Actress Adah Sharma: ಸೆಟ್’ನಲ್ಲಿ ನಿರ್ದೇಶಕರ ನಡವಳಿಕೆಯ ಬಗ್ಗೆ ಮಾಹಿತಿ ಬಿಚ್ಚಿಟ್ಟ ‘ದಿ ಕೇರಳ ಸ್ಟೋರಿ’ ನಟಿ ಅದಾ ಶರ್ಮಾ !

Actress Adah Sharma talks about gender discrimination

Actress Adah Sharma: ಬಹುಭಾಷಾ ನಟಿ ಅದಾ ಶರ್ಮಾ (Actress Adah Sharma) ’ದಿ ಕೇರಳ ಸ್ಟೋರಿ’ (The Kerala story) ಸಿನಿಮಾದ ಮೂಲಕ ದೇಶದಾದ್ಯಂತ ಭಾರೀ ಸುದ್ದಿಯಲ್ಲಿದ್ದಾರೆ. ಚಿತ್ರದಲ್ಲಿ ನಟಿ ಅದಾ ಅದ್ಭುತವಾಗಿ ನಟಿಸಿದ್ದಾರೆ. ನಟಿಯ ನಟನೆಗೆ ವಿಮರ್ಶಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ’ದಿ ಕೇರಳ ಸ್ಟೋರಿ’ ಸಿನಿಮಾದ ಸಕ್ಸಸ್ ಎಂಜಾಯ್ ಮಾಡುತ್ತಿರುವ ನಟಿ ಅದಾ ಇದೀಗ ಸಿನಿರಂಗದ ಬಗ್ಗೆ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳುತ್ತಿದ್ದಾರೆ. ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ. ನಟ ಮತ್ತು ನಟಿಯರ ಮಧ್ಯೆ ನಿರ್ದೇಶಕರು ಭೇದ-ಭಾವ ಮಾಡುತ್ತಾರೆ. ಅಂತಹ ನಿರ್ದೇಶಕರ ಜೊತೆ ಕೆಲಸ ಮಾಡಲು ತಮಗೆ ಇಷ್ಟ ಇಲ್ಲ ಎಂದು ಅದಾ ಶರ್ಮಾ (Adah Sharma) ಹೇಳಿದ್ದಾರೆ.

 

“ನಾನು ಎಲ್ಲ ಜಾಗದಲ್ಲೂ ಒಳ್ಳೆಯ, ಕೆಟ್ಟ ಮತ್ತು ಅತೀ ಕೆಟ್ಟ ಜನರನ್ನು ನೋಡಿದ್ದೇನೆ. ದಕ್ಷಿಣ ಭಾರತ ಮತ್ತು ಉತ್ತರ ಭಾರತದ ನಿರ್ದೇಶಕರ ಜೊತೆ ನಾನು ಕೆಲಸ ಮಾಡಿದ್ದೇನೆ. ಹಲವು ಸಿನಿಮಾಗಳನ್ನು ಮಾಡಿದ್ದೇನೆ. ಈ ವೇಳೆ ಕೆಲವು ಕೆಟ್ಟ ಜನರನ್ನೂ ಕಂಡಿದ್ದೇನೆ. ಹಾಗೆ ಉತ್ತಮರನ್ನೂ ಕಂಡಿದ್ದೇನೆ. ಒಳ್ಳೆಯದು-ಕೆಟ್ಟದು ವ್ಯಕ್ತಿಯ‌ ಮೇಲೆ ನಿರ್ಧಾರ ಆಗಿರುತ್ತದೆ. ಆತನ ಭಾಷೆ ಯಾವುದೇ ಇರಲಿ, ಜಾಗ ಯಾವುದೇ ಇರಲಿ, ನಿರ್ದೇಶಕರು ಅಥವಾ ವ್ಯಕ್ತಿ ಒಳ್ಳೆಯವರಾಗಿದ್ದರೆ ಎಲ್ಲವೂ ಒಳ್ಳೆದಾಗಿರುತ್ತದೆ. ನಿರ್ದೇಶಕ ಕೆಟ್ಟವನಾಗಿದ್ದರೆ ಎಲ್ಲವೂ ಕೆಟ್ಟದಾಗುತ್ತದೆ” ಎಂದು ಅದಾ ಶರ್ಮಾ ಹೇಳಿದ್ದಾರೆ.

“ ಚಿತ್ರರಂಗದಲ್ಲಿ ಲಿಂಗ ತಾರತಮ್ಯ ಇದೆ. ನಟ ಮತ್ತು ನಟಿಯರ ಮಧ್ಯೆ ನಿರ್ದೇಶಕರು ಭೇದ-ಭಾವ ಮಾಡುತ್ತಾರೆ. ಮೊದಲು ಸೆಟ್​ಗೆ ನಟಿಯನ್ನು ಕರೆದು, ಕಾಯಿಸುತ್ತಾರೆ. ಆಮೇಲೆ ನಟನ ಮ್ಯಾನೇಜರ್​ನನ್ನು ಕರೆದು, ನಟಿ ಕಾಯುತ್ತಿದ್ದಾಳೆ ಅಂತ ಹೀರೋಗೆ ಹೇಳಿಕಳಿಸುತ್ತಾರೆ. ಈ ರೀತಿ ಚಿತ್ರರಂಗದಲ್ಲಿ ಪುರುಷ-ಮಹಿಳೆ ಎಂಬ ಲಿಂಗ ತಾರತಮ್ಯ ಮಾಡುತ್ತಾರೆ. ಹೀಗೆ ಇರುವ ಕಡೆಗಳಲ್ಲಿ, ಇಂತಹ ನಿರ್ದೇಶಕರ ಜೊತೆ ಕೆಲಸ ಮಾಡಲು ನನಗೆ ಇಷ್ಟವಿಲ್ಲ” ಎಂದು ಅದಾ ಶರ್ಮಾ ಹೇಳಿದ್ದಾರೆ.

ಅಂದಹಾಗೆ ಅದಾ ಶರ್ಮಾ ಅವರು 2008ರಲ್ಲಿ ರಿಲೀಸ್ ಆದ ‘1920’ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಅವರಿಗೆ ಹಲವು ಆಫರ್​ಗಳು ಬಂದವು. ನಟಿ ಕನ್ನಡದಲ್ಲಿ ಪುನೀತ್ ರಾಜ್​ಕುಮಾರ್ (Puneeth Rajkumar) ಜೊತೆ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ, ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಸದ್ಯ ’ದಿ ಕೇರಳ ಸ್ಟೋರಿ’ ಸಿನಿಮಾದಲ್ಲಿ ಸಾಕಷ್ಟು ಯಶಸ್ಸು ಗಳಿಸಿ, ಮುಂದಿನ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ನಟಿ ತಮ್ಮ ಮುಂದಿನ ಚಿತ್ರ ‘ದಿ ಗೇಮ್ ಆಫ್ ಗಿರ್ಗಿಟ್’ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾ ನಟಿ ಸದಾ ಖಡಕ್ ಪೊಲೀಸ್ ಆಫೀಸರ್ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: Bill Gates Love Story: ಬಿಲ್ ಗೇಟ್ಸ್ ಗೂ ಇತ್ತು ಒಂದು ಬೇಡದ ಪ್ರೇಮ, ಹಳೆ ಲವ್ ತಂದ ಹೊಸ ಸಂಕಷ್ಟ!

Leave A Reply

Your email address will not be published.