Ambareesh birthday: ಇಂದು ಅಂಬರೀಷ್‌ಗೆ 71ನೇ ವರ್ಷದ ಹುಟ್ಟು ಹಬ್ಬ : ಸುಮಲತಾ ಟ್ವೀಟ್‌ ಮಾಡಿದ್ದೇನು ಗೊತ್ತಾ?

Sumalatha emotional tweet for Ambareesh on his birthday

Share the Article

Ambareesh birthday: ʻಮಂಡ್ಯದ ಗಂಡುʼ ಎಂದೇ ಪ್ರಖ್ಯಾತಿ ಪಡೆದ ನಟ ಅಂಬರೀಷ್‌ ಅವರಿಗೆ 71ನೇ ವರ್ಷದ ಹುಟ್ಟು ಹಬ್ಬವಾಗಿದ್ದು (Ambareesh birthday), ಅಭಿಮಾನಿಗಳು ಸಂಭ್ರಮ ಸಡಗರದಿಂದ ಕಂಠೀರವ ಕ್ರೀಡಾಂಗಣದಲ್ಲಿರುವ ಅಂಬರೀಷ್ ಸ್ಮಾರಕ್ಕೆ ಭೇಟಿ ನೀಡಿ ಆಚರಣೆ ಮಾಡಿದ್ದಾರೆ. ಅಲ್ಲದೇ ಸುಮಲತಾ ತಮ್ಮ ಅಧಿಕೃತ ಟ್ಟಿಟ್ಟರ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಶುಭ ಹಾರೈಸಿದ್ದಾರೆ.

ನಿಮ್ಮ ಬಾಲ್ಯದ ದಿನಗಳನ್ನು ಆಗಾಗ್ಗೆ ಹೇಳುತ್ತಿದ್ದಿರಿ. ಬಾಲ್ಯದ ಆ ತುಂಟತನ ಅದು ನಿಮ್ಮಲ್ಲಿ ಕೊನೆವರೆಗೂ ಇತ್ತು.ಹಾಗಾಗಿ ನಿಮ್ಮ ಹುಟ್ಟು ಹಬ್ಬ ಅದೊಂದು ಸಡಗರವಾಗಿರುತ್ತಿತ್ತು.ಅದು ನಮಗಷ್ಟೇ ಅಲ್ಲ, ಅಭಿಮಾನಿಗಳ ಪಾಲಿಗೆ ನಿಜವಾದ ಹಬ್ಬ.

ಭೌತಿಕವಾಗಿ ನಮ್ಮೊಂದಿಗೆ ನೀವು ಇದ್ದಿದ್ದರೆ, ಇಂದು 71ನೇ ವರ್ಷದ ಹುಟ್ಟು ಹಬ್ಬವನ್ನೂ ಅಭಿಮಾನಿಗಳ ಜೊತೆಯಾಗಿ ಮತ್ತಷ್ಟು ಅದ್ಧೂರಿಯಾಗಿ ಆಚರಿಸುತ್ತಿದ್ದೆವು.ಮನೆ ಮುಂದೆ ಜನಸಾಗರ, ನಿಮ್ಮ ಆರ್ಭಟ, ಹಾಸ್ಯ ಪ್ರಜ್ಞೆಯ ಮಾತು, ರಾತ್ರಿ ಇಡೀ ಕಾಯುತ್ತಾ ನಿಂತಿದ್ದ ಅಭಿಮಾನಿಗಳ ಘೋಷಣೆ ಇನ್ನೂ ಹಾಗೆಯೇ ಇದೆ. ಇವತ್ತೂ ಕೂಡ ಅವೆಲ್ಲವೂ ನಿಮಗೆ ಶುಭಾಶಯ ಹೇಳುತ್ತಿವೆ. ಸ್ವೀಕರಿಸಿ.ಹ್ಯಾಪಿ ಬರ್ತಡೇ ಮೈ ಅಂಬಿ. ಜತೆಗಿರದ ಜೀವ ಎಂದೆಂದಿಗೂ ಜೀವಂತ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

https://twitter.com/sumalathaA/status/1662906892224729093?s=20

ಇದನ್ನೂ ಓದಿ: Actor Upendra: ಚಡ್ಡಿಯಲ್ಲಿ’ ರಿಯಲ್ ‘ ಆಗಿ ಕಾಣಿಸಿಕೊಂಡ ರಿಯಲ್ ಸ್ಟಾರ್ ಉಪೇಂದ್ರ, ಬಾಲ್ಯದ ಫೋಟೋ ನೋಡಿ – ಹೇಗಿದ್ರು ನಮ್ ಡೈರೆಕ್ಟ್ರು !

Leave A Reply