P M Modi: ನೂತನ ಸಂಸತ್ತಿನಲ್ಲಿ ಚಿನ್ನದ ರಾಜದಂಡದ ಪ್ರತಿಷ್ಠಾಪಿಸಿದ ಪ್ರಧಾನಿ!
PM Modi places sacred sengol inside new parliament
P M Modi: ಪ್ರಧಾನಿ ಮೋದಿ(P M Modi) ನೂತನ ಸಂಸತ್ ಭವನವನ್ನು(New Parliament hous)ಲೋಕಾರ್ಪಣೆ ಮಾಡಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ತುಂಬಿದ ಬೆನ್ನಲ್ಲೇ ಆಧುನಿಕ ಸ್ಪರ್ಶದೊಂದಿಗೆ ಹೊಸ ಸಂಸತ್ ಭವನ ಲೋಕಾರ್ಪಣೆಯಾಗಿದ್ದು, ಐತಿಹಾಸಿಕ ರಾಜದಂಡ ಅಥವಾ ಚಿನ್ನದ ಸೆಂಗೋಲ್(Sengol) ಅನ್ನೂ ಸಹ ಮೋದಿ ಪ್ರತಿಷ್ಠಾಪನೆ ಮಾಡಿದ್ದಾರೆ.
ಹೌದು, ಸ್ಪೀಕರ್(Speaker) ಕುರ್ಚಿ ಬಳಿ ಪ್ರಧಾನಿ ನರೇಂದ್ರ ಮೋದಿ (PM Modi)ಯವರು ಸೆಂಗೋಲ್ ಪ್ರತಿಷ್ಠಾಪನೆ ಮಾಡಿದರು. ಹೊಸ ಸಂಸತ್ ಕಟ್ಟಡದ ಉದ್ಘಾಟನೆಯ ಆರಂಭದ ಸಂದರ್ಭದಲ್ಲಿ ಪ್ರಧಾನಿ ಮೋದಿ ‘ಸೆಂಗೋಲ್’ ಮುಂದೆ ಗೌರವದ ಸಂಕೇತವಾಗಿ ನಮಸ್ಕರಿಸಿದರು. ಈ ಬಳಿಕ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರೊಂದಿಗೆ ತೆರಳಿ, ಸ್ಪೀಕರ್ ಪೀಠದ ಸಮೀಪದಲ್ಲಿ ಅದನ್ನು ಪ್ರತಿಷ್ಠಾಪಿಸಿದ್ದಾರೆ.
ಹವನ ನಡೆದ ಸ್ಥಳದಲ್ಲಿ ರಾಜದಂಡಕ್ಕೆ ಶಿರಸಾಷ್ಟಾಂಗ ನಮಸ್ಕಾರ ಮಾಡಿದ ಅವರು, ಅಲ್ಲಿಂದ ಸಂಸತ್ ಭವನದ ಒಳಗಿನ ಸ್ಪೀಕರ್ ಕುರ್ಚಿಯವರೆಗೂ ರಾಜದಂಡವನ್ನು ಹಿಡಿದುಬಂದರು. ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ತಮಿಳುನಾಡಿನ(Tamilnadu) ಅಧೀನಂ ಮಠಗಳ ಸಂತರು, ಪುರೋಹಿತರು, ಲೋಕಸಭಾ ಸ್ಪೀಕರ್ ಓಂಬಿರ್ಲಾ ಹೆಜ್ಜೆ ಹಾಕಿದರು. ರಾಜದಂಡವನ್ನು ಸ್ಪೀಕರ್ ಕುರ್ಚಿ ಪಕ್ಕವೇ ಇಟ್ಟ ಪ್ರಧಾನಿ ಮೋದಿ, ಬಳಿಕ ಅಲ್ಲೊಂದು ದೀಪ ಹೊತ್ತಿಸಿದರು. ನಂತರ ಸೆಂಗೋಲ್ಗೆ ಹೂವು ಹಾಕಿ, ಮತ್ತೆ ನಮಿಸಿದರು. ಸ್ಪೀಕರ್ ಕುರ್ಚಿಯ ಬಳಿಯಿಂದ ಮೆಟ್ಟಿಲಿಳಿದು ಬಂದವರು, ಎಲ್ಲ ಸಾಧು-ಸಂತರು, ಮಠಾಧೀಶರುಗಳಿಗೆ ನಮಿಸುತ್ತ ನಡೆದರು. ಈ ಎಲ್ಲ ಸಮಯದಲ್ಲಿ ತಮಿಳಿನ ಮಂತ್ರ-ಭಜನೆ ಮೊಳಗುತ್ತಿತ್ತು.
ಅಂದಹಾಗೆ ಸಂಸತ್ ಭವನ ಉದ್ಘಾಟನೆಗೆ ರಾಜ್ಯದ ಪುರೋಹಿತರ ನೇತೃತ್ವ ವಹಿಸಿದ್ದು, ಶೃಂಗೇರಿಯ ಶಾರದಾ ಪೀಠದ ಪುರೋಹಿತರಿಂದ ಬೆಳಗ್ಗೆ 7:30ರಿಂದಲೇ ಹೋಮ, ಪೂಜಾ ಕೈಂಕರ್ಯ ಆರಂಭವಾಗಿದೆ. ಪ್ರಧಾನಿ ಮೋದಿ ಸಮ್ಮುಖದಲ್ಲಿ ವಿಶೇಷ ಪೂಜೆ, ಹೋಮ-ಹವನ ನಡೆದಿದೆ. 2020ರಲ್ಲಿ ಅಡಿಗಲ್ಲು ಪೂಜೆಯನ್ನು ಪುರೋಹಿತರು ನೆರವೇರಿಸಿದ್ದಾರೆ.
ಇದನ್ನೂ ಓದಿ: Ravindar – Mahalakshmi : ರವೀಂದರ್- ಮಹಾಲಕ್ಷ್ಮಿ ದಾಂಪತ್ಯದಲ್ಲಿ ಬಿರುಕು? ಕೊನೆಗೂ ಮೌನ ಮುರಿದ ರವೀಂದರ್!!