Rain updates: ರಾಜ್ಯದಲ್ಲಿ ಅಕಾಲಿಕ ಮಳೆಗೆ ಅವಾಂತರ , ದಿಢೀರ್‌ ರಸ್ತೆ ಕುಸಿತ, ಬೆಚ್ಚಿಬಿದ್ದ ಜನರು

Rain updates Sudden road collapse due to rain in the state

Rain updates: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಳೆ ಅವಾಂತರವೇ ಸೃಷ್ಟಿಯಾಗಿದ್ದು, ಮೈಕೋಲೇಔಟ್‌ ಪೊಲೀಸ್‌ ಠಾಣಾ ಹಿಂಭಾಗದಲ್ಲಿ ಮಳೆಗೆ (Rain updates) ರಸ್ತೆ ದಿಢೀರ್‌ ಕುಸಿತಗೊಂಡಿದೆ.

ಮೈಕೋಲೇಔಟ್‌ ಪೊಲೀಸ್‌ ಠಾಣಾ ಹಿಂಭಾಗದಲ್ಲಿ ದಿಢೀರ್‌ ರಸ್ತೆ ಕುಸಿದಿರೋದ್ರಿಂದ ಸ್ಥಳೀಯ ಜನರು ಬೆಚ್ಚಿಬಿದ್ದಿದ್ದಾರೆ. ಕಳೆದ ಒಂದು ತಿಂಗಳಷ್ಟೇ ಬಿಬಿಎಂಪಿ ರಸ್ತೆಯನ್ನು ನಿರ್ಮಾಣ ಮಾಡಿದ್ದರು. ಆದ್ರೆ ಬಿಬಿಎಂಪಿ ಅವರು ಕಳಪೆ ಕಾಮಾಗಾರಿಯೇ ರಸ್ತೆ ಕುಸಿತಕ್ಕೆ ಕಾರಣವಾಗಿದೆ. ಇಂತಹ ಕೆಟ್ಟ ರಸ್ತೆಯಲ್ಲಿ ಓಡಾಡೋದು ಹೇಗೆ ಭಯ ಆಗುತ್ತಿದೆ ಎಂದು ಸ್ಥಳೀಯರ ಕಿಡಿಕಾರುತ್ತಿದ್ದಾರೆ ಅಲ್ಲದೇ ಬಿಬಿಎಪಿ ನಿರ್ಲಕ್ಷ್ಯಕ್ಕೆ ಕಿಡಿಕಾರಿದ್ದಾರೆ.

ಮಳೆಗೆ ಬೆಂಗಳೂರು ಮಾತ್ರದಲ್ಲ ರಾಜ್ಯ ಹಲವು ಜಿಲ್ಲೆಗಳಲ್ಲಿ ಸಮಸ್ಯೆ ಎದುರಾಗಿದೆ. ಬಳ್ಳಾರಿ ಸಿರಗುಪ್ಪದಲ್ಲಿ ರಾತ್ರಿ ಸುರಿದ ಅಕಾಲಿಕ ಮಳೆಗೆ ಮನೆಯ ಗೋಡೆ ಕುಸಿದು ವ್ತಕ್ತಿಯೊಬ್ಬರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ , ಇನ್ನೂ ಉತ್ತರ ಕನ್ನಡ ಜಿಲ್ಲೆಯ ಅಕೋಲಾ ಸಮೀಪದ ಸಮುದ್ರದಲ್ಲಿ ಬಿರುಗಾಳಿಗೆ ಮೀನುಗಾರಿಕೆಯ ಬೋಟ್‌ನ ಫೈಬರ್‌ ಕಿತ್ತು ಹೋಗಿ ಬೋಟ್‌ ,ಮುಳುಗಡೆಯಾಗಿದ್ದು ಬೋಟ್‌ನಲ್ಲಿದ್ದ 12 ಜನರನ್ನು ರಕ್ಷಣೆ ಮಾಡಲಾಗಿದೆ.

 

ಇದನ್ನು ಓದಿ: 1000 Rs Notes: 2016ರಲ್ಲಿ ಬ್ಯಾನ್ ಆಗಿದ್ದ 1000ರೂ. ನೋಟು ಮತ್ತೆ ಬಿಡುಗಡೆ ಆಗುತ್ತಾ? ಈ ಬಗ್ಗೆ ಆರ್​ಬಿಐ ಗವರ್ನರ್ ಏನಂದ್ರು? 

Leave A Reply

Your email address will not be published.