Pratap Simha: ರಾಜಕೀಯ ಹಿನ್ನಡೆಯ ಹೊರತಾಗಿಯೂ ಹಿಡಿದ ಕೆಲಸ ಬಿಡುವುದಿಲ್ಲ, ಮಾತಿನ ಜೊತೆಗೆ ಕೆಲಸನೂ ಮಾಡುತ್ತೇನೆ- ಪ್ರತಾಪ್‌ ಸಿಂಹ

BJP MP Pratap Simha talks over Karnataka assembly election 2023

Pratap Simha: ಈ ಬಾರಿಯ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ (Karnataka) ಬಿಜೆಪಿ (bjp) ಸೋಲು ಕಂಡಿದೆ. ಈ ಹಿನ್ನೆಲೆ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಪ್ರತಾಪ್ ಸಿಂಹ (Pratap Simha) ಚುನಾವಣೆ ಸೋಲಿನ ನಂತರ ನೊಂದು ಹತಾಶನಾಗಿದ್ದೇನೆ. ನಾನು ತಂದಿರುವ ಯೋಜನೆಗಳನ್ನು ಶೀಘ್ರವೇ ಅನುಷ್ಠಾನಗೊಳಿಸಲು ನಿಮ್ಮೆಲ್ಲರ ಸಹಕಾರ, ಪ್ರೋತ್ಸಾಹ ಬೇಕು ಎಂದಿದ್ದಾರೆ.

ಪಕ್ಷ, ಸಿದ್ಧಾಂತದ ವಿಚಾರ ಬಂದಾಗ ಮಾತಿನ ಜೊತೆಗೆ ಕೆಲಸವನ್ನೂ ಮಾಡುತ್ತೇನೆ. ಈ ಬಾರಿ ನಮ್ಮದೇ ರಾಜ್ಯ ಸರ್ಕಾರವಿದ್ದಿದ್ದರೆ ಯೋಜನೆ ಅನುಷ್ಠಾನಗೊಳಿಸಲು ಅನುಕೂಲವಾಗುತ್ತಿತ್ತು. ಅಂದು ನಮ್ಮ ಸರ್ಕಾರ ಇದ್ದಿದ್ದರಿಂದಲೇ ಎಲ್ಲ ಅಡೆತಡೆಗಳನ್ನು ಮೆಟ್ಟಿ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯನ್ನು ಪೂರ್ಣಗೊಳಿಸಲು ಸಾಧ್ಯವಾಯಿತು. ಆದರೆ, ಸದ್ಯ ನಮ್ಮ ಸರ್ಕಾರ ಇಲ್ಲದಿದ್ದರೂ ನಾನು ಹಿಡಿದ ಕೆಲಸ ಬಿಡುವುದಿಲ್ಲ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಅನುಷ್ಟಾನಕ್ಕಿರುವ ಯೋಜನೆಗಳು:-
• ಮೈಸೂರು- ಬೆಂಗಳೂರು ದಶಪಥ ರಸ್ತೆಯ ಬಾಕಿ ಉಳಿದ ಕಾಮಗಾರಿ ಪೂರ್ಣಗೊಳಿಸುವುದು.
• ಮೈಸೂರು- ಕುಶಾಲನಗರ ನಾಲ್ಕು ಪಥ ರಸ್ತೆ ಕಾಮಗಾರಿ ಶೀಘ್ರ ಪ್ರಾರಂಭಿಸುವುದು.
• ಮೈಸೂರು ವಿಮಾನ ನಿಲ್ದಾಣದ ಉನ್ನತೀಕರಣ ಹಾಗೂ ವಿಸ್ತರಣೆಗೆ ಅಗತ್ಯವಿರುವ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಅಧಿಕಾರಿಗಳೊಂದಿಗೆ ಸಭೆ.
• ದಡದಕಲ್ಲಹಳ್ಳಿ ಗ್ರಾಮದಲ್ಲಿ ಕಿದ್ವಾಯಿ ಸ್ಮಾರಕ ಗ್ರಂಥಿ ಸಂಸ್ಥೆಯ ಸಂಶೋಧನಾ ಘಟಕ ನಿರ್ಮಾಣ.
• ಗ್ಯಾಸ್‌ ಪೈಪ್‌ ಲೈನ್‌ ಅಳವಡಿಸುವ ಕಾಮಗಾರಿ ತುರ್ತಾಗಿ ಕೈಗೊಳ್ಳುವುದು‌.
• ಹುಣಸೂರಿನ 49 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯ ಟೆಂಡರ್‌ ಕರೆಸಿ ಕಾಮಗಾರಿ ಆರಂಭ.
• ಜಲ ಜೀವನ್‌ ಮಿಷನ್‌ ಯೋಜನೆಯಡಿಯಲ್ಲಿ ಹುಣಸೂರು ತಾಲೂಕಿನ 164 ಗ್ರಾಮಗಳಿಗೆ ಕುಡಿಯುವ ನೀರು ಪೂರೈಸುವುದು.
• ಬೃಹತ್‌ ಮೈಸೂರು ನಿರ್ಮಾಣ ಸಂಬಂಧ ಮೈಸೂರು ನಗರ ಪಾಲಿಕೆಯಲ್ಲಿ ಪ್ರಸ್ತಾವನೆ ಮಂಡನೆ.
• ಪಿರಿಯಾಪಟ್ಟಣದ ಗ್ರಾಮದೇವತೆ ಮಸಣಿಕಮ್ಮ ದೇವಾಲಯದ ಮರುನಿರ್ಮಾಣಕ್ಕೆ ಆದ್ಯತೆ.
• ಶಾಸ್ತ್ರೀಯ ಕನ್ನಡ ಭಾಷಾ ಅತ್ಯುನ್ನತ ಅಧ್ಯಯನ ಕೇಂದ್ರ ಸ್ಥಾಪಿಸುವುದು.

• ಹೊರವರ್ತುಲ ರಸ್ತೆ ನಿರ್ಮಾಣ ಸಂಬಂಧ ಎಂಡಿಎ ಅಧಿಕಾರಿಗಳೊಂದಿಗೆ ಸಭೆ.
• ಮೈಸೂರು ತಾಲ್ಲೂಕು, ಹುಯಿಲಾಳು ಗ್ರಾಮದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್‌ ಕ್ರೀಡಾಂಗಣ ನಿರ್ಮಾಣ.
• ರೈಲ್ವೆ ಇಲಾಖೆಯ ಅಭಿವೃದ್ಧಿ ಕಾಮಗಾರಿ ತುರ್ತಾಗಿ ಕೈಗೊಳ್ಳುವ ಸಂಬಂಧ ಗತಿ ಶಕ್ತಿ ಹಾಗೂ ರೈಲ್ವೆ ಅಧಿಕಾರಿಗಳೊಂದಿಗೆ ಸಭೆ.
• ಮೈಸೂರಿನ ಪಪಂ ಹಾಗೂ ನಗರ ಸಭೆ ವ್ಯಾಪ್ತಿಯಲ್ಲಿ ಜಲ ಜೀವನ್‌ ಮಿಷನ್‌ ಅನುಷ್ಠಾನ.
• ಮೈಸೂರು ನಗರ ಪಾಲಿಕೆಯು ವಿದ್ಯಾರಣ್ಯಪುರಂ ಸೀವೇಜ್‌ ಫಾರಂನಲ್ಲಿ ಸಂಗ್ರಹವಾದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಯೋಜನೆಯ ತ್ವರಿತ ಅನುಷ್ಠಾನ.
• ಚಾಮುಂಡಿ ಬೆಟ್ಟವನ್ನು ಕೇಂದ್ರ ಸರ್ಕಾರದ ಪ್ರಸಾದ್‌ ಯೋಜನೆಯಡಿ ಅಭಿವೃದ್ದಿಪಡಿಸುವುದು.
• ಮೈಸೂರು ವಸ್ತು ಪ್ರದರ್ಶನ ಮೈದಾನವನ್ನು ಕೇಂದ್ರ ಸರ್ಕಾರದ ಸ್ವದೇಶಿ ದರ್ಶನ ಯೋಜನೆಯಡಿ ಅಭಿವೃದ್ಧಿಗೆ ಆದ್ಯತೆ
• ಜಲ ಜೀವನ್‌ ಮಿಷನ್‌ ಯೋಜನೆಯಡಿ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಹಾಗೂ ಇತರೆ 303 ಗ್ರಾಮಕ್ಕೆ ಕುಡಿಯುವ ನೀರು ಪೂರೈಸುವ ಕಾಮಗಾರಿ ಅನುಷ್ಠಾನಕ್ಕೆ ಸಭೆ
• ಕೊಡಗು ಜಿಲ್ಲೆಯಾದ್ಯಂತ ಜಲ ಜೀವನ್‌ ಮಿಷನ್‌ ಯೋಜನೆಯಡಿ ಕುಡಿಯುವ ನೀರು ಪೂರೈಸುವ ಕಾಮಗಾರಿ ಅನುಷ್ಠಾನ ಕುರಿತ ಸಭೆ

ಇದನ್ನೂ ಓದಿ: ಯುವ ಜೆಡಿಎಸ್‌ ಅಧ್ಯಕ್ಷತೆಗೆ ನಿಖಿತ್‌ ಕುಮಾರಸ್ವಾಮಿ ರಾಜೀನಾಮೆ

Leave A Reply

Your email address will not be published.