ISRO ICRB Recruitment 2023: ಇಸ್ರೋದಲ್ಲಿ 303 ಹುದ್ದೆಗಳ ಭರ್ಜರಿ ನೇಮಕ! ಈಗಲೇ ಅಪ್ಲೈ ಮಾಡಿ

ISRO ICRB Recruitment 2023

ISRO ICRB Recruitment 2023: ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಸುವರ್ಣ ಅವಕಾಶ (Job Alert) ಒಂದು ಇಲ್ಲಿದೆ. ಹೌದು, ಇಸ್ರೋ (ISRO) ಕೇಂದ್ರೀಕೃತ ನೇಮಕಾತಿ ಮಂಡಳಿಯು ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

 

ಒಟ್ಟು 303 ಸೈಂಟಿಸ್ಟ್​/ ಎಂಜಿನಿಯರ್ ಹುದ್ದೆಗಳು ಖಾಲಿ ಇದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅರ್ಜಿ ಹಾಕಬೇಕು. ಜೂನ್ 14, 2023 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರು ಹಾಗೂ ಇಸ್ರೋದಲ್ಲಿ ಕೆಲಸ ಮಾಡಲು ಬಯಸುವವರು ಈ ಅವಕಾಶವನ್ನು ಬಳಸಿಕೊಳ್ಳಬಹುದಾಗಿದೆ.

ISRO ICRB Recruitment 2023 ಹುದ್ದೆಯ ಮಾಹಿತಿ:
ಸೈಂಟಿಸ್ಟ್​/ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​)- 90
ಸೈಂಟಿಸ್ಟ್​/ ಎಂಜಿನಿಯರ್ (ಮೆಕ್ಯಾನಿಕಲ್)- 163
ಸೈಂಟಿಸ್ಟ್​/ ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​)- 47
ಸೈಂಟಿಸ್ಟ್​/ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​- ಅಟೋನಮಸ್ ಬಾಡಿ)- 2
ಸೈಂಟಿಸ್ಟ್​/ ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​- ಅಟೋನಮಸ್ ಬಾಡಿ)- 1

ವಿದ್ಯಾರ್ಹತೆ:
ಸೈಂಟಿಸ್ಟ್​/ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​)- ECEನಲ್ಲಿ ಬಿಇ/ಬಿ.ಟೆಕ್

ಸೈಂಟಿಸ್ಟ್​/ ಎಂಜಿನಿಯರ್ (ಮೆಕ್ಯಾನಿಕಲ್)- ಮೆಕ್ಯಾನಿಕ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್

ಸೈಂಟಿಸ್ಟ್​/ ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​)- CSEನಲ್ಲಿ ಬಿಇ/ಬಿ.ಟೆಕ್

ಸೈಂಟಿಸ್ಟ್​/ ಎಂಜಿನಿಯರ್ (ಎಲೆಕ್ಟ್ರಾನಿಕ್ಸ್​- ಅಟೋನಮಸ್ ಬಾಡಿ)- ECEನಲ್ಲಿ ಬಿಇ/ಬಿ.ಟೆಕ್

ಸೈಂಟಿಸ್ಟ್​/ ಎಂಜಿನಿಯರ್ (ಕಂಪ್ಯೂಟರ್ ಸೈನ್ಸ್​- ಅಟೋನಮಸ್ ಬಾಡಿ)- CSEನಲ್ಲಿ ಬಿಇ/ಬಿ.ಟೆಕ್

ವಯೋಮಿತಿ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಜೂನ್ 14, 2023ಕ್ಕೆ ಗರಿಷ್ಠ 28 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ಅರ್ಜಿ ಶುಲ್ಕ:
SC/ST/PWD/ ಮಾಜಿ ಸೈನಿಕ/ ಮಹಿಳಾ ಅಭ್ಯರ್ಥಿಗಳು- ಅರ್ಜಿ ಶುಲ್ಕ ಇಲ್ಲ.
ಉಳಿದ ಎಲ್ಲಾ ಅಭ್ಯರ್ಥಿಗಳಿಗೆ- 250 ರೂ.

ವೇತನ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 56,100 ರೂ. ಸಂಬಳ ಕೊಡಲಾಗುತ್ತದೆ.

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 25/05/2023
ಅರ್ಜಿ ಸಲ್ಲಿಸಲು ಕೊನೆಯ ದಿನ: ಜೂನ್ 14, 2023
ಅರ್ಜಿ ಶುಲ್ಕ ಕಟ್ಟಲು ಕೊನೆಯ ದಿನ: ಜೂನ್ 16, 2023.

ಉದ್ಯೋಗದ ಸ್ಥಳ:
ಇಸ್ರೋ(ISRO) ಕೇಂದ್ರೀಕೃತ ನೇಮಕಾತಿ ಮಂಡಳಿ ನೇಮಕಾತಿ ಅಧಿಸೂಚನೆ ಪ್ರಕಾರ, ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ಕೊಡಲಾಗುತ್ತದೆ.

ಅಭ್ಯರ್ಥಿಗಳಿಗೆ ಯಾವುದೇ ಗೊಂದಲಗಳಿದ್ದಲ್ಲಿ rmt-icrb@isro.gov.in ಗೆ ಮೇಲ್ ಮಾಡಿ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಯ ನಂತರ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಷರತ್ತುಗಳು ಅನ್ವಯ.

ಇದನ್ನೂ ಓದಿ: Aadhaar Card Update: ಆಧಾರ್ ಕಾರ್ಡ್ ಅಪ್ಡೇಟ್ ಈಗ ಉಚಿತ ಉಚಿತ, ನಯಾ ಪೈಸೆ ಖರ್ಚು ಮಾಡದೆ ಅಪ್ಡೇಟ್ ಮಾಡಿಕೊಳ್ಳಿ, ಜೂನ್ 17 ಕೊನೆಯ ದಿನಾಂಕ!

Leave A Reply

Your email address will not be published.