Farhana: ‘ದಿ ಕೇರಳ ಸ್ಟೋರಿ’ ಬೆನ್ನಲ್ಲೇ ವಿವಾದಕ್ಕೆ ಗುರಿಯಾಯ್ತು ತಮಿಳಿನ ಈ ಚಿತ್ರ! ಅಷ್ಟಕ್ಕೂ ಸಿನಿಮಾದಲ್ಲಿ ಏನಿದೆ ಗೊತ್ತಾ?

The Tamil film Farhana hit the controversy after The Kerala Story

Farhana :ದಿ ಕೇರಳ ಸ್ಟೋರಿ(The kerala Story) ಚಿತ್ರವೂ ವಿವಾದಗಳ ನಡುವೆಯೇ ಸಾಕಷ್ಟು ಸುದ್ದಿ ಮಾಡುತ್ತಿದೆ. ತಾನು ಬ್ಯಾನ್ ಆದ ಕಡೆಗಳಲ್ಲೂ ಭರ್ಜರಿ ಕಲೆಕ್ಷನ್ ಮಾಡುತ್ತಿದ್ದೆ. ಒಟ್ಟಿನಲ್ಲಿ ಹಲವಾರು ಸಂಕಷ್ಟಗಳ ನಡುವೇ ಕೋಟಿ ಕೋಟಿ ಬಾಚುತ್ತಿದೆ. ಈ ಚಿತ್ರದ ಬೆನ್ನಲ್ಲೇ ತಮಿಳಿನಲ್ಲೂ (Tamil) ಇಂಥದ್ದೇ ಮಾದರಿಯ ಚಿತ್ರವೊಂದು ರೆಡಿಯಾಗಿದ್ದು, ಈ ಚಿತ್ರ ಕೂಡ ವಿವಾದಕ್ಕೆ ಕಾರಣವಾಗಿದೆ. ಅಲ್ಲದೆ ಸಿನೆಮಾವನ್ನು ಬ್ಯಾನ್ ಮಾಡಬೇಕು ಎಂದು ಮುಸ್ಲಿಂ ಸಮುದಾಯ ಆಗ್ರಹಿಸಿದೆ.

 

ಹೌದು, ಕೇರಳ ಸ್ಟೋರಿಯು ಧೂಳು ಧೂಳೆಬ್ಬಿಸುತ್ತಿರುವಂತೆಯೇ, ಇದೀಗ ತಮಿಳಿನ ‘ಫರ್ಹಾನ್'(Farhana) ಚಲನಚಿತ್ರವೊಂದು ಇಸ್ಲಾಮಿಸ್ಟ್‌ಗಳ ಕಣ್ಣರಳಿಸಿ ಕೆಂಪಾಗಿಸಿದೆ. ಕೆಲವು ದಿನಗಳ ಹಿಂದಷ್ಟೇ ರಿಲೀಸ್ ಆಗಿರೋ ಈ ಚಿತ್ರವನ್ನು ಇಸ್ಲಾಮಿಸ್ಟ್ ಸಂಘಟನೆಯು ಈ ಸಿನಿಮಾವನ್ನು ನಿಷೇಧಿಸುವಂತೆ ಕರೆ ನೀಡಿದೆ. ಫರ್ಹಾನಾ (Farhana) ಸಿನಿಮಾ ಕೂಡ ಮುಸ್ಲಿಂ(Muslim) ವಿರೋಧ ಧೋರಣೆಯನ್ನು ತೋರುತ್ತಿದೆ. ಹಾಗಾಗಿ ಮೂಲಭೂತವಾದಿಗಳು ಚಿತ್ರವನ್ನು ವಿರೋಧಿಸುತ್ತಿದ್ದಾರೆ.

ಅಂದಹಾಗೆ ಇದು ಉಗ್ರರ ಕುರಿತಾದ ಸಿನಿಮಾವಲ್ಲ, ಮುಸ್ಲಿಂ ಮಹಿಳೆಯ ಮತ್ತೊಂದು ಮುಖವನ್ನು ಇದು ಅನಾವರಣ ಮಾಡಿದೆ. ಮುಸ್ಲಿಂ ಮಹಿಳೆಯೊಬ್ಬರು ಬಡತನದ ಕಾರಣದಿಂದಾಗಿ ಲೈಂಗಿಕತೆ ಕುರಿತಾಗಿ ಮಾತನಾಡುವ ಕಾಲ್ ಸೆಂಟರ್ ಸೇರಿಕೊಳ್ಳುತ್ತಾಳೆ. ಅಲ್ಲಿಂದ ಆಕೆ ವೃತ್ತಿಗೆ ಸಂಬಂಧಿಸಿದ ಸಂಕಟಗಳು ಏನು, ಬ್ಲಾಕ್ ಮೇಲರ್ ಒಬ್ಬನ ಕಿರುಕುಳದಿಂದ ಆಕೆ ಹೇಗೆ ಪಾರಾಗುತ್ತಾಳೆ ಹೀಗೆ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಈ ಕಥೆಗೆ ಇಂಡಿಯನ್ ನ್ಯಾಷನಲ್ ಲೀಗ್ ಮತ್ತು ಕೆಲ ಮುಸ್ಲಿಂ ಸಂಘಟನೆಗಳು ವಿರೋಧ ವ್ಯಕ್ತ ಪಡಿಸಿವೆ.

ಅಲ್ಲದೆ ಈ ಕುರಿತು ಪ್ರತಿಕ್ರಿಯಿಸಿರೋ ಚಿತ್ರತಂಡ “ನಾವು ಯಾರ ಮನಸ್ಸಿಗೂ ನೋವನ್ನುಂಟು ಮಾಡಿಲ್ಲ. ಉತ್ತಮವಾದ ಸಂದೇಶವನ್ನು ಹೊಂದಿರುವ ಸಿನಿಮಾ ಇದಾಗಿದೆ. ಯಾರ ವಿರುದ್ಧವೂ ನಾವು ಕಥೆಯನ್ನು ಹೇಳಿಲ್ಲ ಎಂದು ಹೇಳಿಕೊಂಡಿದೆ. ಆದರೆ ಈ ಬಗ್ಗೆ ಮುಸ್ಲಿಂ ಸಂಘಟನೆಗಳು ಮಾತ್ರ ಕಿವಿಗೊಟ್ಟಿಲ್ಲ. ಅಂದಹಾಗೆ ಈ ಸಿನಿಮಾವನ್ನು ನೆಲ್ಸನ್ ವೆಂಕಟೇಷನ್ ನಿರ್ದೇಶನ ಮಾಡಿದ್ದರೆ, ಐಶ್ವರ್ಯ ರಾಜೇಶ್ (Aishwarya Rajesh) ಮುಖ್ಯಪಾತ್ರ ನಿರ್ವಹಿಸಿದ್ದಾರೆ.

ಇದನ್ನೂ ಓದಿ:CM Siddaramaiah: ಸಿದ್ದುಗೆ ಸಿಎಂ ಗದ್ದುಗೆ, ಮುಳ್ಳಿನ ಹಾದಿಯೋ ಇಲ್ಲ ಹೂವಿನ ಹಾಸಿಗೆಯೋ? ಇಲ್ಲಿದೆ ನೋಡಿ ಸಿದ್ದರಾಮಯ್ಯ ಎದುರಿಸಬೇಕಾದ ಸವಾಲುಗಳು!

Leave A Reply

Your email address will not be published.