mandanna) ಸಿನಿ ಜರ್ನಿಯ ಸತ್ಯವೊಂದು ಈಗ ರಿವೀಲ್ ಆಗಿದ್ದು, ಕಿರಿಕ್ ಬೆಡಗಿಯ ಮೊದಲ ಸಿನಿಮಾ ಕಿರಿಕ್ ಪಾರ್ಟಿ(Kirik party) ಅಲ್ಲ ಅನ್ನೋದು ಗೊತ್ತಾಗಿದೆ. ಹಾಗಿದ್ರೆ ರಶ್ಮಿಕಾ ನಟಿಸಿದ ಮೊದಲ ಸಿನಿಮಾ ಯಾವುದು? ಯಾಕೆ ರಶ್ಮಿಕಾ ಅವರು ಇಲ್ಲಿಯವರೆಗೂ ಅದನ್ನು ರಿವೀಲ್ ಮಾಡಲಿಲ್ಲ?

 

ಹೌದು, ಒಂದು ಸಮಯದಲ್ಲಿ ಇಡೀ ದಕ್ಷಿಣ ಭಾರತದಲ್ಲಿ(South india) ಸದ್ಧು ಮಾಡಿ, ಕಾಲೇಜು ಹುಡುಗರ ಮನಗೆದ್ದು, ಸೂಪರ್ ಹಿಟ್ ಆದ ಕನ್ನಡ ಸಿನಿಮಾ ಅಂದ್ರೆ ಅದು ‘ಕಿರಿಕ್ ಪಾರ್ಟಿ’. ಈ ಕಿರಿಕ್ ಪಾರ್ಟಿ ಅದೆಷ್ಟೋ ಜನರ ಬದುಕನ್ನೇ ಬದಲಿಸಿತ್ತು. ರಕ್ಷಿತ್ ಶೆಟ್ಟಿ(Rakshith shetty)ಮೊದಲ ಬಾರಿಗೆ ನಿರ್ಮಾಪಕರಾದರು. ರಿಷಬ್ ಶೆಟ್ಟಿ(Rishab shetty) ನಿರ್ದೇಶಕನಾಗಿ ಮೊದಲ ಹಿಟ್ ಕೊಟ್ಟರು. ಸಂಯುಕ್ತ ಹೆಗ್ಡೆಗೆ(Samyuktha hegde) ಸ್ಯಾಂಡಲ್‌ವುಡ್‌(Sandalwood) ನಲ್ಲಿ ನೆಲೆ ಸಿಕ್ಕಿತು. ಆದರೆ, ಎಲ್ಲರಿಗಿಂತ ಹೆಚ್ಚು ಶೈನ್ ಆಗಿದ್ದು ಮಾತ್ರ ರಶ್ಮಿಕಾ ಮಂದಣ್ಣ. ಯಾಕೆಂದರೆ ಈ ಸಿನಿಮಾದಿಂದಲೇ ರಶ್ಮಿಕಾ ನ್ಯಾಷನಲ್ ಕ್ರಶ್ ಆದರು. ಬಳಿಕ ಒಂದರ ಹಿಂದೊಂದು ಆಫರ್‌ಗಳು ಈಕೆಯನ್ನು ಹುಡುಕಿಕೊಂಡು ಬಂದಿದ್ದವು. ರಶ್ಮಿಕಾ ಮೊದಲ ಸಿನಿಮಾದಲ್ಲೇ ಹಿಟ್ ಕಂಡರು ಎಂದೆಲ್ಲ ಹೇಳಲಾಗಿತ್ತು.

ಆದರೆ, ‘ಕಿರಿಕ್ ಪಾರ್ಟಿ'(Kirik party) ರಶ್ಮಿಕಾ ಮಂದಣ್ಣ ಒಪ್ಪಿಕೊಂಡ ಮೊದಲ ಸಿನಿಮಾ ಅಲ್ಲ ಅನ್ನೋದು ನಿಮಗೆ ಗೊತ್ತಾ? ಈ ಸಿನಿಮಾಗೂ ಮುನ್ನ ಮತ್ತೊಂದು ಕನ್ನಡ ಸಿನಿಮಾದಲ್ಲಿ ನಟಿಸಬೇಕಿತ್ತು. ಆ ಸಿನಿಮಾ ಯಾವುದು? ಗೊತ್ತಾ? ಅದ್ಯಾವುದು ಅಂತ ತಿಳಿಯಲು ಮುಂದೆ ಓದಿ.

ಹೌದು, ರಶ್ಮಿಕಾ ಮಂದಣ್ಣಗೆ ಪಿಯುಸಿ(PUC) ಓದುವಾಗಲೇ ಸಿನಿಮಾದಲ್ಲಿ ನಟಿಸುವಂತೆ ಆಫರ್‌ಗಳು ಬರುತ್ತಿದ್ದವು. ಆದರೆ, ರಶ್ಮಿಕಾ ಅಪ್ಪ-ಅಮ್ಮನಿಗೆ ಮಗಳು ಈಗಲೇ ಸಿನಿಮಾರಂಗಕ್ಕೆ ಹೋಗುವುದು ಇಷ್ಟವಿರಲಿಲ್ಲ. ಹೀಗಾಗಿ ಪಿಯುಸಿ ಓದುವಾಗ ಬಂದಿದ್ದ ಆಫರ್ ಅನ್ನು ತಿರಸ್ಕರಿಸಿದ್ದರು.

ಮೈಸೂರಿನಲ್ಲಿ(Mysore) ಪಿಯುಸಿ ಮುಗಿಸಿದ ಬಳಿಕ ರಶ್ಮಿಕಾ ಮಂದಣ್ಣ ಬೆಂಗಳೂರಿನ ಎಂ ಎಸ್ ರಾಮಯ್ಯ ಕಾಲೇಜಿಗೆ ದಾಖಲಾಗಿದ್ದರು. ಈ ವೇಳೆ ಪ್ರತಿಷ್ಠಿತ ಪತ್ರಿಕೆ ಆಯೋಜಿಸಿದ್ದ ರಾಜ್ಯದ ಮಟ್ಟದ ಕಾಂಪಿಟೇಷನ್‌ನಲ್ಲಿ ಭಾಗವಹಿಸಿದ್ದರು. ಅಲ್ಲಿ ರಶ್ಮಿಕಾಗೆ ‘ಫೇಸ್ ಆಫ್ ಬೆಂಗಳೂರು’ ಟೈಟಲ್ ಗೆದ್ದಿದ್ದರು. ಆನಂತರ ನ್ಯಾಷನಲ್ ಮಟ್ಟಿದಲ್ಲೂ ಗೆದ್ದಿದ್ದರು. ಇದು ಆ ಪತ್ರಿಕೆಯ ಮುಖಪುಟದಲ್ಲಿ ಪ್ರಕಟ ಆಗಿತ್ತು.

ಆನಂತರ ರಶ್ಮಿಕಾ ಮಂದಣ್ಣ ನಟಿಯಾಗೋಕೆ ಸಿಕ್ಕಾಪಟ್ಟೆ ಕಷ್ಟ ಪಟ್ಟಿದ್ರು. ಸಿಕ್ಕ ಸಿಕ್ಕಲ್ಲೆಲ್ಲಾ ನಿರಂತರವಾಗಿ ಆಡಿಷನ್‌ ಒಟ್ಟಿದ್ರು. ಆಗ ರಶ್ಮಿಕಾ ‘ಗೆಳೆಯರೇ ಗೆಳತಿಯರೇ’ ಅನ್ನೋ ಚಿತ್ರಕ್ಕೆ ಆಯ್ಕೆಯಾದ್ರು. ಈ ಸಿನಿಮಾದ ಸ್ಕ್ರಿಪ್ಟ್ ಪೂಜೆ ಕೂಡ ನಡೆದಿತ್ತು. ರಶ್ಮಿಕಾ ಜೊತೆ ಆಯ್ಕೆಯಾದವರು ರಿಹರ್ಷಲ್ ಮಾಡಿದ್ರು. ಸಿನಿಮಾದ ಕೆಲವೊಂದಿಷ್ಟು ಶೂಟಿಂಗ್ ಕೂಡ ಆಗಿತ್ತು. ಆದ್ರೆ ಮೂರು ತಿಂಗಳ ಬಳಿಕ ‘ಗೆಳೆಯರೇ ಗೆಳತಿಯರೇ’ ಸಿನಿಮಾ ನಿಂತು ಹೋಯ್ತು. ಆ ನಂತರ ಬಂದಿದ್ದೆ ಕಿರಿಕ್ ಪಾರ್ಟಿ ಸಿನಿಮಾ. ಹೀಗಾಗಿ ಶ್ರೀವಲ್ಲಿ ಮೊದಲ ಸಿನಿಮಾ ಯಾವ್ದು ಅಂತ ಕೇಳಿದ್ರೆ ಬಿಡೆಗಡೆ ಆಗಿದ್ದು ಕಿರಿಕ್ ಪಾರ್ಟಿ ಆದ್ರೆ, ರಶ್ಮಿಕಾ ಆಯ್ಕೆ ಆದ ಮೊದಲ ಚಿತ್ರ ಗೆಳೆಯರೇ ಗೆಳತಿಯರೇ ಅನ್ನೋ ಸತ್ಯ ನಿಮ್ಗೆ ಗೊತ್ತಿರಲಿ.

ಇದನ್ನೂ ಓದಿ: CM Siddaramaiah: BJP ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಮಹಾ ಎಡವಟ್ಟು!! ಮೋದಿಗೆ ಏನಂದ್ರು ಗೊತ್ತಾ?

Leave A Reply

Your email address will not be published.