Jagadish shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ! ತವರು ಪಕ್ಷದ ಕುರಿತು ಜಗದೀಶ್ ಶೆಟ್ಟರ್ ಲೇವಡಿ

BJP wanted to defeat me and lost itself Jagadish Shettar

Jagadish shettar: ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ (BJP) ತಾನೇ ಸೋತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ (Jagadish Shettar) ಬಿಜೆಪಿ ಕುರಿತು ಲೇವಡಿ ಮಾಡಿದ್ದಾರೆ.

 

ಹೌದು, ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಷರತ್ತು ವಿಧಿಸಿ ಕಾಂಗ್ರೆಸ್(Congress) ಸೇರಿರಲಿಲ್ಲ. ಆದರೆ ನಾನು ಮಾಡಿದ ಸಂಘಟನೆ ನೋಡಿ ಹಲವಾರು ಜನ ನನಗೆ ಸಚಿವ ಸ್ಥಾನ(Minister post) ನೀಡುವಂತೆ ಮನವಿ ಮಾಡಿದ್ದರು. ಆದರೆ ಸದ್ಯ ಒತ್ತಡ ಪರಿಸ್ಥಿತಿಯಿದೆ ಹೀಗಾಗಿ ಮುಂದೆ ಒಳ್ಳೆಯ ಸ್ಥಾನ ನೀಡುವ ಭರವಸೆ ಇದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಅಲ್ಲದೆ ಕ್ಯಾಬಿನೆಟ್​​​(Cabinet) ನಲ್ಲಿ ನಾನು ಮಿನಿಸ್ಟರ್ ಆಗಬೇಕು ಅನ್ನೋದು ಜನರ ಅಭಿಲಾಷೆ ಇತ್ತು. ಹಲವು ಕಾರಣದಿಂದ ಆಗಿಲ್ಲ. ಇನ್ನು ಹಲವಾರು ಸ್ಥಾನಮಾನಗಳಿವೆ. ಯಾವುದೇ ಸ್ಥಾನ ಕೊಟ್ರು ನಿಭಾಯಿಸಿ ಕೊಂಡು ಹೋಗುತ್ತೇನೆ. ಈಗಿನ ಸಂಪುಟ ರಚನೆ ನಂತರ ಕೂತು ಚರ್ಚಿಸುವ ಬಗ್ಗೆ ಮಾತಾಗಿದೆ. ವ್ಯಯಕ್ತಿಕವಾಗಿ ನಾನು ಯಾವುದೇ ಆಸೆ ವ್ಯಕ್ತಪಡಿಸಿಲ್ಲ ಎಂದಿದ್ದಾರೆ.

ಇದರೊಂದಿಗೆ ನನ್ನೊಬ್ಬನನ್ನು ಸೋಲಿಸಲು ಹೋಗಿ ಬಿಜೆಪಿ ತಾನೇ ಸೋತಿದೆ. ಬಿಜೆಪಿಯಲ್ಲಿ ಪಕ್ಷ ಕಟ್ಟುವಂತವರು ಯಾರಿದ್ದಾರೆ? ರಾಜ್ಯದಲ್ಲಿ ಬಿಜೆಪಿಯನ್ನು ಈ ಪರಿಸ್ಥಿತಿ ತರಲು ಕಾರಣರಾದವರು ಈಗ ಎಲ್ಲಿದ್ದಾರೆ? ಇನ್ನೂ ನನ್ನ ಪ್ರಶ್ನೆಗೆ ಯಾರು ಉತ್ತರ ಕೊಟ್ಟಿಲ್ಲ. ಅವರೆಲ್ಲರೂ ಈಗ ನಾಪತ್ತೆಯಾಗಿದ್ದಾರೆ ಎಂದು ಪರೋಕ್ಷವಾಗಿ ಬಿಎಲ್ ಸಂತೋಷ(B L Santosh) ಗೆ ಶೆಟ್ಟರ್ ಟಾಂಗ್ ಕೊಟ್ಟಿದ್ದಾರೆ. ಅಲ್ಲದೆ ವಿರೋಧ ಪಕ್ಷದ ನಾಯಕನನ್ನು(opposition leader) ಆರಿಸಲು ಯಾರೂ ಇಲ್ಲ. ರಾಷ್ಟ್ರೀಯ ಪಕ್ಷಕ್ಕೆ ಇಂತಹ ಪರಿಸ್ಥಿತಿ ಬರಬಾರದಿತ್ತು. ಆರ್‌ಎಸ್‌ಎಸ್(RSS) ಬಜರಂಗದಳ(Bajarangdhal) ಬ್ಯಾನ್ ಯಾರು ಮಾಡಿದ್ದಾರೆ? ನಾನು ಕಾಂಗ್ರೆಸ್ ಸರ್ಕಾರದ ವಕ್ತಾರ ಅಲ್ಲಾ ಎಂದರು.

ಇನ್ನು ಕಾಂಗ್ರೆಸ್‌ಗೆ ಜನ ಬೆಂಬಲ ನೀಡಿದ್ದಾರೆ. ಯಾವ ರೀತಿ ಮುಂದೆ ಹೋಗಬೇಕು ಎಂಬ ಬಗ್ಗೆ ಕಾಂಗ್ರೆಸ್ ತೀರ್ಮಾನ ಮಾಡುತ್ತದೆ. ನಾನು ಲೋಕಸಭಾ ಚುನಾವಣೆಗೆ(Parliament) ಸ್ಪರ್ಧಿಸುವ ಯಾವುದೇ ಚರ್ಚೆಗಳು ನಡೆದಿಲ್ಲ. ಲೋಕಸಭಾ ಚುನಾವಣೆಗೆ ಇನ್ನೂ ಒಂದು ವರ್ಷವಿದೆ. ಕಾಂಗ್ರೆಸ್ ಯಾವ ಜವಾಬ್ದಾರಿ ನೀಡುತ್ತದೆ ಅದನ್ನು ನಿಭಾಯಿಸುತ್ತೇನೆ. ಉತ್ತರ ಕರ್ನಾಟಕ ಭಾಗದ ನಾಯಕರಿಗೆ ಕೆಲವು ಪ್ರಮುಖ ಸ್ಥಾನ ಸಿಕ್ಕಿದೆ. ಮುಂದಿನ ಕ್ಯಾಬಿನೆಟ್‌ನಲ್ಲಿ ಒಂದು ನಿರ್ಧಾರ ಮಾಡುತ್ತೇವೆ ಎಂದಿದ್ದಾರೆ ಎಂದು ಸ್ಪಷ್ಟನೆ ನೀಡಿದರು.

ಇದನ್ನೂ ಓದಿ: Benglore: ಶಾದಿ ಡಾಟ್ ಕಾಮ್‍ನಲ್ಲಿ ಹುಟ್ಟಿದ ಪ್ರೀತಿ ! ಹೋಟೇಲಿಗೆಂದು ಹೇಳಿ ಓಯೋ ರೂಮಿಗೆ ಕರೆದೊಯ್ದ ಪ್ರಿಯತಮ; ನಂತರ ಆದದ್ದೇನು?

Leave A Reply

Your email address will not be published.