Gnanavapi Masjid – Adi Vishweshwar Temple: ಜ್ಞಾನವಾಪಿ ಪ್ರಕರಣ: ಯಾವುದೇ ಶಿವಲಿಂಗ ಪತ್ತೆಯಾಗಿಲ್ಲ- ಮಸೀದಿ ಸಮಿತಿ

Gnanavapi Masjid and Adi Vishweshwar temple matter

Gnanavapi Masjid-AdiVishweshwar Temple: ಜ್ಞಾನವಾಪಿ ಮಸೀದಿ – ಆದಿ ವಿಶ್ವೇಶ್ವರ ದೇವಸ್ಥಾನದ (Gnanavapi Masjid-AdiVishweshwar Temple) ವಿವಾದ ಕೋರ್ಟ್ ಮೆಟ್ಟಿಲೇರಿ, ಪ್ರಕರಣದ ಚರ್ಚೆಗಳು ನಡೆಯುತ್ತಲೇ ಇವೆ. ಈ ಮಧ್ಯೆ ಇದೀಗ ಜ್ಞಾನವ್ಯಾಪಿ ಮಸೀದಿಯ ಸಮಿತಿಯು ವಾರಣಾಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಮೊಘಲ್ ಚಕ್ರವರ್ತಿ ಔರಂಗಜೇಬ್ ಕ್ರೂರವಾಗಿರಲಿಲ್ಲ. ವಾರಣಾಸಿಯ ಯಾವುದೇ ಆದಿ ವಿಶ್ವೇಶ್ವರ ದೇವಾಲಯವನ್ನು ನೆಲಸಮಗೊಳಿಸಿಲ್ಲ ಎಂದು ಹೇಳಿದೆ.

ಜ್ಞಾನವಾಪಿ ಮಸೀದಿಯು ಉತ್ತರ ಪ್ರದೇಶದ ವಾರಣಾಸಿಯಲ್ಲಿದೆ. ಆದರೆ, ಈ ಸ್ಥಳದಲ್ಲಿ ಹಳೆಯ ಶಿವ ದೇವಾಲಯವಾದ ಆದಿ ವಿಶ್ವೇಶ್ವರ ದೇವಾಲಯವಿತ್ತು . ಇದನ್ನು 16ನೇ ಶತಮಾನದ ಉತ್ತರಾರ್ಧದಲ್ಲಿ ಮಹಾರಾಷ್ಟ್ರದ ಬನಾರಸ್‌ನ ಪ್ರಖ್ಯಾತ ಬ್ರಾಹ್ಮಣ ವಿದ್ವಾಂಸ ನಾರಾಯಣ ಭಟ್ಟರ ಜೊತೆಯಲ್ಲಿ ಅಕ್ಬರನ ಪ್ರಧಾನ ಆಸ್ಥಾನಿಕ ಮತ್ತು ಮಂತ್ರಿ ತೋಡರ್ ಮಲ್ ನಿರ್ಮಿಸಿದ್ದರು. ಇದನ್ನು ಮೊಘಲ್‌ ಅರಸ ಔರಂಗಜೇಬನು 1669 ರಲ್ಲಿ ಕೆಡವಿ ಮಸೀದಿ ನಿರ್ಮಿಸಿದನು ಎಂದು ಹೇಳಲಾಗಿತ್ತು.

ಮೊಘಲ್‌ ಅರಸ ಔರಂಗಜೇಬ್‌ ಆಡಳಿತದ ವೇಳೆ 1669ರಲ್ಲಿ ಆತನ ಸೂಚನೆಯ ಮೇರೆಗೆ ಪ್ರಾಚೀನ ದೇವಾಲಯದಲ್ಲಿರುವ ಜ್ಯೋತಿರ್ಲಿಂಗವನ್ನು ಭಂಜಿಸಲಾಗಿತ್ತು. ಆದರೆ, ಶೃಂಗಾರ ಗೌರಿ ಮತ್ತು ಗಣೇಶನ ಮೂರ್ತಿಗಳು ಅಲ್ಲೇ ಇವೆ. ಪ್ರಾಚೀನ ಆದಿ ವಿಶೇಶ್ವರ ದೇವಾಲಯದ ಒಂದು ಭಾಗವನ್ನು ಧ್ವಂಸಗೊಳಿಸಿ ಗ್ಯಾನವಪಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಈ ಹಿಂದೆ ಕೋರ್ಟ್ ಗೆ ಮನವಿ ಸಲ್ಲಿಸಲಾಗಿತ್ತು. ಇದೀಗ ಔರಂಗಜೇಬ್’ ಕ್ರೂರಿಯಲ್ಲ. ಜ್ಞಾನವ್ಯಾಪಿ ಮಸೀದಿ ಆವರಣದಲ್ಲಿ ಯಾವುದೇ ‘ಶಿವಲಿಂಗ’ ಪತ್ತೆಯಾಗಿಲ್ಲ ಎಂದು ಮಸೀದಿ ಸಮಿತಿ ಹೇಳಿದೆ.

ಇದನ್ನೂ ಓದಿ: Pratap Simha: ರಾಜಕೀಯ ಹಿನ್ನಡೆಯ ಹೊರತಾಗಿಯೂ ಹಿಡಿದ ಕೆಲಸ ಬಿಡುವುದಿಲ್ಲ, ಮಾತಿನ ಜೊತೆಗೆ ಕೆಲಸನೂ ಮಾಡುತ್ತೇನೆ- ಪ್ರತಾಪ್‌ ಸಿಂಹ

Leave A Reply

Your email address will not be published.