Nalin Kumar: ಪುತ್ತೂರು ಘಟನೆಗೆ ನಳಿನ್ ಕುಮಾರ್, ಪ್ರಭಾಕರ ಭಟ್ ನೇರ ಕಾರಣ -ಆರೋಪ

Nalin Kumar Prabhakar Bhatt is the direct cause of the incident

Nalin Kumar: ಮಂಗಳೂರು: ಪುತ್ತೂರಿನಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರ ಮೇಲೆ ಪೊಲೀಸರು ಹಲ್ಲೆ ನಡೆಸುವಂತಾಗಲು ನೇರ ಕಾರಣ ಕಲ್ಲಡ್ಕ ಪ್ರಭಾಕರ್ ಭಟ್ ಮತ್ತು ನಳಿನ್ ಕುಮಾರ್ (Nalin Kumar)  ಕಟೀಲ್ ಎಂದು ಮಾಜಿ ಸಚಿವ ಅಭಯ ಚಂದ್ರ ಜೈನ್ ಆರೋಪಿಸಿದ್ದಾರೆ.

 

ಡಾ. ಕಲ್ಲಡ್ಕ ಪ್ರಭಾಕರ ಭಟ್ ಅವರು ಘಟನೆಗೆ ಕಾಂಗ್ರೆಸ್ (
ಕಾರಣ ಅಂತಾ ಹೇಳುತ್ತಿದ್ದಾರೆ.ಸಿದ್ದರಾಮಯ್ಯ ಅವರು ನಾಳೆ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕಾರ ಮಾಡಬೇಕಿದೆ. ಇನ್ನಷ್ಟೇ ಆಡಳಿತ ಯಂತ್ರ ನಡೆಸಬೇಕಾಗಿದೆ.

ಆದರೆ ನಳಿನ್ ಕುಮಾರ್ ಕಟೀಲ್ ಅವರು ಲೋಕಸಭಾ ಸದಸ್ಯರಾಗಿ ಕಾರ್ಯಕರ್ತರಿಗೆ ಸಾಯುವ ಹಾಗೆ ಹೊಡೆಸುತ್ತಾರೆ ಅಂದರೆ ಅವರಿಗೆ ಮಾನವೀಯತೆ ಇದೆಯಾ ಎಂದು ಪ್ರಶ್ನಿಸಿ ಮಾಜಿ ಸಚಿವ ಅಭಯಚಂದ್ರ ಜೈನ್ ಆಕ್ರೋಶ ಹೊರ ಹಾಕಿದ್ದಾರೆ.

ಒಟ್ಟಿನಲ್ಲಿ ಈ ಘಟನೆಯಿಂದ ರಾಜಕೀಯ ಕೆಸರೆರಾಚಾಟದ ಜತೆಗೆ ವೈಷಮ್ಯ ಉಂಟಾಗದಿದ್ದರೆ ಒಳ್ಳೆಯದು.

Leave A Reply

Your email address will not be published.