CM Siddaramaiah: BJP ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಮಹಾ ಎಡವಟ್ಟು!! ಮೋದಿಗೆ ಏನಂದ್ರು ಗೊತ್ತಾ?

CM Siddaramaiah said that PM Modi calls him Narasimhara instead of his name

CM Siddaramaiah: ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಕಾಂಗ್ರೆಸ್(Congress) ಚುನಾವಣಾ(Election) ಪೂರ್ವದಲ್ಲಿ ತಾನು ಬಿಡುಗಡೆ ಮಾಡಿದ ಪ್ರಣಾಳಿಕೆಯಲ್ಲಿ ರಾಜ್ಯದ ಜನರಿಗೆ ಆಶ್ವಾಸನೆ ನೀಡಿದ್ದ 5 ಗ್ಯಾರಂಟಿಗಳನ್ನು(5 Guaranty) ಜಾರಿಗೊಳಿಸುವಲ್ಲಿ ಸಂಕಷ್ಟದಲ್ಲಿ ಸಿಲುಕಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಬಿಜೆಪಿ(BJP), ಕಾಂಗ್ರೆಸ್ ವಿರುದ್ಧ ದಿನೇ ದಿನೇ ಹರಿಹಾಯುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಬೇರೆಯದೇ ರೀತಿಲ್ಲಿ ಟಕ್ಕರ್ ಕೊಡಲು ಶುರುಮಾಡಿದೆ. ಅಂತೆಯೇ ಇದೀಗ ಬಿಜೆಪಿಯನ್ನು ಟೀಕಿಸುವ ಭರದಲ್ಲಿ ಸಿಎಂ ಸಿದ್ದರಾಮಯ್ಯ(CM Siddaramaiah) ಎಡವಟ್ಟು ಮಾಡಿಕೊಂಡಿದ್ದಾರೆ.

 

ಹೌದು, ಗ್ಯಾರಂಟಿ ಅನುಷ್ಠಾನಗೊಳಿಸಲು ಹಿಂದೇಟು ಹಾಕುತ್ತಿರುವ ಸರ್ಕಾರಕ್ಕೆ ಬಿಜೆಪಿ ಸರಿಯಾಗಿ ಕ್ಲಾಸ್ ತೆಗೆದುಕೊಳ್ಳುತ್ತಿದೆ. ಆದರೆ ಇದಕ್ಕೆ ಕಾಂಗ್ರೆಸ್ ಕೂಡ ಬಿಜೆಪಿಯ ಅಂಶಗಳನ್ನೇ ಬಂಡವಾಳವಾಗಿಟ್ಟುಕೊಂಡು ಸರಿಯಾಗಿ ಟಕ್ಕರ್ ಕೊಡುತ್ತಿದೆ. 2014ರ ಲೋಕಸಭಾ ಚುನಾವಣೆಯಲ್ಲಿ(Parliament election) ಪ್ರಧಾನಿ ಮೋದಿ(PM Modi)ಯವರು ಏನೆಲ್ಲಾ ಘೋಷಣೆ ಮಾಡಿದ್ದರೋ ಅವುಗಳನ್ನೆಲ್ಲ ಉಲ್ಲೇಖಿಸಿ, ನೀವು ಹೇಳಿದ್ದನ್ನೆಲ್ಲ ಮಾಡಿದ್ದೀರಾ? ಎಂದು ಪ್ರಶ್ನಿಸಿದೆ. ಸದ್ಯ ಸಿದ್ದು ಕೂಡ ಈ ವಿಚಾರಗಳನ್ನೇ ಮುಂದಿಟ್ಟುಕೊಂಡು ಬಿಜೆಪಿ ವಿರುದ್ಧ ಹರಿಹಾಯ್ದಿದ್ದಾರೆ. ಆದರೆ ಈ ವೇಳೆ ಮೋದಿ ಎಂದು ಹೇಳುವ ಬದಲು ನರಸಿಂಹರಾಯರು(Narasimha rayaru) ಎಂದು ಹೇಳಿ ಎಡವಟ್ಟು ಮಾಡಿಕೊಂಡಿದ್ದಾರೆ.

“ನರಸಿಂಹರಾಯರು ಅಕೌಂಟ್‌ಗೆ 15 ಲಕ್ಷ ಹಾಕ್ತೀವಿ ಅಂದ್ರು ಮಾಡಿದ್ರಾ? ಅಚ್ಚೇ ದಿನ ಆಯೇಗ ಅಂದ್ರು ಬಂತಾ?” ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಪ್ರಧಾನಿ ಮೋದಿ ಟೀಕಿಸುವ ವೇಳೆ ಬಾಯ್ತಪ್ಪಿ ನರಸಿಂಹರಾಯರು ಎಂದಿದ್ದಾರೆ. ಸಿದ್ದರಾಮಯ್ಯ ಹೇಳಿಕೆ ವಿಡಿಯೋ ಇದೀಗ ವೈರಲ್ ಆಗ್ತಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತಿನ ಭರದಲ್ಲಿ ಕೆಲವು ಬಾರಿ ಎಡವಟ್ಟು ಮಾಡಿದ್ದಾರೆ. ಬಿಜೆಪಿ ಹೇಳುವ ಬದಲು ಕಾಂಗ್ರೆಸ್ ಎಂದಿದ್ದಾರೆ. ಇಂಧಿರಾ ಗಾಂಧಿ(Indhira gandhi) ಅನ್ನುವ ಬದಲು ದಿವಂಗತ ಸೋನಿಯಾ ಗಾಂಧಿ(Soina gandhi)ಎಂದೂ ಹೇಳಿದ್ದಾರೆ. ಹೀಗೆ ಹಲವು ಬಾರಿ ಹೆಸರುಗಳು ಅದಲು ಬದಲಾಗಿದೆ. ಇದೀಗ ಪ್ರಧಾನಿ ಮೋದಿ ಟೀಕಿಸುವ ಭರದಲ್ಲಿ ಸಿದ್ದರಾಮಯ್ಯ ಎಡವಟ್ಟು ಮಾಡಿದ್ದಾರೆ. ಮೋದಿ ಬದಲು ನರಸಿಂಹರಾಯರು ಎಂದಿದ್ದಾರೆ. ನರಸಿಂಹರಾಯರು 15 ಲಕ್ಷ ಅಕೌಂಟ್‌ಗೆ ಹಾಕ್ತೀನಿ ಎಂದಿದ್ದರು. ಹಾಕಿದ್ದಾರಾ? ರೈತರ ಆಯೋಗ ಡಬಲ್ ಮಾಡಿತ್ತೀನಿ ಎಂದರು? ಆಗಿದೆಯಾ? ಅಚ್ಚೇದಿನ ಆಯೇಗಾ ಎಂದರು, ಆಗಿದೆಯಾ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ಈ ವೇಳೆ ಪತ್ರಕರ್ತರು ನರಸಿಂಹರಾಯರು ಅಲ್ಲ ಮೋದಿ ಎಂದಿದ್ದಾರೆ. ಬಳಿಕ ಎಚ್ಚೆತ್ತ ಸಿದ್ದರಾಮಯ್ಯ ಸಾರಿ, ಮೋದಿ ಎಂದು ಸರಿಮಾಡಿಕೊಂಡಿದ್ದಾರೆ.

 

ಇದನ್ನು ಓದಿ: Committed suicide: ಕಡಬದ ಯುವಕ ಮಸ್ಕತ್‌ನಲ್ಲಿ ಆತ್ಮಹತ್ಯೆ : 8 ತಿಂಗಳ ಹಿಂದೆಯಷ್ಟೇ ವಿದೇಶಕ್ಕೆ ಹೋಗಿದ್ದ ಯುವಕ 

Leave A Reply

Your email address will not be published.