Monsoon Rain: ರಾಜ್ಯದಲ್ಲಿ ಜೂನ್ ತಿಂಗಳಲ್ಲಿ ಭಾರೀ ಮಳೆ ಸಾಧ್ಯತೆ ; ಈ ಬಾರಿ ದೇಶದಲ್ಲಿ ಎಷ್ಟು ಮಳೆಯಾಗಲಿದೆ? ಐಎಂಡಿ ಹೇಳೋದೇನು?

Heavy Monsoon Rain is likely in the state in the month of June

Monsoon Rain: ರಾಜ್ಯದಲ್ಲಿ (Karnataka) ಕಳೆದ ಕೆಲ ದಿನಗಳ ಹಿಂದೆ ಬಿಸಿಲ ಬೇಗೆ ಹೆಚ್ಚಾಗಿತ್ತು. ಬಿಸಿಲ ತಾಪ ತಣಿಸಲು ಮಳೆ ಬಂದಿದ್ದರೂ ಮಳೆ‌ ಬಂದಿಲ್ಲವೇನೋ ಎಂಬಷ್ಟು ಬಿಸಿಲು ಸುಡುತ್ತಿತ್ತು. ಇದೀಗ ಮಳೆ ಆರಂಭವಾಗಿದೆ. ಕೆಲವು ಪ್ರದೇಶಗಳಲ್ಲಿ ಗಾಳಿ, ಮಳೆ ಆರ್ಭಟ ಹೆಚ್ಚಾಗಿಯೇ ಇದೆ. ಈ ಮಧ್ಯೆ ನೈಋತ್ಯ ಮಾನ್ಸೂನ್ (Monsoon Rain) ಕುರಿತು ಐಎಂಡಿ ಮುಖ್ಯ ಮಾಹಿತಿ‌ ನೀಡಿದೆ.

ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳ ಮೇಲೆ ನೈಋತ್ಯ ಮಾನ್ಸೂನ್ ಮಾರುತಗಳು ಬೀಸುತ್ತಿದ್ದು, ಈ ಹಿನ್ನೆಲೆ ಈ ವರ್ಷ ದೇಶದಲ್ಲಿ ಸಾಧಾರಣ ಮಳೆಯಾಗಲಿದೆ. ಹಾಗೇ ಈ ವರ್ಷ ಜೂನ್​ನಿಂದ ಸೆಪ್ಟೆಂಬರ್ ನಡುವೆ ಒಳ್ಳೆಯ ಮಳೆಯಾಗಲಿದೆ. ಈ ವೇಳೆ ದೇಶದಲ್ಲಿ ಶೇ.96 ರಿಂದ ಶೇ.104ರಷ್ಟು ಮಳೆಯಾಗುವ ಮುನ್ಸೂಚನೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.

ಭಾರತಕ್ಕೆ (india) ಕೇರಳದ ಮುಖಾಂತರ ಜೂನ್ 4ರಂದು ಮುಂಗಾರು ಮಳೆ ಪ್ರವೇಶಿಸಲಿದೆ. ಕರ್ನಾಟಕಕ್ಕೆ ಜೂನ್ 2ನೇ ವಾರದಲ್ಲಿ ಮುಂಗಾರು ಮಳೆಯ ಪ್ರವೇಶವಾಗಲಿದೆ. ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಜೂನ್ 13ರ ನಂತರ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಮಾಹಿತಿ ನೀಡಿದೆ.

ವಾಯುವ್ಯ ಭಾರತದಲ್ಲಿ ಈ ಬಾರಿ ಶೇ.92ಕ್ಕಿಂತ ಮಳೆಯಾಗಲಿದೆ. ಇನ್ನು ಉಳಿದ ಭಾಗಗಳಲ್ಲಿ ಉತ್ತಮ ಮಳೆಯಾಗಲಿದೆ ಎಂದು ಎಂದ ಐಎಂಡಿ ಹೇಳಿದೆ. ಈ ಬಾರಿ ನೈಋತ್ಯ ಮಾರುತುಗಳ ಚಲನೆ ವೇಳೆ ಸಮುದ್ರದಲ್ಲಿ ಪ್ರಕ್ಷುಬ್ಧತೆ ಇಲ್ಲ. ಹಾಗಾಗಿ ರಾಜ್ಯದಲ್ಲಿ ಜೂನ್ ಎರಡನೇ ವಾರದಲ್ಲಿಯೇ ಮುಂಗಾರು ಮಳೆಯಾಗುವ ಸಾಧ್ಯತೆಗಳು ಹೆಚ್ಚಿದೆ ಎನ್ನಲಾಗಿದೆ

 

ಇದನ್ನು ಓದಿ: UT Khadar: ಸದನದಲ್ಲಿ ಮಾನ್ಯ ಸಭಾಧ್ಯಕ್ಷರೇ ಅನ್ನಬೇಕಾ? ಸಾಬಾಧ್ಯಕ್ಷರೇ ಅನ್ನಬೇಕಾ?’ ಖಾದರ್ ವಿರುದ್ಧ ಹಿಂದೂ ಮುಖಂಡನ ಅವಹೇಳನಕಾರಿ ಪೋಸ್ಟ್! 

Leave A Reply

Your email address will not be published.