Home News Senior critic GH Nayaka is no more: ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಪ್ರಾಧ್ಯಾಪಕ...

Senior critic GH Nayaka is no more: ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಪ್ರಾಧ್ಯಾಪಕ ಜಿ ಎಚ್ ನಾಯಕ ಇನ್ನಿಲ್ಲ!

Senior critic GH Nayaka
Image source- Vistara news- Kannada news

Hindu neighbor gifts plot of land

Hindu neighbour gifts land to Muslim journalist

Senior critic GH Nayaka: ಕನ್ನಡದ ಖ್ಯಾತ ವಿಮರ್ಶಕ, ಹಿರಿಯ ಸಾಹಿತಿ, ಪ್ರಾಧ್ಯಾಪಕ, ಜಿ. ಎಚ್ ನಾಯಕ(Senior critic GH Nayaka) ಅವರು ಹೃದಯಾಘಾತದಿಂದ ಇಂದು ನಿಧನರಾಗಿದ್ದಾರೆ.

ಕನ್ನಡ ಸಾಹಿತ್ಯ(Kannada literature) ಲೋಕದಲ್ಲಿ ಜಿ.ಎಚ್. ನಾಯಕ ಎಂದೇ ಚಿರಪರಿಚಿತರಾಗಿದ್ದ ಗೋವಿಂದರಾಯ ಹಮ್ಮಣ್ಣ ನಾಯಕ ಇಂದು ವಯೋಸಹಜ ಅನಾರೋಗ್ಯದಿಂದ ಬಳಲಸುತ್ತಿದ್ದು, ಶುಕ್ರವಾರ (ಮೇ 26) ಮೈಸೂರಿನ(Mysore) ಕುವೆಂಪು ನಗರದಲ್ಲಿರುವ(Kuvempu Nagar) ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.

ಉತ್ತರ ಕನ್ನಡ ಜಿಲ್ಲೆಯ(Uttar kannada district) ಅಂಕೋಲಾ(Ankola) ತಾಲೂಕಿನ ಸೂರ್ವೆ ಗ್ರಾಮದವರಾದ ಜಿ.ಎಚ್​. ನಾಯಕ ಅವರು ಮೈಸೂರು ವಿಶ್ವವಿದ್ಯಾಲಯದಲ್ಲಿ (Mysore University) ಕನ್ನಡ ಅಧ್ಯಾಪಕರಾಗಿ, ಮುಂದೆ ಪ್ರಾಧ್ಯಾಪಕರಾಗಿ (Kannada professor) ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದರು. ನಿವೃತ್ತಿ ಬಳಿಕ ಮೈಸೂರಿನ ಕುವೆಂಪು ನಗರದಲ್ಲಿ ನೆಲೆಸಿದ್ದ ಅವರು ಮೈಸೂರಿಗರೇ ಆಗಿದ್ದರು.

ಪೂರ್ಣಚಂದ್ರ ತೇಜಸ್ವಿ(Poornachandra tejaswi), ಪಿ ಲಂಕೇಶ್(P Lankesh) ಮುಂತಾದ ಲೇಖಕರಿಗೆ ಆಪ್ತರಾಗಿದ್ದ ಅವರು ಮೈಸೂರಿನ ಸಾಹಿತ್ಯಕ ಪರಿಸರದ ಅವಿಭಾಜ್ಯ ಅಂಗವಾಗಿದ್ದರು. ವಿದ್ಯಾರ್ಥಿಗಳ ನಡುವೆ ಅವರು ಅತ್ಯಂತ ಜನಪ್ರಿಯ ಅಧ್ಯಾಪಕರಾಗಿದ್ದರು. ಕೇಂದ್ರ ಸಾಹಿತ್ಯ ಅಕಾಡೆಮಿ, ಪಂಪ ಪ್ರಶಸ್ತಿ ಪುರಸ್ಕೃತರಾಗಿದ್ದ ನಾಯಕರು ಪತ್ನಿ, ಸಾಮಾಜಿಕ ಹೋರಾಟಗಾರ್ತಿ ಮೀರಾ ನಾಯಕ ಹಾಗೂ ಪುತ್ರಿ ದೀಪಾ ಅವರನ್ನು ಅಗಲಿದ್ದು ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವನ್ನುಂಟುಮಾಡಿದೆ.

ತಮ್ಮ ವಿಮರ್ಶಾ ಕೃತಿಗಳ ಮೂಲಕ ಗುರುತಿಸಿಕೊಂಡಿದ್ದ ನಾಯಕರು ಸಮಕಾಲೀನ, ಅನಿವಾರ್ಯ, ನಿರಪೇಕ್ಷೆ, ನಿಜದನಿ, ಉತ್ತರಾರ್ಧ, ಸಾಹಿತ್ಯ ಸಮೀಕ್ಷೆ, ಹರಿಶ್ಚಂದ್ರ ಕಾವ್ಯ ಓದು-ವಿಮರ್ಶೆ ಹೀಗೆ ಹತ್ತಾರು ವಿಮರ್ಶಾಕೃತಿಗಳನ್ನು ರಚಿಸಿದ್ದರು. ಕನ್ನಡ ಸಣ್ಣಕಥೆಗಳು, ಹೊಸಗನ್ನಡ ಕವಿತೆಗಳು, ಸಂವೇದನೆ(ಅಡಿಗರ ಗೌರವ ಗ್ರಂಥ), ಶ್ರೀ ರಾಮಾಯಣ ದರ್ಶನಂ ಕುವೆಂಪು ಸ್ವಹಸ್ತಾಕ್ಷರ ಪ್ರತಿ ಹಾಗೂ ಶತಮಾನದ ಕನ್ನಡ ಸಾಹಿತ್ಯ ಕುರಿತ ಸಂಪಾದಕೀಯದ ಜತೆಗೆ ‘ಬಾಳು’ ಎಂಬ ಆತ್ಮಕಥನವನ್ನು ರಚಿಸಿದ್ದರು.

 

ಇದನ್ನು ಓದಿ: Mysteries Place: ಅಬ್ಬಬ್ಬಾ!! ಏನಿದು ಆಶ್ಚರ್ಯ? ಈ ಬೀಚ್’ನಲ್ಲಿ ನೋಡಿದಾಕ್ಷಣ ಕಣ್ಮರೆಯಾಗುತ್ತೆ ನೀರು!!