Ashok kumar: ನನ್ನ ಇಬ್ಬರೂ ಹೆಣ್ಣುಮಕ್ಕಳು ಗಂಡಂದಿರನ್ನು ಬಿಟ್ಟು ನಿತ್ಯಾನಂದನೊಂದಿಗೆ ವಾಸಿಸುತ್ತಿದ್ದಾರೆ : ಶಾಕಿಂಗ್ ಹೇಳಿಕೆ ನೀಡಿ ಕಣ್ಣೀರಿಟ್ಟ ಖ್ಯಾತ ನಟ!!

Actor Ashok Kumar comments about his daughters and Nithyananda

Share the Article

Ashok kumar : ದಕ್ಷಿಣ ಭಾರತದ(South india) ಹಿರಿಯ ನಟ ಅಶೋಕ್ ಕುಮಾರ್(Ashok kumar) ಅವರು ನಿತ್ಯಾನಂದ ಸ್ವಾಮಿ (Nithyananda Swamy) ಬಗ್ಗೆ ಶಾಕಿಂಗ್ ಹೇಳಿಕೆಯೊಂದನ್ನ ಬಿಚ್ಚಿಟ್ಟಿದ್ದು, ನನ್ನ ಇಬ್ಬರೂ ಮಕ್ಕಳು ತಮ್ಮ ತಮ್ಮ ಗಂಡಂದಿರಿಗೆ ಡಿವೋರ್ಸ್(Divorce) ಕೊಟ್ಟು ನಿತ್ಯಾನಂದನ ಜೊತೆ ಇರೋದಾಗಿ ಅಸಲಿ ವಿಚಾರವನ್ನ ಬಿಚ್ಚಿಟ್ಟು, ಕಣ್ಣೀರ ಕರಿದಿದ್ದಾರೆ.

ಹೌದು, ದಕ್ಷಿಣ ಭಾರತದ ಹಿರಿಯ ನಟ ಅಶೋಕ್‌ ಕುಮಾರ್ ತೆಲುಗು ಸಂದರ್ಶನವೊಂದರಲ್ಲಿ(Interweav) ಮಾತನಾಡಿದ್ದು, ಈ ವೇಳೆ ಶಾಕಿಂಗ್ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. ಅಶೋಕ್ ಕುಮಾರ್ ತೆಲುಗು(Telugu) ಸಿನಿಮಾಗಳಲ್ಲಿ ಹೆಚ್ಚು ನಟಿಸಿದ್ದಾರೆ. ಪುಟ್ಟಣ್ಣ ಕಣಗಾಲ್(Puttanna kanagal) ಜೊತೆಗೂ ಆತ್ಮೀಯ ಒಡನಾಟ ಇಟ್ಟುಕೊಂಡಿದ್ದರು. ಸದ್ಯ ಸಂದರ್ಶನದಲ್ಲಿ ತಮ್ಮ ವೈಯಕ್ತಿಕ ಜೀವನ ಹಾಗೂ ಕುಟುಂಬದ ಬಗ್ಗೆ ಮಾತನಾಡಿ, ಈ ವೇಳೆ ಭಾವುಕರಾಗಿದ್ದಾರೆ.

85 ವರ್ಷ ವಯಸ್ಸಿನ ಅಶೋಕ್ ಕುಮಾರ್ ತಮ್ಮ ಕುಟುಂಬದ ಬಗ್ಗೆ ಮಾತನಾಡುತ್ತಾ “ಒಂದು ಅರ್ಥದಲ್ಲಿ ನನ್ನ ಕುಟುಂಬ ನನಗೆ ಶತ್ರು ಆಗಿಬಿಡ್ತು. ಹುಡುಗಿ ಹೇಗಿದ್ದಾಳೆ ಅಂತ ನೋಡದೇ ನಾನು ನನ್ನ ಮಡದಿಯನ್ನು ಮದುವೆ ಆಗಿದ್ದೆ. ಮದುವೆ ಮಂಟಪದಲ್ಲಿ ಆಕೆಯನ್ನು ನೋಡಿದಾಗ ನನಗೆ ಇಷ್ಟವಾಗಲಿಲ್ಲ. ಆದರೆ ಬೇರೆ ವಿಧಿಯಿಲ್ಲದೇ ಮದುವೆ ಆಗುವಂತಾಯಿತು. ಇಷ್ಟವಿಲ್ಲದ ಮದುವೆ ಕಾರಣಕ್ಕೆ ಪೊಲೀಸ್ ಕೆಲಸ ಬಿಟ್ಟೆ. ನಂತರ ನನ್ನ ತಪ್ಪಿನ ಅರಿವಾಗಿ ಆಕೆಯನ್ನು ಮದ್ರಾಸ್‌ಗೆ ಕರೆದುಕೊಂಡು ಹೋದೆ. ನಮಗೆ ಮೂರು ಜನ ಹೆಣ್ಣು ಮಕ್ಕಳು”

“ಮೂವರು ಮಕ್ಕಳನ್ನು ಚೆನ್ನಾಗಿ ಓದಿಸಿದೆ. ಅವರು ಇಷ್ಟಪಟ್ಟವರ ಜೊತೆ ಮದುವೆ ಮಾಡಿಕೊಟ್ಟೆ. ಮೊದಲನೇ ಮಗಳು ಮದುವೆ ಆಗಿ ಅಮೆರಿಕಾ(America)ದಲ್ಲಿ ಇದ್ದಳು. ಅವಳು ಆಗಾಗ ನಿತ್ಯಾನಂದ(Nityananda) ಸ್ವಾಮಿ ಆಶ್ರಮಕ್ಕೆ ಪ್ರವಚನ ಕೇಳಲು ಹೋಗುತ್ತಿದ್ದಳು. ಅಕ್ಕನನ್ನು ನೋಡಲು ನನ್ನ 2ನೇ ಮಗಳು ರಂಜಿತಾ(Ranjita) ಹೋಗಲು ಆರಂಭಿಸಿದ್ದಳು. ಈಗ 2ನೇ ಮಗಳು ರಂಜಿತಾ, ನಿತ್ಯಾನಂದ ಸ್ವಾಮಿ ಜೊತೆ ಇದ್ದಾಳೆ. ರಂಜಿತಾ ಹಾಗೂ ನಿತ್ಯಾನಂದ ಸ್ವಾಮಿ ನಡುವಿನ ರಿಲೇಷನ್‌ಶಿಪ್(Relationship) ಏನು ಅನ್ನೋದು ಗೊತ್ತಿಲ್ಲ. ಆದರೆ ಆ ಫೋಟೊಗಳನ್ನು ನೋಡಿದರೆ ಏನು ಹೇಳಬೇಕು ಎನ್ನುವುದು ಅರ್ಥವಾಗ್ತಿಲ್ಲ” ಎಂದಿದ್ದಾರೆ.

ನನ್ನು ಮಕ್ಕಳು ಹೀಗೆ ಮನೆ ಬಿಟ್ಟು ನಿತ್ಯಾನಂದನ ಆಶ್ರಮ ಸೇರಿದ್ದು ನೋಡಿ ಒಮ್ಮೆ ಅಲ್ಲಿಗೆ ಹೋಗಿ ಗಲಾಟೆ ಮಾಡಿದ್ದೆ. ನನ್ನ ಮಕ್ಕಳು ಇಲ್ಲಿ ಯಾಕೆ ಇದ್ದಾರೆ? ಅವರನ್ನು ಕಳುಹಿಸಿ ಕೊಡು ಎಂದು ಕೇಳಿದ್ದೆ. ಅದಕ್ಕೆ ಆತನ ಅವರು ಬಂದರೆ ಕರೆದುಕೊಂಡು ಹೋಗು ಎಂದ. ಕರೆದರೆ ಅವರು ಬರಲಿಲ್ಲ. ನನ್ನ ಇಬ್ಬರು ಹೆಣ್ಣು ಮಕ್ಕಳು ಇವತ್ತಿಗೂ ಆತನೊಟ್ಟಿಗೆ ಇದ್ದಾರೆ. ಇಂದಿಗೂ ನನ್ನ ಆ ಇಬ್ಬರೂ ಮಕ್ಕಳು ಕರೆ ಮಾಡಲಿಲ್ಲ. ನಮ್ಮ 3ನೇ ಮಗಳು ನನ್ನನ್ನೂ ನೋಡಿಕೊಳ್ತಿದ್ದಾರೆ. ಇಬ್ಬರು ಮಕ್ಕಳು ನೆನಪಿನಲ್ಲೇ ನನ್ನ ಪತ್ನಿ ಪ್ರಾಣ ಬಿಟ್ಟರು ಎಂದು ಭಾವುಕರಾಗಿದ್ದಾರೆ.

ಅಂದಹಾಗೆ ಅಶೋಕ್‌ ಕುಮಾರ್ ಒಂದ್ಕಾಲದಲ್ಲಿ ದಕ್ಷಿಣ ಭಾರತದ ಸೂಪರ್ ಸ್ಟಾರ್‌ಗಳ(Super star) ಜೊತೆ ಬಣ್ಣ ಹಚ್ಚಿ ನಟಿಸಿದ್ದರು. ಆರಡಿ ಎರಡು ಇಂಚು ಎತ್ತರದ ಸ್ಪುರದ್ರೂಪಿ ನಟ ಸರಿಯಾದ ಅವಕಾಶಗಳು ಸಿಗದೇ ಚಿತ್ರರಂಗದಿಂದ ದೂರಾಗುವಂತೆ ಆಯಿತು. ನಂತರ ಪ್ರೊಡಕ್ಷನ್ ಮ್ಯಾನೇಜರ್‌ ಆಗಿ ಕೆಲ ಸಿನಿಮಾಗಳಿಗೆ ಕೆಲಸ ಮಾಡಿದ್ದಾರೆ. ಪೋಷಕ ನಟನಾಗಿ, ವಿಲನ್ ಆಗಿ ಒಂದಷ್ಟು ಸಿನಿಮಾಗಳಲ್ಲಿ ಅಶೋಕ್ ಕುಮಾರ್ ನಟಿಸಿದ್ದಾರೆ. ‘ಬುದ್ಧಿಮಂತಲು’, ‘ಅಂದಾಲ ರಾಮುಡು’ ಹಾಗೂ ‘ಗುರುವಿನ ಮಿಂಚಿನ ಶಿಷ್ಯಲು’ ಸೇರಿದಂತೆ ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

ಇದನ್ನೂ ಓದಿ: Mumbai : ತಾಯಿಯ ಕಷ್ಟ ಕಂಡು, ಏಕಾಂಗಿಯಾಗಿ ಬಾವಿ ಕೊರೆದು ನೀರು ತಂದ 14 ವರ್ಷದ ಮಗ! ಈತ ಮಗನೋ.. ಇಲ್ಲ ಭಗೀರಥನೋ..?

Leave A Reply