South Actress Photo: ಸಿಂಪಲ್ ಸೀರೆಯುಟ್ಟಿರುವ ಈ ನಟಿಗೆ ಅಂದು ತಿನ್ನೋಕೂ ದುಡ್ಡಿರಲಿಲ್ಲ ; ಈಗ ಸ್ಟಾರ್ ನಟಿಯಾಗಿ ಸಖತ್ ಫೇಮಸ್!!

Famous South Actress Old Photo

South Actress photo: ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ನಟ, ನಟಿಯರ ಬಾಲ್ಯದ ಫೋಟೋಗಳು ವೈರಲ್ ಆಗುತ್ತಿದೆ. ಈ ಹಿಂದೆ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ (Virat Kohli) ಬಾಲ್ಯದ ಫೋಟೋ (Virat Kohli childhood photo) ವೈರಲ್ ಆಗಿತ್ತು. ಹಾಗೆಯೇ ನಾಗಿಣಿ ಸೀರಿಯಲ್ ನಟಿ ನಮೃತಾ ಗೌಡ (Namratha Gowda), ಕರಾವಳಿಯ ಚೆಲುವೆ ನಟಿ ಪೂಜಾ ಹೆಗ್ಡೆಯ (Pooja Hegde) ಬಾಲ್ಯದ ಫೋಟೋ ವೈರಲ್ ಆಗಿತ್ತು. ಇದೀಗ ಖ್ಯಾತ ಸ್ಟಾರ್ ನಟಿಯ ಹಳೆಯ ದಿನಗಳ ಫೋಟೋ (South Actress photo) ವೈರಲ್ ಆಗಿದೆ. ಯಾರು ಗೊತ್ತಾ? ಗೆಸ್ ಮಾಡಿ!!!.

 

ಈ ಫೋಟೋದಲ್ಲಿ ಕಾಣಿಸುವ ಸಿಂಪಲ್ ಆಗಿ ಪಿಂಕ್ ಬಣ್ಣದ, ನೀಲಿ ಬಣ್ಣದ ಬಾರ್ಡರ್​ನ ಸೀರೆ ಉಟ್ಟಿರುವ ಸುಂದರ ಯುವತಿ ಇಂದು ಭಾರತೀಯ ಚಿತ್ರರಂಗದ ಸ್ಟಾರ್ ನಟಿ. ಸಾಕಷ್ಟು ಹಿಟ್ ಸಿನಿಮಾಗಳನ್ನು ನೀಡಿ, ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಹೊಂದಿದ್ದಾರೆ. ಯಾರು ಗೊತ್ತಾಯ್ತಾ?? ಅವರೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಅತ್ಯಂತ ಬೇಡಿಕೆಯಲ್ಲಿರುವ ನಟಿ ಸಮಂತಾ ರುತ್ ಪ್ರಭು (Samantha Ruth Prabhu).

 

South Actress Photo
Source: ABP news

ಇದೀಗ ನಟಿ ಸಮಂತಾ ಅವರ ಹಳೆಯ ದಿನಗಳ ಫೋಟೋ ವೈರಲ್ ಆಗಿದೆ. ಈಗ ಚಿತ್ರರಂಗದಲ್ಲಿ ಸಂಚಲನ ಮೂಡಿಸಿರುವ ಸ್ಟಾರ್ ನಟಿ
ಅಂದು ಹೊತ್ತಿನ ಊಟಕ್ಕೂ ಪರದಾಡಿದ್ದರಂತೆ, ಈಕೆಗೆ ತಿನ್ನೋಕು ದುಡ್ಡಿರಲಿಲ್ಲವಂತೆ. ಆರ್ಥಿಕ ಸಮಸ್ಯೆ ಇದ್ದರೂ ಪೋಷಕರ ಮಾತಿನಂತೆ ಓದುವುದರಲ್ಲಿ ಮುಂದಿದ್ದರು.

ಸಮಂತಾ ರುತ್ ಪ್ರಭು ಆ ಸಂದರ್ಭದಲ್ಲಿ ಮನೆಗೆ ನೆರವಾಗಲು ಸೇಲ್ಸ್ ಗರ್ಲ್ ಆಗಿಯೂ ಕೆಲಸ ಮಾಡಿದ್ದರು. ಸಮಂತಾಗೆ ಮಾಡೆಲಿಂಗ್​ನಲ್ಲಿಯೂ ವಿಪರೀತ ಆಸಕ್ತಿ ಇತ್ತು. ಕಲಿಕೆಯ ಜೊತೆ ಜೊತೆಗೂ ನಟಿ ಮನೋರಂಜನಾ ಲೋಕಕ್ಕೆ ಕಾಲಿಟ್ಟು ತಮ್ಮ ಹೊಸ ಪ್ರಯಾಣ ಶುರು ಮಾಡಿದರು.

ಸಮಂತಾ ಈ ಹಿಂದೆ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದು, ಇದೀಗ ಚೇತರಿಸಿಕೊಂಡು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ನಟಿಯ ಈ ಹಿಂದಿನ ಸಿನಿಮಾ ಯಶೋದಾ (yashodha) ಹಿಟ್ ಆದರೂ ಶಾಕುಂತಲಂ (shakuntalam) ಫ್ಲಾಪ್ ಆಯಿತು. ಇದೀಗ ನಟ ವರುಣ್ ಧವನ್ (Varun dhavan) ಜೊತೆ ವೆಬ್ ಸೀರೀಸ್​ ಸಿಟಾಡೆಲ್ ಹಿಂದಿ ರಿಮೇಕ್​ನಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ವಿಜಯ ದೇವರಕೊಂಡ (Vijay devarakonda) ಅಭಿನಯದ ಖುಷಿ ಸಿನಿಮಾಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಜೀವನದಲ್ಲಿ ಅನೇಕ ಏಳುಬೀಳುಗಳನ್ನು ಕಂಡಿರುವ ಸಮಂತಾ, ಸದ್ಯ ಟಾಲಿವುಡ್ ಸ್ಟಾರ್ ಹೀರೋಯಿನ್ ಆಗಿ ಮಿಂಚುತ್ತಿದ್ದಾರೆ.

 

ಇದನ್ನು ಓದಿ: Dakshina Kannada: ದ:ಕ ಜಿಲ್ಲೆಯಲ್ಲಿ ನಿಲ್ಲಲಿದ್ಯಾ ಖಾಸಗಿ ಬಸ್ ಓಡಾಟ!? ಗುಪ್ತಚರ ಮಾಹಿತಿ;ಬಸ್ ನಲ್ಲಿ ಹೀಗೂ ಆಗ್ತಿದ್ಯಾ!? 

Leave A Reply

Your email address will not be published.