Monika Shergill: ಭಾರತದಲ್ಲಿ ನೆಟ್ಫ್ಲಿಕ್ಸ್ನ ಯಶಸ್ವಿ ಗೆ ಇವರೇ ನೋಡಿ ಕಾರಣ! ಇಲ್ಲಿದೆ ಮಾಹಿತಿ
Meet Monika shergill meerut born content head of Netflix india
Monika Shergill: ಭಾರತವು ಅಧಿಕೃತವಾಗಿ ನೆಟ್ಫ್ಲಿಕ್ಸ್ನ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಮಾರುಕಟ್ಟೆಯಾಗಿದ್ದು, ಅತ್ಯಧಿಕ ನಿವ್ವಳ ಚಂದಾದಾರರ ಸೇರ್ಪಡೆಗಳು ಮತ್ತು 2022 ರಲ್ಲಿ ಆದಾಯದಲ್ಲಿ ಶೇಕಡಾ 25 ರಷ್ಟು ಏರಿಕೆಯಾಗಿದೆ. ಜಾಗತಿಕವಾಗಿ ಈ ಕಂಪನಿಯ ಆದಾಯವು 2.6 ಲಕ್ಷ ಕೋಟಿಯನ್ನು ಮೀರಿದ್ದು, 2022ರಲ್ಲಿ ಅತಿ ಹೆಚ್ಚು ಪಾವತಿ ಚಂದಾದಾರರನ್ನು ಸೇರ್ಪಡೆಗೊಳಿಸಲಾಗಿದೆ.
ಈ ಎಲ್ಲ ಬೆಳವಣಿಗೆಗಳ ಹಿಂದಿನ ಶಕ್ತಿಯೇ ಕಾಂಟೆಂಟ್ ವಿಭಾಗದ ಮುಖ್ಯಸ್ಥೆ ಮೋನಿಕಾ ಶೆರ್ಗಿಲ್ (Monika Shergill) . ಹೌದು, ಮೋನಿಕಾ ಶೆರ್ಗಿಲ್ ಅವರು ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ಬ್ಲ್ಯಾಕ್ ಅಂಡ್ ವೈಟ್ ಟೆಲಿವಿಷನ್ ಯುಗದಲ್ಲಿ ಹುಟ್ಟಿದ್ದು, ಆಗ ವರ್ಲ್ಡ್ ಡಿಸ್ ವೀಕ್ ಅನ್ನು ವೀಕ್ಷಿಸುತ್ತಿದ್ದರು . ಅದು ಅವರ ಇಷ್ಟದ ಕಾರ್ಯಕ್ರವಾಗಿದ್ದು, ಅವರಿಗೆ ಹೊಸ ಸಾಧನೆ ಮಾಡುವಂತೆ ಪ್ರೇರಣೆ ಮಾಡಿತ್ತು.
ಮೋನಿಕಾ ಅವರು ಮೀರತ್ನಲ್ಲಿ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ನಂತರ ಹೊಸದಿಲ್ಲಿಯ ಮಿರಂದಾ ಹೌಸ್ನಲ್ಲಿ ಬಿಎ ಪದವಿ ಮಾಡಿದರು. ಬಳಿಕ ಅವರು ಪತ್ರಿಕೋದ್ಯಮದಲ್ಲಿ ಕೋರ್ಸ್ಗಳನ್ನು ಮಾಡಿದ್ದಾರೆ. ಅವರು ಮುಂದೆ ಕರೆಸ್ಪಾಂಡೆಂಟ್ ಮತ್ತು ಪ್ರೊಡ್ಯೂಸರ್ ಆಗಿ ವೃತ್ತಿ ಬದುಕನ್ನು ಪ್ರಾರಂಭಿಸಿದರು. 1990ರಲ್ಲಿ ಡಾಕ್ಯುಮೆಂಟರಿಗಳನ್ನು ಮಾಡುತ್ತಿದ್ದರು.
ಮೋನಿಕಾ ಅವರು ನೆಟ್ಪ್ಲಿಕ್ಸ್ ಸೇರುವ ಮೊದಲು ವಯೋಕಾಮ್ 18 ಡಿಜಿಟಲ್ನಲ್ಲಿ ಕಾಂಟೆಂಟ್ ಹೆಡ್ ಆಗಿದ್ದರು. ಅಷ್ಟೇ ಅಲ್ಲ ಮೋನಿಕಾ ಅವರು ಸ್ಟಾರ್ ಇಂಡಿಯಾಗೆ ಏಳು ವರ್ಷ 8 ತಿಂಗಳು ಕ್ರಿಯೇಟಿವ್ ಕನ್ಸಲ್ವೆಂಟ್ ಆಗಿ ಕೆಲಸ ಮಾಡಿದರು. ಜೊತೆಗೆ ಸೋನಿ ಎಂಟರ್ಟೈನ್ಮೆಂಟ್ ಟೆಲಿವಿಷನ್ನಲ್ಲಿಯೂ ಕ್ರಿಯೇಟಿವ್ ಡೈರೆಕ್ಟರ್ ಆಗಿ ಸೇವೆ ಸಲ್ಲಿಸಿದ್ದರು.
ಭಾರತದ ಕಾಂಟೆಂಟ್ಗಳಾದ ಮೋನಿಕಾ, ಹೋ ಮೈ ಡಾರ್ಲಿಂಗ್, ಜಂತರ:ಸೀಸನ್ 2, ಆರ್ಆರ್ಆರ್ ಯಶಸ್ಸನ್ನು ತಂದು ಕೊಟ್ಟು ಅಚ್ಚರಿಯನ್ನೇ ಸೃಷ್ಟಿಸಿತ್ತು. ಆದರೆ ಈ ಯಶಸ್ವಿ ಪಯಣವು ಅಷ್ಟೊಂದು ಸುಲಭವಾಗಿರಲಿಲ್ಲ.
ಮೋನಿಕಾ ಅವರ ಜವಾಬ್ದಾರಿಯನ್ನು ತೆಗೆದುಕೊಂಡಾಗ ನೆಟ್ ಫ್ಲಿಕ್ಸ್ ಇಂಡಿಯಾವು ಸ್ಕರ್ಡ್ ಗೇಮ್ಸ್ ಹಾಗೂ ದಿಲ್ಲಿ ಕ್ರೈಮ್ ಎಂಬ ಎರಡು ಸೀರಿಸ್ಗೆ ಮಾತ್ರ ಫೇಮಸ್ ಆಗುತ್ತಿದೆ. ಹೀಗಾಗಿ, ಅವರು ಉತ್ತಮ ತಂಡವನ್ನು ನಿರ್ಮಿಸಿದರು ಗಮನಹರಿಸಿದ್ದರು. ಅವರು ಸರಿಯಾದ ಸ್ಟೋರಿ ಟ್ರೇಲರ್ ಗಳನ್ನು ಸೇರಿಸಿಕೊಂಡರು.
ಮೋನಿಕಾ ಅವರು ನೆಟ್ ಫ್ಲಿಕ್ಸ್ ನಲ್ಲಿ ಬಹಳ ಕಡಿಮೆ ಚಂದಾದಾರಿಕೆ ಪ್ಲಾನ್ ಮತ್ತು ಭಾರೀ ರಿಯಾಯಿತಿಗಳನ್ನು ಪ್ರಕಟಿಸಿದ ಬಳಕೆದಾರರನ್ನು ಆಕರ್ಷಿಸುವ ಬದಲು ಬಹಳ ಭಿನ್ನವಾಗಿ ಯೋಚಿಸಿದರು. ಈ ರೀತಿಯ ತಂತ್ರಗಾರಿಕೆಯನ್ನು ಬಳಸುವುದರಿಂದ ಬಳಕೆದಾರರು ಸುಧೀರ್ಘ ಅವಧಿಯು ಮುಂದುವರಿಯುವುದಿಲ್ಲ. ಕಂಪನಿಯು ನೆಟ್ಫಿಕ್ಸ್ ಮೌಲ್ಯಕ್ಕೆ ಅವಲಂಬಿತವಾಗಿ ಸುಸ್ಥಿರ ಬೆಳವಣಿಗೆಯನ್ನು ಸಾಧಿಸಬೇಕು ಎಂದು ಅವರ ಆಲೋಚನೆ- ಯೋಜನೆಯಾಗಿದೆ.
ಕಂಪನಿಯನ್ನು ಹಲವು ನಗರಗಳಲ್ಲಿ ವಿಸ್ತರಿಸಲು ಬಯಸಿದರು. ಅಂಥಹ ನಗರಗಳಲ್ಲಿ ಪ್ರಚಾರಗಳನ್ನು ಪ್ರಾರಂಭಿಸಿದರು. ಮಾರುಕಟ್ಟೆಯನ್ನು ಅವಲಂಬಿಸಿಕೊಂಡು ಸಿನಿಮಾಗಳನ್ನು ಖರೀದಿಸಲು ನಿರ್ಧರಿಸಿದರು. ಹೀಗೆ ನೆಟ್ ಫ್ಲಿಕ್ಸ್ ನಲ್ಲಿ ತಾವು ಯಶಸ್ವಿ ಪಯಣ ಸಾಧಿಸಿದ್ದಾರೆ.
ಇದನ್ನೂ ಓದಿ: marriage: ಮುಸ್ಲಿಂ ಯುವಕನೊಂದಿಗೆ ಮಗಳ ಮದುವೆ ಕ್ಯಾನ್ಸಲ್ ಮಾಡಿದ ಬಿಜೆಪಿ ಮುಖಂಡ!ಕಾರಣ ಏನು ಗೊತ್ತೇ?