Post Office: ಅಂಚೆ ಕಚೇರಿಯಲ್ಲಿ 2000 ರೂ. ನೋಟು ಡೆಪಾಸಿಟ್/ ಬದಲಾವಣೆ ಮಾಡಬಹುದೇ? ಇಲ್ಲಿದೆ ನೋಡಿ ಮಾಹಿತಿ

Can 2000 rs note be exchanged at post office

Post Office: 2000 ರೂ. ಮುಖಬೆಲೆಯ ನೋಟುಗಳನ್ನು (2000rps Notes) ಭಾರತೀಯ ರಿಸರ್ವ್ ಬ್ಯಾಂಕ್ (Reserve bank) ಚಲಾವಣೆಯಿಂದ ಹಿಂಪಡೆದುಕೊಂಡಿದೆ. ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ಸೆಪ್ಟೆಂಬರ್ (September) 30ರವರೆಗೆ ಅವಕಾಶ ನೀಡಲಾಗಿದ್ದು, ಬ್ಯಾಂಕುಗಳಲ್ಲಿ 2000 ರೂ. ನೋಟುಗಳ ಬದಲಾವಣೆ ಮಾಡಿಕೊಳ್ಳಬಹುದಾಗಿದೆ. ಆದರೆ, ಅಂಚೆ ಕಚೇರಿಯಲ್ಲಿ (Post Office) 2000 ರೂ. ನೋಟು ಡೆಪಾಸಿಟ್/ ಬದಲಾವಣೆ ಮಾಡಬಹುದೇ? ಇದರ ಮಾಹಿತಿ ಇಲ್ಲಿದೆ.

ಕಳೆದ ಬಾರಿ 500, 1000 ರೂಪಾಯಿಯ ನೋಟನ್ನು ಬ್ಯಾನ್ (note ban) ಮಾಡಿದಾಗ ಆ ನೋಟುಗಳನ್ನು ಅಂಚೆ ಕಚೇರಿಯಲ್ಲೂ ಬದಲಾವಣೆ ಮಾಡಲಾಗುತ್ತಿತ್ತು. ಆದರೆ ಈ ಬಾರಿ ಬ್ಯಾನ್ ಮಾಡಲಾದ 2000 ರೂಪಾಯಿ ನೋಟುಗಳನ್ನು ಅಂಚೆ ಕಚೇರಿಯಲ್ಲಿ ಬದಲಾವಣೆ ಮಾಡುವ ಬಗ್ಗೆ ಯಾವುದೇ ವಿಚಾರವನ್ನು ಆರ್‌ಬಿಐ ಉಲ್ಲೇಖಿಸಿಲ್ಲ.

2000 ರೂಪಾಯಿಯ ನೋಟುಗಳನ್ನು ಅಂಚೆ ಕಚೇರಿಯಲ್ಲಿ ಡೆಪಾಸಿಟ್ ಮಾಡುವುದು ಒಂದು ಆಯ್ಕೆಯಾಗಿದೆ. ಆದರೆ ಅಂಚೆ ಕಚೇರಿಯಲ್ಲಿ 2000 ರೂಪಾಯಿ ನೋಟನ್ನು ಡೆಪಾಸಿಟ್ ಮಾಡಲು ಕೆವೈಸಿ ಪರಿಶೀಲಿಸಿದ ಖಾತೆಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಇನ್ನು ಒಟ್ಟಾಗಿ ಎಷ್ಟು ಹಣ ಡೆಪಾಸಿಟ್ ಮಾಡಬಹುದು ಎಂಬ ಗರಿಷ್ಠ ಮಿತಿಯನ್ನು ಆರ್‌ಬಿಐ ನೀಡಿಲ್ಲ. ಅಧಿಕ ಮೊತ್ತವನ್ನು ಡೆಪಾಸಿಟ್ ಮಾಡುವುದಾದರೆ ಕೆವೈಸಿ ಬೇಕಿದೆ.

“ನಾವು ಪ್ರಕ್ರಿಯೆಯನ್ನು ನಡೆಸುತ್ತಿದ್ದೇವೆ. ನೀವು 50 ಸಾವಿರ ರೂಪಾಯಿಗಿಂತ ಅಧಿಕ ನಗದನ್ನು ಡೆಪಾಸಿಟ್ ಮಾಡುವುದಾದರೆ ಆದಾಯ ತೆರಿಗೆ ನಿಯಮ ಅನ್ವಯ ಮಾಡಲಾಗುತ್ತದೆ. ಅಧಿಕ ಮೊತ್ತ ಡೆಪಾಸಿಟ್ ಮಾಡುವಾಗ ನೀವು ಪ್ಯಾನ್ ಕಾರ್ಡ್ (pan card) ಸಲ್ಲಿಸಬೇಕಾಗುತ್ತದೆ. ಒಂದು ಖಾತೆಗೆ 50 ಸಾವಿರ ರೂಪಾಯಿಗಿಂತ ಕಡಿಮೆ ಮೊತ್ತದ ಡೆಪಾಸಿಟ್‌ಗೆ ಯಾವುದೇ ದಾಖಲೆಗಳು ಬೇಕಾಗಿಲ್ಲ” ಎಂದು ಆರ್‌ಬಿಐ ಗವರ್ನರ್ ತಿಳಿಸಿದ್ದಾರೆ‌.

 

ಇದನ್ನು ಓದಿ: ದಕ್ಷಿಣ ಕನ್ನಡದ ಮಾಣಿಯಲ್ಲಿ ಬಜರಂಗದಳ ಬಿಜೆಪಿ ಕಾರ್ಯಕರ್ತರ ಮೇಲೆ ತಳವಾರ್ ದಾಳಿ 

Leave A Reply

Your email address will not be published.