Tulsi Growing Rules: ಮನೆಯಲ್ಲಿ ಇಂತಿಷ್ಟೇ ಸಂಖ್ಯೆಯಲ್ಲಿ ತುಳಸಿ ನೆಡಬೇಕು, ಶಾಸ್ತ್ರ ಈ ಬಗ್ಗೆ ಏನು ಹೇಳುತ್ತೆ ?

Follow these rules for growing basil

Tulsi Growing Rules: ಹಿಂದೂ ಧರ್ಮದಲ್ಲಿ ತುಳಸಿ ಗಿಡವು (Tulsi plant) ಎಲ್ಲಕ್ಕಿಂತ ಪವಿತ್ರವಾದದ್ದು. ವೃಂದಾ ಎಂದೂ ಕರೆಯಲ್ಪಡುವ ಈ ತುಳಸಿಯನ್ನು ಸ್ವರ್ಗದ ಹೆಬ್ಬಾಗಿಲು ಅಥವಾ ದೇವರ ವಾಸಸ್ಥಾನವಾದ ವೈಕುಂಠ ಎಂದು ಹಿಂದೂಗಳು ನಂಬುತ್ತಾರೆ. ತುಳಸಿ ಸಸ್ಯದ ವಿವಿಧ ಭಾಗಗಳನ್ನು ದೇವತೆಗಳ ವಾಸಸ್ಥಾನವೆಂದು ಪರಿಗಣಿಸಲಾಗುತ್ತದೆ. ಅಲ್ಲದೆ, ತುಳಸಿಯನ್ನು ಲಕ್ಷ್ಮಿ ದೇವಿಯ ಭೌತಿಕ ಅವತಾರವೆಂದು ನಂಬಲಾಗಿದೆ. ತುಳಸಿ ಗಿಡವನ್ನು ಪ್ರತಿದಿನ ಸ್ನಾನದ ನಂತರ ಸಮೃದ್ಧಿ ಮತ್ತು ಶಾಂತಿಗಾಗಿ ಪೂಜಿಸಲಾಗುತ್ತದೆ.

ಇದಲ್ಲದೆ, ತುಳಸಿ ಜನರಿಗೆ ವಾಸ್ತು ದೋಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಮನೆಯಲ್ಲಿ ತುಳಸಿ ಸಸ್ಯದ ಉಪಸ್ಥಿತಿಯು ನಕಾರಾತ್ಮಕ ಶಕ್ತಿಗಳನ್ನು (negative energy) ನಿರ್ಮೂಲನೆ ಮಾಡಲು ಅಥವಾ ದುಷ್ಟಶಕ್ತಿಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ತುಳಸಿ ಸಸ್ಯವು ಔಷಧೀಯ ಗುಣಗಳನ್ನು ಹೊಂದಿದೆ. ಆದರೆ, ಮನೆಯಲ್ಲಿ ತುಳಸಿ ಗಿಡವನ್ನು ನೆಡುವುದಕ್ಕೆ ಅದರದೇ ಆದ ನಿಯಮಗಳಿವೆ. ಮನೆಯಲ್ಲಿ ಇಂತಿಷ್ಟೇ ಸಂಖ್ಯೆಯಲ್ಲಿ ತುಳಸಿ ನೆಡಬೇಕು (Tulsi Growing Rules). ಈ ಬಗ್ಗೆ ಶಾಸ್ತ್ರ ಏನು ಹೇಳುತ್ತೆ? ಇಲ್ಲಿದೆ ನೋಡಿ ಮಾಹಿತಿ.

ಹೆಚ್ಚಾಗಿ ಎಲ್ಲರ ಮನೆಯ ತುಳಸಿ ಕಟ್ಟೆಯಲ್ಲಿ ಒಂದು ತುಳಸಿ ಗಿಡ ಇರುತ್ತದೆ. ಅದರ ಹೊರತಾಗಿ ಮನೆಯ ಅಂಗಳದಲ್ಲಿ ತುಳಸಿ ಗಿಡ ಸಾಮಾನ್ಯವಾಗಿರುತ್ತದೆ. ಆದರೆ, ಮನೆಯಲ್ಲಿ ಇಂತಿಷ್ಟೇ ಸಂಖ್ಯೆಯಲ್ಲಿ ತುಳಸಿಗಿಡ ನೆಡಬೇಕು. ಹೌದು, ವಾಸ್ತುಶಾಸ್ತ್ರದ ಪ್ರಕಾರ, ಮನೆಯಲ್ಲಿ 1 ತುಳಸಿ ಗಿಡವನ್ನು ನೆಡಬಹುದು. ಇಲ್ಲವೆ, 3, 5 ಅಥವಾ 7 ತುಳಸಿ ಗಿಡಗಳನ್ನೂ ನೆಡಬಹುದು. ನೀವು ನೆಡುವ ತುಳಸಿ ಗಿಡಗಳ ಸಂಖ್ಯೆ ಬೆಸ ಸಂಖ್ಯೆಯಲ್ಲಿದ್ದರೆ ಅದನ್ನು ಅತ್ಯಂತ ಶುಭ ಎನ್ನಲಾಗುತ್ತದೆ.

ತುಳಸಿ ಗಿಡಗಳನ್ನು ನೆಡಲು ಗುರುವಾರ ಅತ್ಯಂತ ಶ್ರೇಷ್ಠ ದಿನ ಎಂದು ಪರಿಗಣಿಸಲಾಗಿದೆ. ವಿಷ್ಣುವಿಗೆ ಸಮರ್ಪಿತವಾದ ದಿನವಾದ ಗುರುವಾರ ತುಳಸಿ ಗಿಡಗಳನ್ನು ನೆಡುವುದರಿಂದ ವಿಷ್ಣುವಿನ ಕೃಪೆ ದೊರೆಯುತ್ತದೆ. ಇದನ್ನು ಹೊರತುಪಡಿಸಿ, ತುಳಸಿ ಗಿಡ ನೆಡಲು ಕಾರ್ತಿಕ ಮಾಸ ಕೂಡ ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಕಾರ್ತಿಕ ಮಾಸದಲ್ಲಿ ತುಳಸಿ ಗಿಡವನ್ನು ಮನೆಯಲ್ಲಿ ನೆಟ್ಟು ಇಡೀ ತಿಂಗಳು ಸಂಜೆ ತುಳಸಿಯ ಬಳಿ ತುಪ್ಪದ ದೀಪವನ್ನು ಹಚ್ಚಿದರೆ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃದ್ಧಿಯಾಗುತ್ತದೆ. ಶುಕ್ರವಾರ ತುಳಸಿ ಗಿಡವನ್ನು ನೆಟ್ಟರೆ ಲಕ್ಷ್ಮೀ ದೇವಿಯ ಕೃಪೆಗೆ ಪಾತ್ರರಾಗುತ್ತೀರಿ ಎಂಬ ನಂಬಿಕೆಯಿದೆ. ಶನಿವಾರದಂದು ತುಳಸಿ ಗಿಡವನ್ನು ನೆಟ್ಟರೆ ಆರ್ಥಿಕ ಸಮಸ್ಯೆಗಳು ಎದುರಾಗುವುದು ಕಡಿಮೆಯಾಗಲಿದೆ.

ತುಳಸಿ ಗಿಡವನ್ನು ಮನೆಯ ಮೇಲ್ಛಾವಣಿಯಲ್ಲಿ ಅಥವಾ ಅಂಗಳದಲ್ಲಿ ನೆಡಬಹುದು. ಮನೆಯ ಬಾಲ್ಕನಿ ಅಥವಾ ಕಿಟಕಿಯ ಪಕ್ಕ ನೆಡಬಹುದು. ಹಾಗೇ ಉತ್ತರ ಹಾಗೂ ಈಶಾನ್ಯ ದಿಕ್ಕಿನಲ್ಲಿ ತುಳಸಿ ಗಿಡವನ್ನು ನೆಡುವುದರಿಂದ ಉತ್ತಮ ಫಲಗಳು ಲಭ್ಯವಾಗಿ, ನಕಾರಾತ್ಮಕ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ ಎಂಬ ನಂಬಿಕೆಯಿದೆ.

 

ಇದನ್ನು ಓದಿ: PM Narendra Modi: ನೂತನ ಸಂಸತ್ತಿನ ವಿಡಿಯೋ ಹಂಚಿಕೊಂಡ ಪ್ರಧಾನಿ ನರೇಂದ್ರ ಮೋದಿ, ನೋಡಿ ಆ ವೈಭವ ! 

Leave A Reply

Your email address will not be published.