

Buffaloes: ಎಮ್ಮೆಗಳ (Buffaloes) ಹಿಂಡೊಂದು ಮನೆಯೊಂದರ ಆವರಣಕ್ಕೆ ನುಗ್ಗಿದ್ದಲ್ಲದೆ, ದಂಪತಿಗಳು ನಿರ್ಮಿಸಿದ್ದ ಹೊಸ ಈಜುಕೊಳದ ನೀರಿನಲ್ಲಿ ಸಕತ್ ಆಗಿ ಸ್ವಿಮ್ ಮಾಡಿ ಮಿಂದೇಳಿವೆ. ಇದರ ಪರಿಣಾಮ ಮನೆಯವರಿಗೆ ಭಾರೀ ಪ್ರಮಾಣದ ನಷ್ಟವಾಗಿದೆ. ಈಗ ಇದಕ್ಕೆ ಸಂಬಂಧಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.
ಹತ್ತಿರದ ತೋಟವೊಂದರಿಂದ ಎಸ್ಕೇಪ್ ಆದ ಅಲ್ಲಿ 18 ಎಮ್ಮೆಗಳು ಆಗಿ ಎಸ್ಸೆಕ್ಸ್ ಸ್ವಿಮ್ಮಿಂಗ್ ಫೂಲ್ ಗೆ ನುಗ್ಗಿವೆ ಎಂದು ಬಿಬಿಸಿ ವರದಿ ಮಾಡಿದೆ. ಇದಕ್ಕೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಲಭ್ಯವಿದ್ದು, ಪ್ರಾಣಿಗಳು ಈಜುಕೊಳದ ಒಳಗೆ ಬೀಳುತ್ತಿರುವ ದೃಶ್ಯವಿದೆ. ಅಲ್ಲಿ ಇಳಿದ ಎಮ್ಮೆಗಳ ಸ್ನಾನ ತುಂಬಾ ಹಾನಿಗೆ ಕಾರಣವಾಗಿದೆ. ಒಂದು ಅಂದಾಜಿನ ಪ್ರಕಾರ 25 ಸಾವಿರ ಪೌಂಡ್ಸ್, ಭಾರತೀಯ ದುಡ್ಡಿನ ಪ್ರಕಾರ ಬರೋಬ್ಬರಿ 25 ಲಕ್ಷ ರೂಪಾಯಿ ನಷ್ಟವಾಗಿದೆ.
ಆ ದಂಪತಿ ಈಜು ಕೊಳ ನಿರ್ಮಾಣಕ್ಕೆ 70 ಲಕ್ಷ ರೂಪಾಯಿ ಖರ್ಚುಮಾಡಿ ವಿಹಾರ ಕೊಳ ನಿರ್ಮಿಸಿದ್ದರು. ಈ ಬಗ್ಗೆ ಮಾತನಾಡಿರುವ ನಿವೃತ್ತ ದಂಪತಿ ಆ್ಯಂಡಿ ಮತ್ತು ಲಿನೆಟ್ ಸ್ಮಿತ್, 70 ಸಾವಿರ ಪೌಂಡ್ಸ್ (ಭಾರತೀಯ ಕರೆನ್ಸಿ ಪ್ರಕಾರ 70 ಲಕ್ಷ ರೂ.) ವೆಚ್ಚದಿಂದ ಈಜುಕೊಳ ನಿರ್ಮಾಣ ಮಾಡಲಾಗಿದೆ. 18 ಎಮ್ಮೆಗಳಲ್ಲಿ 8 ಎಮ್ಮೆಗಳು ಈಜುಕೊಳ್ಳದಲ್ಲಿ ಬಿದ್ದು ಎದ್ದು ಮಿಂದಿವೆ. ಅಲ್ಲದೆ, ಎಸ್ಕೇಪ್ ಆಗುವ ಭಯದಲ್ಲಿ ಬೇಲಿ ಮತ್ತು ಹೂವಿನ ಹಾಸಿಗೆಯನ್ನು ಹಾಳುಗೆಡವಿವೆ.
” ನನ್ನ ಪತ್ನಿ ಬೆಳಿಗ್ಗೆ ಚಹಾ ಮಾಡಲು ಬಂದಾಗ, ಅವಳು ಅಡಿಗೆ ಕೋಣೆಯ ಕಿಟಕಿಯಿಂದ ಹೊರಗೆ ನೋಡಿದಳು. ಈ ವೇಳೆ ಈಜುಕೊಳದಲ್ಲಿ ಎಂಟು ಎಮ್ಮೆಗಳನ್ನು ಕಂಡಳು. ಅವಳು 999 ಸಹಾಯವಾಣಿಗೆ ಕರೆ ಮಾಡಿದಾಗ ಹುಸಿ ಕರೆಗಳನ್ನು ಸ್ವೀಕರಿಸುವುದಿಲ್ಲ ಎಂದು ಅಗ್ನಿಶಾಮಕ ದಳವು ಆರಂಭದಲ್ಲಿ ನಿರ್ಲಕ್ಷಿಸಿತು. ಬಳಿಕ ನಿಜವೆಂದು ಅವರ ಮನವೊಲಿಸಲು ಹರಸಾಹಸ ಪಡಬೇಕಾಯಿತು. ಅಗ್ನಿಶಾಮಕ ಸಿಬ್ಬಂದಿ ಬಂದಾಗ, ಅವರ ಹೈ-ವಿಸ್ ಜಾಕೆಟ್‌ಗಳಿಂದ ಬೆಚ್ಚಿಬಿದ್ದ ಎಮ್ಮೆಗಳಲ್ಲೊಂದು ನೇರವಾಗಿ ಅವರತ್ತವೇ ನುಗ್ಗಿತು.” ಆಂಡಿ ಸ್ಮಿತ್ ಗಾರ್ಡಿಯನ್ ನ್ಯೂಸ್ಗೆ ತಿಳಿಸಿದ್ದಾರೆ.
ಇನ್ನು ಈಜುಕೊಳಕ್ಕೆ ಇನ್ಶೂರೆನ್ಸ್ ಇತ್ತಂತೆ. ಆದುದರಿಂದ ಹಾನಿ ಸಂಬಂಧ ಇನ್ಸುರೆನ್ಸ್ ಈಗ ಕ್ಲೈಮ್ ಆಗಿದೆ. ಆದುದರಿಂದ ಮನೆಯ ಯಜಮಾನರಿಗೆ ಯಾವುದೇ ನಷ್ಟ ಆಗಿಲ್ಲ. ಆದರೆ ಎಮ್ಮೆಗಳು ಇನ್ಶುರೆನ್ಸ್ ಕಂಪನಿಗೆ 25 ಲಕ್ಷದ ಬಿಲ್ ಗುಮ್ಮಿ ಎದ್ದು ಹೋಗಿವೆ.
ಇದನ್ನೂ ಓದಿ: ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಶಾಸಕ ವಿವಾದಾತ್ಮಕ ಹೇಳಿಕೆ : ಹರೀಶ್ ಪೂಂಜಾ ವಿರುದ್ಧ ದೂರು ದಾಖಲು













