Home Karnataka State Politics Updates U R Sabhapati: ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಯು.ಆರ್.ಸಭಾಪತಿ ಇನ್ನಿಲ್ಲ!!

U R Sabhapati: ಕಾಂಗ್ರೆಸ್ ನಾಯಕ, ಮಾಜಿ ಶಾಸಕ ಯು.ಆರ್.ಸಭಾಪತಿ ಇನ್ನಿಲ್ಲ!!

U R Sabhapati
Image source- Hindustan Times kannada news

Hindu neighbor gifts plot of land

Hindu neighbour gifts land to Muslim journalist

U R sabhapati :ಉಡುಪಿ ಕ್ಷೇತ್ರದ ಮಾಜಿ ಶಾಸಕ(Ex MLA), ಕಾಂಗ್ರೆಸ್ ಮುಖಂಡ(Congress leader) ಯು.ಆರ್.ಸಭಾಪತಿ(U R sabhapati) ಅನಾರೋಗ್ಯದಿಂದ ವಿಧಿವಶರಾಗಿದ್ದಾರೆ.

ಹೌದು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಯು.ಆರ್.ಸಭಾಪತಿ ಚಿಕಿತ್ಸೆ ಫಲಕಾರಿಯಾಗದೇ ಇಂದುಉಡುಪಿಯ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಉಡುಪಿ(Udupi) ವಿಧಾನಸಭಾ ಕ್ಷೇತ್ರದಿಂದ ಎರಡು ಬಾರಿ ಶಾಸಕರಾಗಿದ್ದರು. 1994 ರಲ್ಲಿ ಕೆಸಿಪಿ ಮತ್ತು 1999 ರಲ್ಲಿ ಕಾಂಗ್ರೆಸ್ ನಿಂದ ಶಾಸಕರಾಗಿದ್ದರು. ಯುಆರ್ ಸಭಾಪತಿ ಅವರು ಮಾಜಿ ಸಿಎಂ ಬಂಗಾರಪ್ಪ (Former CM Bangarappa) ಅವರ ಅನುಯಾಯಿ ಆಗಿದ್ದರು. ಆಸ್ಕರ್ ಫರ್ನಾಂಡಿಸ್ ರಾಜಕೀಯ ಪ್ರವೇಶಕ್ಕೂ ಸಭಾಪತಿ ಪ್ರೇರಣೆಯಾಗಿದ್ದರು. ಯುಆರ್ ಸಭಾಪತಿ ರಾಷ್ಟ್ರೀಯ ಜನತಾದಳ, ಜಾತ್ಯಾತೀತ ಜನತಾದಳದೊಂದಿಗೂ ಗುರುತಿಸಿಕೊಂಡಿದ್ದರು. 80 -90ರ ದಶಕದ ಕರಾವಳಿಯ ಪ್ರಭಾವಿ ನಾಯಕರಾಗಿದ್ದರು.

ಇದನ್ನೂ ಓದಿ: Nripendra mishra: ಮೋದಿಗೂ ಇಷ್ಟವಿರಲಿಲ್ಲ 2000 ರೂ. ನೋಟು: ನೋಟ್ ಬ್ಯಾನ್ ಹಿಂದಿನ ಕುತೂಹಲ ಮಾಹಿತಿ ತೆರೆದಿಟ್ಟ ಪಿಎಂ ಕಾರ್ಯದರ್ಶಿ!