Indian Navy: ನೌಕಾಪಡೆ ಅಗ್ನಿವೀರ್ ಗಳಿಗೆ ಅರ್ಜಿ ಆಹ್ವಾನ: ಮೇ 29 ರಿಂದಲೇ ಆನ್ಲೈನ್ ನೋಂದಣಿ ಶುರು
Indian Navy Agniveer application form 2023 registration from may 29
Indian Navy Agniveer application: ಭಾರತೀಯ ನೌಕಾಪಡೆಗೆ ಸೇರಲಿಚ್ಚಿಸುವ ಅಗ್ನಿವೀರ್ ಗಳಿಗೆ ಗುಡ್ ನ್ಯೂಸ್ ಇದೆ. ನೌಕಾ ಅಗ್ನಿವೀರ್ ಹುದ್ದೆಗಳಿಗೆ ಅರ್ಜಿಗಳನ್ನು (Indian Navy Agniveer application) ಆಹ್ವಾನಿಸಿದ್ದು, ನಾಳೆ ಮೇ 29 ರಿಂದ ಆನ್ಲೈನ್ ನೋಂದಣಿ ಪ್ರಾರಂಭವಾಗಲಿದೆ. ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ನಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ನೌಕಾಪಡೆ ಅಗ್ನಿವೀರ್ ಹುದ್ದೆಗಳಿಗೆ ಸೇರಲು ಆಸಕ್ತ ಅಭ್ಯರ್ಥಿಗಳು ಮೇ 29 ರಿಂದ ಜೂನ್ 15, 2023 ರೊಳಗೆ ನೋಂದಾಯಿಸಿಕೊಳ್ಳಬಹುದು. ಈ ನೇಮಕಾತಿ ಪ್ರಕ್ರಿಯೆಯು ಸಂಸ್ಥೆಯ 1,365 ಹುದ್ದೆಗಳನ್ನು ಭರ್ತಿ ಮಾಡಲು ನಡೆಯಲಿದ್ದು, ಗರಿಷ್ಠ 273 ಮಹಿಳೆಯರು ಅರ್ಜಿ ಸಲ್ಲಿಸಬಹುದು. agniveernavy.cdac.in ವೆಬ್ಸೈಟ್ ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಬಹುದು.
ಅಭ್ಯರ್ಥಿಗಳ ಅರ್ಹತಾ ಮಾನದಂಡಗಳು:
* ಅಭ್ಯರ್ಥಿಗಳು ನವೆಂಬರ್ 1, 2002 ಮತ್ತು ಏಪ್ರಿಲ್ 30, 2006 ರ ಮಧ್ಯೆ ಜನಿಸಿರಬೇಕು.
*ಗಣಿತ ಮತ್ತು ಭೌತಶಾಸ್ತ್ರದೊಂದಿಗೆ ದ್ವಿತೀಯ ಪಿಯುಸಿ 10 + 2 ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು.
* ಕೆಳಗಿನ – ರಸಾಯನಶಾಸ್ತ್ರ, ಜೀವಶಾಸ್ತ್ರ ಅಥವಾ ಕಂಪ್ಯೂಟರ್ ವಿಜ್ಞಾನವನ್ನು(ಯಾವುದರಲ್ಲಿ ಒಂದನ್ನು) ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದಿಂದ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.
ಅಭ್ಯರ್ಥಿಗಳನ್ನು ಕಂಪ್ಯೂಟರ್ ಆಧಾರಿತ ಆನ್ಲೈನ್ ಪರೀಕ್ಷೆ ಮೂಲಕ ‘ಲಿಖಿತ ಪರೀಕ್ಷೆ, ಮತ್ತು ನೇಮಕಾತಿ ವೈದ್ಯಕೀಯ ಪರೀಕ್ಷೆ’ ಎಂಬ ಎರಡು ಹಂತಗಳ ಆಯ್ಕೆ ಪ್ರಕ್ರಿಯೆಯ ಮೂಲಕ ಆಯ್ಕೆ ನಡೆಸಲಾಗುತ್ತದೆ.
ಇದರ ಪ್ರಶ್ನೆ ಪತ್ರಿಕೆಯು ದ್ವಿಭಾಷಾ (ಇಂಗ್ಲಿಷ್ ಮತ್ತು ಹಿಂದಿ) ಮತ್ತು ವಸ್ತುನಿಷ್ಠ ಮಾದರಿಯದ್ದಾಗಿರಲಿದೆ. ಇಂಗ್ಲಿಷ್, ವಿಜ್ಞಾನ, ಗಣಿತ ಮತ್ತು ಸಾಮಾನ್ಯ ಅರಿವು ಎಂಬ ನಾಲ್ಕು ವಿಭಾಗಗಳನ್ನು ಹೊಂದಿರುತ್ತದೆ. ಅರ್ಜಿ ಶುಲ್ಕ: ರೂ.550/- ಪರೀಕ್ಷಾ ಶುಲ್ಕ ಮತ್ತು ಶೇ.18ರಷ್ಟು ಜಿಎಸ್ ಟಿ ಬೇರೆ ಪಾವತಿಸಬೇಕಾಗುತ್ತದೆ.
ಇದನ್ನೂ ಓದಿ: ನಾನು ಕಾಂಗ್ರೆಸ್ ಶಾಸಕನಾಗಿದ್ದರೂ, RSS ಸ್ವಯಂ ಸೇವಕ – ಅಚ್ಚರಿಯ ಹೇಳಿಕೆ ನೀಡಿದ ಇಲ್ಲಿನ ಶಾಸಕ