Puttur: ಪೊಲೀಸ್ ದೌರ್ಜನ್ಯ , ಪುತ್ತೂರು ಡಿವೈಎಸ್ಪಿ, ಸಂಪ್ಯ ಎಸೈ ,ಸಿಬ್ಬಂದಿ ಹರ್ಷಿತ್ ವಿರುದ್ಧ ಪ್ರಕರಣ ದಾಖಲು ,ಎಸೈ ,ಸಿಬಂದಿ ಅಮಾನತು
Police brutality at Puttur
Puttur: ಪುತ್ತೂರು; ಪುತ್ತೂರಿನಲ್ಲಿ ಬ್ಯಾನರಿಗೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಏಳು ಮಂದಿ ಆರೋಪಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಿದ ವಿಚಾರದಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳ ಸಹಿತ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪುತ್ತೂರಿನಲ್ಲಿ ಬ್ಯಾನರ್ ಹಾಕಿದ ಆರೋಪಿಗಳಿಗೆ ಪೊಲೀಸ್ ದೌರ್ಜನ್ಯ ನಡೆಸಿದ ಕುರಿತು ‘ಹೊಸ ಕನ್ನಡ ‘ ಮೊದಲಿಗೆ ವರದಿ ಮಾಡಿ ಇಡೀ ರಾಜ್ಯದ ಗಮನ ಸೆಳೆದಿತ್ತು.
ಗಾಯಾಳು ನರಿಮೊಗರಿನ ಅವಿನಾಶ್ ನೀಡಿದ ದೂರಿನ ಮೇರೆಗೆ ಡಿವೈಎಸ್ಪಿ ಪುತ್ತೂರು,PSI ಪುತ್ತೂರು (Puttur) ಗ್ರಾಮಾಂತರ ಠಾಣೆ, ಹರ್ಷಿತ್PC, ಪುತ್ತೂರು ಗ್ರಾಮಾಂತರ ಠಾಣೆ
ರವರುಗಳ ವಿರುದ್ಧ ಪುತ್ತೂರು ನಗರ ಠಾಣೆ Cr no.39/23
u/s 323,324,506 r/w 34IPC ರಂತೆ ಪ್ರಕರಣ ದಾಖಲಾಗಿದೆ.
ಪ್ರಕರಣ ದ ತನಿಖೆಯನ್ನು DSP ಬಂಟ್ವಾಳ ರವರಿಗೆ ವಹಿಸಲಾಗಿದೆ.
ಹೆಚ್ಚುವರಿ ಪೊಲೀಸ್ ಅಧೀಕ್ಷಕರ ವಿಚಾರಣೆ ವರದಿ ಆಧಾರದ ಮೇಲ PSI ಪುತ್ತೂರು ಗ್ರಾಮಾಂತರ ಠಾಣೆ ಹಾಗೂ ಹರ್ಷಿತ್ PC ರವರುಗಳನ್ನು ಸೇವೆಯಿಂದ ಅಮಾನತ್ತು ಗೊಳಿಸಲಾಗಿದೆ ಹಾಗೂ DSP ಪುತ್ತೂರು ರವರ ವಿರುದ್ಧ ಸೂಕ್ತ ಇಲಾಖಾ ಶಿಸ್ತು ಕ್ರಮ ಕೈಗೊಳ್ಳಲು ವರದಿಯನ್ನು ಮೇಲಾಧಿಕಾರಿಗಳಿಗೆ ಸಲ್ಲಿಸಲಾಗುವುದು ಎಂದು ಎಸ್ಸಿ ತಿಳಿಸಿದ್ದಾರೆ.
ಘಟನೆಯ ಸಂಪೂರ್ಣ ವಿವರ
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಮತ್ತು ಡಿವಿ ಸದಾನಂದ ಗೌಡ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾಕಿ, ಶ್ರದ್ಧಾಂಜಲಿ ಬ್ಯಾನರ್ ಹಾಕಿದ ಏಳು ಮಂದಿಯನ್ನು ಪುತ್ತೂರು ಪೊಲೀಸರು ಬಂಧಿಸಿದ್ದರು. ಈಗ ಇವರಲ್ಲಿ ಕೆಲವರಿಗೆ ‘ ಪೋಲಿ ‘ ಸರು ಕಾನೂನು ಕೈಯಲ್ಲಿ ತೆಗೆದುಕೊಂಡು ಬೆತ್ತ ಹಿಡಿದು ಬಾರಿಸಿ ಬೆನ್ನು ಪುಡಿ ಮಾಡಿ ಮಾರಣಾಂತಿಕ ಹಲ್ಲೆ ನಡೆಸಿದ ಘಟನೆ ನಡೆದಿತ್ತು.
ಇವರಲ್ಲಿ ಹೆಚ್ಚಿನವರು ಬಿಜೆಪಿ ಕಾರ್ಯಕರ್ತರೇ ಆಗಿದ್ದು ಮೊನ್ನೆ ಬಿಜೆಪಿ ಪರವಾಗಿಯೇ ಚುನಾವಣೆಗೆ ದುಡಿದಿದ್ದರು. ಮೂವರು ಕಾರ್ಯಕರ್ತರು ಅರುಣ್ ಪುತ್ತಿಲ ಪರವಾಗಿ ಚುನಾವಣೆಯಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ. ಪುತ್ತೂರಿನಲ್ಲಿ ಬದಲಾದ ರಾಜಕೀಯ ಪರಿಸ್ಥಿತಿಗಳಲ್ಲಿ ಅವರು ಅರುಣ್ ಪುತ್ತಿಲ ಕಡೆಗೆ ನು ನಿಂತಿದ್ದರು. ಚುನಾವಣೆ ಸಮೀಪಿಸುತ್ತಿದ್ದಂತೆ ಅರುಣ್ ಪುತ್ತಲ ಅವರ ಜನಪ್ರಿಯತೆ ಟ್ರೆಂಡ್ ಹೆಚ್ಚಾಗಿತ್ತು. ಅದರ ಜೊತೆಗೆ ವ್ಯಾಪಕ ಮಟ್ಟದ ಬೆಟ್ಟಿಂಗ್ ನಡೆದಿತ್ತು. ಆದರೂ ಕೆಲ ಬಿಜೆಪಿಯ ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ಇನ್ನೂ ಬಿಜೆಪಿ ಮೂರನೇ ಸ್ಥಾನಕ್ಕೆ ತಳ್ಳಲ್ಪಡುತ್ತದೆ ಎನ್ನುವವರ ವಿರುದ್ಧ ಬೆಟ್ ಕಟ್ಟಿದ್ದರು. ಆದರೆ ಮೇ 13 ನೇ ತಾರೀಕು ಫಲಿತಾಂಶ ಬಂದು ಬಿಜೆಪಿ ಮೂರನೇ ಸ್ಥಾನಕ್ಕೆ ನೂಕಲ್ಪಟ್ಟಿತ್ತು. ಅವತ್ತು ಸಾಮಾನ್ಯ ಬಿಜೆಪಿ ಕಾರ್ಯಕರ್ತರೇ ಸಾವಿರಾರು ರೂಪಾಯಿ ಬೆಟ್ಟಿಂಗ್ ನಲ್ಲಿ ಕಳೆದುಕೊಂಡಿದ್ದರು.
ಇದರಿಂದ ಕೋಪಗೊಂಡ ಕಾರ್ಯಕರ್ತರುಗಳು ಇದಕ್ಕೆ ಕಾರಣೀಭೂತರು ಎಂದು ಡಿವಿ ಸದಾನಂದ ಗೌಡ ಮತ್ತು ನಳಿನ್ ಕುಮಾರ್ ಕಟೀಲ್ ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿ ಶ್ರದ್ಧಾಂಜಲಿ ಕೋರಿದ ಅಳವಡಿಸಿದ್ದರು. ಪುತ್ತೂರಿನಲ್ಲಿ ಹೀನಾಯ ಸೋಲಿಗೆ ಇವರಿಬ್ಬರೇ ಕಾರಣ ಎಂದು ಸಿಟ್ಟಿನಲ್ಲಿ ಕಾರ್ಯಕರ್ತರೇ ಸೇರಿಕೊಂಡು ಭಾನುವಾರ ರಾತ್ರಿ ಪುತ್ತೂರು ಬಸ್ ಸ್ಟ್ಯಾಂಡಿನ ಹತ್ತಿರ ಬ್ಯಾನರ್ ಹಾಕಿದ್ದರು. ಬ್ಯಾನರ್ ಫೋಟೋ ವೈರಲ್ ಆಗಿ ಬಿಜೆಪಿ ನಾಯಕರಿಗೆ ಇರಿಸು ಮುರಿಸು ಆಗುತ್ತಲೇ ಪೊಲೀಸರಿಗೆ ಒತ್ತಡ ಬಂದಿತ್ತು. ಆರೋಪಿಗಳನ್ನು ಕೂಡಲೇ ಬಂಧಿಸಿ, ಬೆಂಡೆತ್ತಬೇಕು ಎಂದು ಮೇಲಿನಿಂದ ಒತ್ತಡ ಬಂದಿತ್ತು.
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಆರೋಪಿಗಳನ್ನು ಬಂಧಿಸಿ ಮನಸೋ ಇಚ್ಛೆ ದನಕ್ಕೆ ಬಡಿಯೋ ಥರ ಬಡಿದಿದ್ದಾರೆ. ಎಷ್ಟು ಹೀನಾಯವಾಗಿ ಹೊಡೆದಿದ್ದಾರೆ ಎಂದರೆ, ಆರೋಪಿಗಳು ಸದ್ಯಕ್ಕೆ ರಿಕವರಿ ಆಗೋದು ಕಷ್ಟ. ಹಿರಿಯ ಪೊಲೀಸ್ ಅಧಿಕಾರಿಯೇ ಮುಂದೆ ನಿಂತು ಕೈಗೆ ಕಾನೂನು ತೆಗೆದುಕೊಂಡಿದ್ದಾರೆ. ಸ್ವಲ್ಪ ಹೆಚ್ಚು ಕಮ್ಮಿ ಆಗಿದ್ದರೆ ಸ್ಟೇಷನ್ ನಲ್ಲಿ ಕಾರ್ಯಕರ್ತರ ಹತ್ಯೆ ನಡೆದು ಹೋಗುತ್ತಿತ್ತು ! ಆ ಮಟ್ಟಿಗೆ ಹಿಂಸೆ ನಡೆದುಹೋಗಿದೆ.
ವಿಷಯ ತಿಳಿದ ಅರುಣ್ ಪುತ್ತಿಲ ಅವರು ಸೋಮವಾರ ರಾತ್ರಿ ಗಂಟೆ ವೇಳೆಗೆ ಠಾಣೆಗೆ ತೆರಳಿ ಏಳು ಮಂದಿಯನ್ನೂ ಬಿಡುಗಡೆ ಮಾಡಿಸಿದ್ದಾರೆ. ಆರೋಪಿಗಳನ್ನು ಮುಚ್ಚಳಿಕೆ ಬರೆಸಿ, ಪೊಲೀಸರು ಕಳಿಸಿ ಕೊಟ್ಟಿದ್ದಾರೆ.
ಇಲ್ಲಿ ಮುಖ್ಯವಾದ ಪ್ರಶ್ನೆ ಏನೆಂದರೆ, ಪೊಲೀಸರಿಗೆ ಈ ರೀತಿ ಹೊಡೆಯಲು, ಕಾನೂನು ಕೈಗೆ ತೆಗೆದುಕೊಳ್ಳಲು ಅಧಿಕಾರ ನೀಡಿದವರು ಯಾರು ? ಕಾರ್ಯಕರ್ತರು ತಪ್ಪು ಮಾಡಿದರೆ ಅದನ್ನು ಕಾನೂನಾತ್ಮಕವಾಗಿ ಶಿಕ್ಷಿಸಲು ಅವಕಾಶವಿದೆ. ಆದರೆ ಬಿಜೆಪಿ ಕಾರ್ಯಕರ್ತರನ್ನು ಬಡಿದು ಮಲಗಿಸಲಾಗಿದೆ. ಮರ್ಯಾದೆಗೆ ಅಂಜಿ ಆ ಎಲ್ಲಾ ಹುಡುಗರೂ ಮನೆಯಲ್ಲೇ ಕೂತಿದ್ದಾರೆ. ಅವರೆಲ್ಲರ ಆರೋಗ್ಯ ಕ್ಷೀಣಿಸುತ್ತಿದ್ದು, ಇದೀಗ ಆಸ್ಪತ್ರೆಗೆ ದಾಖಲಾಗುವುದು ನಿಶ್ಚಿತ ಎನ್ನಲಾಗುತ್ತಿತ್ತು. ನಂತರ ನಾವು (ಹೊಸ ಕನ್ನಡ) ಈ ಅಮಾಮಶ ಘಟನೆಯನ್ನು ಖಂಡಿಸಿ ವಿಸ್ತೃತ ವರದಿ ಪ್ರಕಟಿಸಿದ್ದೆವು. ತಕ್ಷಣ ಆರೋಪಿಗಳ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಬೇಕೆಂದು ಪತ್ರಿಕೆ ಒತ್ತಾಯಿಸಿತ್ತು. ಅದರ ಫಲಶ್ರುತಿಯಾಗಿ ಈಗ ಜಿಲ್ಲಾ ಸೂಪರ್ಡೆಂಟ್ ಆಫ್ ಪೊಲೀಸ್ ಅವರು ಸೂಕ್ತ ಕ್ರಮ ಕೈಗೊಂಡಿದ್ದಾರೆ. ಮಾರಣಾಂತಿಕ ಹಲ್ಲೆ ನಡೆಸಿದ ಪೊಲೀಸ್ ತಂಡವನ್ನು ಸಸ್ಪೆಂಡ್ ಮಾಡಿ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ.
ಇದನ್ನು ಓದಿ: Ashok Rai: ಪುತ್ತೂರು : ಪೊಲೀಸ್ ದೌರ್ಜನ್ಯ ಆರೋಪ ,ತಪ್ಪಿತಸ್ಥರನ್ನು ಸಂಜೆಯೊಳಗೆ ಅಮಾನತು ಮಾಡಲು ಸೂಚನೆ -ಅಶೋಕ್ ರೈ