Nayana motamma: ಮೂಡಿಗೆರೆ ಶಾಸಕಿ ನಯನಾ ಮೋಟಮ್ಮರ ಖಾಸಗಿ ಫೋಟೋಸ್, ವಿಡಿಯೋ ವೈರಲ್! ಏನಂದ್ರು ಗೊತ್ತಾ ನೂತನ ಶಾಸಕಿ!
Nayana Motamma private photos video viral
Nayana Motamma :ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ(Karnataka Assembly election) ಚಿಕ್ಕಮಗಳೂರು(Chikkamaglure) ಜಿಲ್ಲೆಯ ಮೀಸಲು ಕ್ಷೇತ್ರವಾದ ಮೂಡಿಗೆರೆ(Mudigere) ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಗಳಿಸಿ, ಸದ್ಯ ಮೂಡಿಗೆರೆಯ ನೂತನ ಶಾಸಕರಾದ ನಯನಾ ಮೋಟಮ್ಮ(Nayana Motamma) ಅವರ ಖಾಸಗಿ ವಿಡಿಯೋ, ಫೋಟೋಗಳು ವೈರಲ್ ಆಗಿ ಭಾರೀ ವೈರಲ್ ಆಗ್ತಿದ್ದು, ಚರ್ಚೆಗೆ ಕಾರಣವಾಗಿದೆ.
ಹೌದು, ಈ ಬಾರಿ 224 ವಿಧಾನಸಭಾ ಕ್ಷೇತ್ರಗಳ ಪೈಕಿ ಕಾಂಗ್ರೆಸ್ ಬರೋಬ್ಬರಿ 135 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಬಾರಿಯ ವಿಶೇಷತೆ ಎಂದರೆ ಮೊದಲ ಬಾರಿಗೆ ಟಿಕೆಟ್ ಪಡೆದಿದ್ದ ಮಹಿಳಾ ಮಣಿಗಳು ಗೆದ್ದು ಕಮಾಲ್ ಮಾಡಿದ್ದಾರೆ. ಅದರಲ್ಲಿ ನಯನ ಮೋಟಮ್ಮ(Nayana motamma) ಕೂಡ ಒಬ್ಬರು. ನಯನ ಮೋಟಮ್ಮ, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕಿ, ದಲಿತವಾದಿ ಹಾಗೂ ಮಾಜಿ ಸಚಿವೆ ಮೋಟಮ್ಮ(Motamma) ಅವರ ಪುತ್ರಿ. ಕೆಪಿಸಿಸಿ(KPCC) ಅಧ್ಯಕ್ಷ ಡಿಕೆ ಶಿವಕುಮಾರ್(D K Shivkumar) ಅವರ ಆಪ್ತ ಬಣದಲ್ಲಿ ಗುರುತಿಸಿಕೊಂಡಿದ್ದ ನಯನ ಅವರು ಕಾಫಿ ನಾಡು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಭಾರಿ ವಿರೋಧದ ನಡುವೆಯೂ ಕಾಂಗ್ರೆಸ್‌ನಿಂದ ಟಿಕೆಟ್ ಪಡೆದು ಗೆದ್ದು ಬಂದಿದ್ದಾರೆ. ಸದ್ಯ ಇವರ ಕೆಲವು ಖಾಸಗೀ ವಿಚಾರಗಳು ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಇದಕ್ಕೆ ನಯನಾ ಅವರೇ ಸ್ಪಷ್ಟೀಕರಣ ನೀಡಿದ್ದಾರೆ.
ಅಂದಹಾಗೆ ನಯನಾ ಅವರೇ ತಾವು ಸ್ವತಃ ತಮ್ಮ ಜಾಲತಾಣಗಳ ಖಾತೆಯಲ್ಲಿ, ತಮ್ಮ ಪ್ರವಾಸ ಹೋದ, ಟ್ರಿಪ್ ಮಾಡಿದ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದರು. ಇದನ್ನೇ ಬಂಡವಾಳವಾಗಿಟ್ಟು ಕೊಂಡ ಕಿಡಿಗೇಡಿಗಳು, ಈ ಅವರ ಫೋಟೋಗಳನ್ನು ಇಟ್ಟುಕೊಂಡು ನಯನಾ ಅವರ ವಿರುದ್ಧ ಅಪಪ್ರಚಾರಕ್ಕೆ ಇಳಿದಿದ್ದಾರೆ. ಸದ್ಯ ಈ ಕುರಿತು ನಯನಾ ಅವರೇ ಟ್ವೀಟ್ ಮಾಡಿ, ವಿಡಿಯೋ ಹಂಚಿಕೊಂಡು ಆ ಕುರಿತು ಸ್ಪಷ್ಟೀಕರಣ ನೀಡಿದ್ದಾರೆ.
43 ವರ್ಷದ ನಯನಾ ಅವರು ತಮ್ಮ ಟ್ವಿಟರ್ನಲ್ಲಿ(Twitter) ವಿಡಿಯೋವೊಂದನ್ನು ಶೇರ್ ಮಾಡಿಕೊಂಡು ವಿರೋಧಿಗಳ ಸೈಬರ್ ದಾಳಿಗೆ ಪ್ರತ್ಯುತ್ತರ ನೀಡಿದ್ದಾರೆ. ನಯನಾ ಮೋಟಮ್ಮ ಅವರ ಖಾಸಗಿ ಫೋಟೋಸ್‌ಗಳನ್ನು ಒಳಗೊಂಡ ವಿಡಿಯೋ ಇದಾಗಿದ್ದು, ‘ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ. ಹೌದು… ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು’ ಎಂದು ಶೀರ್ಷಿಕೆ ನೀಡಿ ನಯನಾ ಮೋಟಮ್ಮ ಮಾಡಿರೋ ಟ್ವಿಟರ್ ಪೋಸ್ಟ್ ಸದ್ಯ ಎಲ್ಲೆಡೆ ವೈರಲ್ ಆಗ್ತಿದೆ.
ಅಲ್ಲದೆ ರಾಜಕಾರಣಿಯಾದ ಮಾತ್ರಕ್ಕೆ ಸಾಮಾನ್ಯವಾಗಿ ಇರಬಾರದಾ? ಮುಖವಾಡ ಹಾಕಿಕೊಂಡು ಯಾಕೆ ಜೀವನ ಮಾಡಬೇಕು? ರಾಜಕಾರಣಿಗಳು ಅಂದರೆ ಅವರು ಕೂಡ ಬೇರೆಯವರ ರೀತಿಯಲ್ಲಿ ಸಾಮಾನ್ಯರು. ನಾನು ಕೆಲವೊಮ್ಮೆ ಗೋವಾಗೆ ಹೋಗುತ್ತೇನೆ. ಅಲ್ಲಿ ಸೀರೆ ಉಟ್ಟಿಕೊಳ್ಳಲು ಆಗುತ್ತಾ? ಎನ್ನುವ ಮೂಲಕ ಖಡಕ್ ಆಗಿ ತಿರುಗೇಟು ನೀಡಿದ್ದಾರೆ.
ಅಲ್ಲದೆ ಚುನಾವಣೆಯಲ್ಲಿ ನನ್ನ ವಿರುದ್ಧ ಸೋತವರು ಭ್ರಮನಿರಸನಗೊಂಡು ಸೈಬರ್(Cyber) ದಾಳಿ ಮಾಡಿಸುತ್ತಿದ್ದಾರೆ ಎಂದು ನಯನಾ ಪ್ರತಿಕ್ರಿಯಿಸಿದ್ದಾರೆ. ಇಂತ ದುಷ್ಕೃತ್ಯಗಳಿಂದ ನನ್ನನ್ನು ಮಾನಸಿಕವಾಗಿ ಕುಗ್ಗಿಸಲು ಸಾಧ್ಯವಿಲ್ಲ ಎಂದಿರುವ ನಯನಾ(Nayana), ಈ ಮೂರ್ಖರಿಗೆ ರಾಜಕೀಯ ಜೀವನ ಮತ್ತು ಖಾಸಗಿ ಜೀವನದ ನಡುವಿನ ವ್ಯತ್ಯಾಸ ತಿಳಿದಿಲ್ಲ ಎಂದು ವಿರೋಧಿಗಳಿಗೆ ತಿರುಗೇಟು ನೀಡಿದ್ದಾರೆ. ನಯನಾ ಅವರ ಈ ನೇರ ನಡೆ ಮತ್ತು ಧೈರ್ಯ ಅವರ ಅಭಿಮಾನಿಗಳಿಗೆ ಇಷ್ಟವಾಗಿದೆ.
ಸೋಲಿನ ಹತಾಶೆ ನಿಮ್ಮನ್ನ ಇನ್ನಷ್ಟು ಕಾಡದಿರಲಿ.
ಹೌದು… ರಾಜಕೀಯ, ನಾನು, ನನ್ನತನ, ನನ್ನ ವೈಯುಕ್ತಿಕ ಜೀವನ ಇವೆಲ್ಲದರ ವ್ಯತ್ಯಾಸ ತಿಳಿಯದ ಅವಿವೇಕಿಗಳಿಗೆ ಉತ್ತರವಿದು. pic.twitter.com/04RJWUFeoH— Nayana Jhawar /Nayana Motamma (@NayanaJhawar) May 20, 2023
ನಯನಾ ಅವರ ವಿಡಿಯೋಗೆ ಸಾಕಷ್ಟು ನೆಟ್ಟಿಗರು ಬೆಂಬಲ ಸೂಚಿಸಿದ್ದಾರೆ. ಕೈಲಾಗದವರ ಕೊನೆಯ ಅಸ್ತ್ರವೇ ಅಪಪ್ರಚಾರ ಮೇಡಂ, ನೀವು ನಿಮ್ಮ ಕಾರ್ಯ ಮುಂದುವರೆಸಿ, ಯಾವುದಕ್ಕೂ ತೆಲೆಕೆಡಿಸಿಕೊಳ್ಳಬೇಕಾದ ಅವಶ್ಯಕತೆ ಇಲ್ಲ. ನಿಮ್ಮಿಂದ ಸಮಾಜ ಸೇವೆ ಮುಂದುವರಿಯಲಿ. ನೀವು ಮಾಡುವ ಅಭಿವೃದ್ಧಿ ಕೆಲಸಗಳೇ ವಿರೋಧಿಗಳಿಗೆ ಉತ್ತರ ಎಂದು ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ.
Methods Ovariectomized female rats were divided into six groups C, controls; T, tamoxifen treatment; A, anastrozole treatment; CAT, combined anastrozole tamoxifen treatment; NAT, no treatment after tamoxifen; and AAT, anastrozole treatment after tamoxifen buy cialis non prescription A clinical model allowing simultaneous prediction of mortality at both 7 and 30 days identified acute heart failure patients with a low risk of events
buy ventolin over the counter nz: buy Ventolin – ventolin 4mg tablet
ventolin from mexico to usa
dapoxetina comprar online Therefore, treatment with ibuprofen tablets is not recommended in these patients with advanced renal disease