Karnataka Assembly: ವಿಧಾನಸಭೆಯ ಹಂಗಾಮಿ ಸಭಾಧ್ಯಕ್ಷರಾಗಿ ಆರ್ ವಿ ದೇಶಪಾಂಡೆ ನೇಮಕ! ನಾಳೆಯಿಂದ 3 ದಿನ ಪ್ರಮಾಣವಚನ ಅಧಿವೇಶನ
Three days Karnataka assembly session from may 22
Karnataka Assembly Session :ರಾಜ್ಯ ವಿಧಾನಸಭೆಯ ಹಂಗಾಮಿ ಸ್ಪೀಕರ್(Incharge Speaker) ಆಗಿ ಆರ್.ವಿ ದೇಶಪಾಂಡೆ(R V Deshpande) ನೇಮಕಗೊಂಡಿದ್ದಾರೆ.
ಹೌದು, ಸದನದ ಸಭಾಧ್ಯಕ್ಷರ ಆಯ್ಕೆಯಾಗುವ ವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಲು ಉತ್ತರ ಕನ್ನಡ(Uttara kannada) ಜಿಲ್ಲೆಯ ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಶಾಸಕರಾದ ಆರ್.ವಿ ದೇಶಪಾಂಡೆ ಅವರನ್ನು ಕರ್ನಾಟಕ ವಿಧಾನಸಭೆಯ(Karnataka Assembly session) ಹಂಗಾಮಿ ಸಭಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಸರ್ಕಾರ ಆದೇಶ ಹೊರಡಿಸಿದೆ.
ಈ ಸಂಬಂಧ ಪ್ರಕಟಣೆ ಹೊರಡಿಸಿರುವ ರಾಜ್ಯ ಸರ್ಕಾರ, ಕರ್ನಾಟಕದ ಮಾನ್ಯ ರಾಜ್ಯಪಾಲರು(Governor) ಭಾರತದ ಸಂವಿಧಾನದ ಅನುಚ್ಛೇದ 180(1) ಹಾಗೂ 188ರಲ್ಲಿ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಸದನದಿಂದ ಸಭಾಧ್ಯಕ್ಷರು ಆಯ್ಕೆಯಾಗುವವರೆಗೆ ವಿಧಾನ ಸಭಾಧ್ಯಕ್ಷರ ಕರ್ತವ್ಯವನ್ನು ನಿರ್ವಹಿಸಲು ವಿಧಾನಸಭೆಯ ಸದಸ್ಯರಾದ ಆರ್.ವಿ. ದೇಶಪಾಂಡೆ ಅವರನ್ನು ಅವರನ್ನು ಮೇ 22ರಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ತಿಳಿಸಿದೆ.
ನೂತನ ಶಾಸಕರ(MLA) ಪ್ರಮಾಣವಚನ ಸ್ವೀಕಾರ ಮತ್ತು ಸ್ಪೀಕರ್ ಆಯ್ಕೆ ಸಂಬಂಧ ನಾಳೆಯಿಂದ ಅಂದರೆ ಮೇ 22, ಸೋಮವಾರದಿಂದ ಮೂರು ದಿನಗಳ ಕಾಲ ವಿಧಾನಸಭಾ ಅಧಿವೇಶವನ್ನು ಕರೆಯಲಾಗಿದೆ. ನಿನ್ನೆ ನಡೆದ ಸಚಿವ ಸಂಪುಟದಲ್ಲಿ ಈ ಬಗ್ಗೆ ತೀರ್ಮಾನವಾಗಿದೆ. ಸ್ಪೀಕರ್ ಆಯ್ಕೆಯಾಗುವವರೆಗೆ ಶಾಸಕರ ಪ್ರಮಾಣವಚನ ಬೋಧನೆಯು ಹಂಗಾಮಿ ಸ್ಪೀಕರ್ ನೇತೃತ್ವದಲ್ಲಿ ನಡೆಯಲಿದೆ. ಇದೇ ಅಧಿವೇಶನದಲ್ಲಿ ನೂತನ ಸ್ಪೀಕರ್ ಆಯ್ಕೆ ಪ್ರಕ್ರಿಯೆಯು ಸಹ ನಡೆಯಲಿದೆ. ಮೇ 23ಕ್ಕೆ ಹಿಂದಿನ ವಿಧಾನಸಭೆ ಅಂತಿಮಗೊಳ್ಳಲಿದ್ದು, ಅಷ್ಟರೊಳಗೆ ನೂತನ ಶಾಸಕರ ಪ್ರಮಾಣವಚನ ಪೂರ್ಣಗೊಳ್ಳಬೇಕಿದೆ.
ಅಂದಹಾಗೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮೊದಲು ದೇಶಪಾಂಡೆಯವರೇ ಮುಂದಿನ ಸ್ಪೀಕರ್ ಎಂಬ ಗುಸು ಗುಸು ಕೇಳಿಬರುತ್ತಿತ್ತು. ಇತ್ತೀಚೆಗೆ ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ದೇಶಪಾಂಡೆಯವರು ವಿಧಾನಸಭೆಯ ಸ್ಪೀಕರ್ ಆಗೋ ಅರ್ಹತೆ ನನಗಿಲ್ಲ. ನಾನು ಆ ಸ್ಥಾನಕ್ಕೆ ಯೋಗ್ಯನಲ್ಲ ಎಂದು ಹೇಳುವ ಮೂಲಕ ಪರೋಕ್ಷವಾಗಿ ತಾನು ಸಚಿವ ಸ್ಥಾನದ ಆಕಾಂಕ್ಷಿ ಎಂಬುದನ್ನು ಪರೋಕ್ಷವಾಗಿ ಹೇಳಿದ್ದರು. ಆದರೂ ಕೂಡ ಸಿದ್ದರಾಮಯ್ಯ ಸರ್ಕಾರ ಹಿರಿಯ ನಾಯಕ ದೇಶಪಾಂಡೆಯವರನ್ನೇ ಹಂಗಾಮಿ ಸಭಾಧ್ಯಕ್ಷರನ್ನಾಗಿ ಮಾಡಿದೆ. ಮುಂದಿನ ಅವಧಿಗೂ ಅವರೇ ಮುಂದುವರೆಯುತ್ತಾರೋ ಇಲ್ಲವೋ ಕಾದನೋಡಬೇಕಿದೆ.
ಇದನ್ನೂ ಓದಿ:5 ಗ್ಯಾರಂಟಿ ಎಫೆಕ್ಟ್: ಬಡವರಿಗೆ ಮಾತ್ರ ಗ್ಯಾರಂಟಿ ಎಂದರಿತ ಜನರಿಂದ BPL ಕಾರ್ಡು ಪಡೆಯಲು ನೂಕುನುಗ್ಗಲು !